ಮತ್ತೆ 16 ಯೂಟ್ಯೂಬ್ ಚಾನೆಲ್ ಬ್ಲಾಕ್
Team Udayavani, Apr 26, 2022, 7:25 AM IST
ಹೊಸದಿಲ್ಲಿ: ಸುಳ್ಳು ಮಾಹಿತಿ ಹಾಗೂ ಭಾರತ ವಿರೋಧಿ ಕಂಟೆಂಟ್ಗಳನ್ನು ಪ್ರಸಾರ ಮಾಡುವ ಯೂಟ್ಯೂಬ್ ಚಾನೆಲ್ಗಳ ವಿರುದ್ಧದ ಸಮರ ಮುಂದುವರಿದಿದೆ.
ಕೇಂದ್ರ ಸರಕಾರವು ಸೋಮವಾರ ಮತ್ತೆ ಪಾಕಿಸ್ಥಾನ ದಿಂದ ಕಾರ್ಯಾಚರಿಸುತ್ತಿದ್ದ 6 ಸೇರಿದಂತೆ ಒಟ್ಟು 16 ಯೂಟ್ಯೂಬ್ ಚಾನೆಲ್ಗಳನ್ನು ಬ್ಲಾಕ್ ಮಾಡಿದೆ.
ಭಾರತದ ರಾಷ್ಟ್ರೀಯ ಭದ್ರತೆ, ವಿದೇ ಶಾಂಗ ನೀತಿ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕುರಿತು ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.
ಬ್ಲಾಕ್ ಆಗಿರುವ ಚಾನೆಲ್ಗಳು ಹಾಗೂ ಫೇಸ್ಬುಕ್ ಖಾತೆಗಳ ಸರಾಸರಿ ವೀಕ್ಷಕರ ಸಂಖ್ಯೆ ಸುಮಾರು 68 ಕೋಟಿ ಇತ್ತು ಎಂದೂ ಹೇಳಿದೆ.