12ರ ಬಾಲಕಿಗೆ ನೀಲಿ ಚಿತ್ರ ತೋರಿಸಿ ರೇಪ್‌ ಮಾಡಿದ ಮೌಲ್ವಿ!

Team Udayavani, Jan 19, 2018, 12:27 PM IST

ಮುಂಬಯಿ: ಕಾಮಾಂದ ಮೌಲ್ವಿಯೊಬ್ಬ 12 ವರ್ಷ ಪ್ರಾಯದ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಬರ್ಬರವಾಗಿ ಅತ್ಯಾಚಾರ ಎಸಗಿದ ಹೇಯ ಘಟನೆ ನಾಂದೇಡ್‌ನ‌ಮಜಲ್‌ಗಾಂವ್‌ನಲ್ಲಿ  ನಡೆದಿದೆ.

ಮೌಲ್ವಿ ಸಬೇರ್‌ ಫಾರೂಕಿ ಎಂಬಾತ ಕೃತ್ಯ ಎಸಗಿ ದೂರು ದಾಖಲಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. 

ದುರಂತವೆಂದರೆ ಘಟನೆಯ ಕುರಿತಾಗಿ  ಪೊಲೀಸರಿಗೆ ದೂರು ನೀಡದಂತೆ  ಗ್ರಾಮದ ಮೂವರು ರಾಜಕಾರಣಿಗಲು ಸಂತ್ರಸ್ತೆಯ ತಾಯಿಗೆ ಒತ್ತಡ ಹೇರಿದ್ದಾರೆ.

ಬೆದರಿಕೆ,ಅಡೆ ತಡೆಗಳ ನಡುವೆಯೂ ಸಂತ್ರಸ್ತ ಬಾಲಕಿಯ ತಾಯಿ  ಗುರುವಾರ ಇಟ್ವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ನಾಂದೇಡ್‌ನ‌ ಎನ್‌ಸಿಪಿ ನಾಯಕ ನಾವಾಬ್‌ ಪಟೇಲ್‌, ಎಐಎಐಎಂ ನ ನಾಯಕ ಇಬ್ರಿಷ್‌ ಭಗವಾನ್‌ ಮತ್ತು ಖಲೀಲ್‌ ಪಟೇಲ್‌ ಎನ್ನುವವರನ್ನು ಒತ್ತಡ ಹೇರಿದ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಆರೋಪಿ ಮೌಲ್ವಿ ಇನ್ನೋರ್ವ ಬಾಲಕಿಯ ಮೇಲೂ ದೌರ್ಜನ್ಯ ಎಸಗಿದ್ದ ಎನ್ನುವುದು ಬೆಳಕಿಗೆ ಬಂದಿದೆ. 

ಪ್ರಕರಣವನ್ನು ಡೀಲ್‌ ನಲ್ಲಿ ಮುಗಿಸಲು ಮುಂದಾಗಿದ್ದಮೌಲ್ವಿ ಸಂತ್ರಸ್ತೆಯ ತಾಯಿಯೊಂದಿಗೆ ಮಾತುಕತೆಗೆ ಆಗಮಿಸಿದ್ದ ವೇಳೆ ಸ್ಥಳೀಯರಿಂದ ಥಳಿತಕ್ಕೊಳಗಾಗಿದ್ದ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ