ಸಿಜೆಐಗೆ ಕ್ಲೀನ್ಚಿಟ್ ಖಂಡಿಸಿ ಪ್ರತಿಭಟನೆ
Team Udayavani, May 8, 2019, 5:32 AM IST
ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸಿದ ಸಿಜೆಐ ರಂಜನ್ ಗೊಗೋಯ್ ಅವರಿಗೆ ಸುಪ್ರೀಂ ಕೋರ್ಟ್ ಆಂತರಿಕ ಸಮಿತಿ ಕ್ಲೀನ್ಚಿಟ್ ನೀಡಿದ್ದನ್ನು ಖಂಡಿಸಿ ಮಂಗಳವಾರ ಹೊಸದಿಲ್ಲಿಯಲ್ಲಿ ಮಹಿಳಾ ನ್ಯಾಯ ವಾದಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಸುಪ್ರೀಂ ಆವರಣದಲ್ಲೇ ಈ ಪ್ರತಿಭಟನೆ ನಡೆದಿದ್ದು, ಸುಮಾರು 55 ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಪ್ರೀಂನ ಮಾಜಿ ಮಹಿಳಾ ಉದ್ಯೋಗಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿ ತನಿಖಾ ಸಮಿತಿಯು ಸಿಜೆಐಗೆ ಸೋಮವಾರ ಕ್ಲೀನ್ಚಿಟ್ ನೀಡಿತ್ತು. ಇದನ್ನು ವಿರೋಧಿಸಿದ ಮಹಿಳೆಯರು, ‘ನೀವೆಷ್ಟೇ ದೊಡ್ಡವ ರಾದರೂ, ಕಾನೂನು ನಿಮಗಿಂತ ದೊಡ್ಡದು’ ಎಂಬ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು. ಇದೇ ವೇಳೆ, ಸಿಜೆ ಐಗೆ ಕ್ಲೀನ್ ಚಿಟ್ ನೀಡಿರುವ ತನಿಖಾ ಸಮಿತಿ ವರದಿ ಪ್ರತಿಯನ್ನು ತಮಗೆ ನೀಡಬೇಕು ಎಂದು ದೂರುದಾರ ಮಹಿ ಳೆಯು ಮಂಗಳವಾರ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ