ಸುಮ್ಮನಿದ್ದ ಹಾವಿಗೆ ಗುಂಡು ಹೊಡೆಯಲು ಹೋಗಿ ತನ್ನ ಜೀವವನ್ನೇ ಅಪಾಯಕ್ಕೆ ಸಿಲುಕಿಸಿಕೊಂಡ…
Team Udayavani, Dec 29, 2022, 4:22 PM IST
ನವದೆಹಲಿ: ಹಾವಿನ ದ್ವೇಷ ಹನ್ನೆರಡು ವರುಷ… ಎನ್ನುವ ಮಾತಿದೆ ಆದರೆ ಇಲ್ಲೊಂದು ವಿಡಿಯೋದಲ್ಲಿ ಹಾವು ತನಗೆ ಅನ್ಯಾಯ ಮಾಡಿದ ವ್ಯಕ್ತಿಯನ್ನು ಅದೇ ಕ್ಷಣ ಶಿಕ್ಷಿಸುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಮ್ಮನೆ ಅದರ ಪಾಡಿಗೆ ಇದ್ದ ಹಾವನ್ನು ಕೆಣಕಲು ಹೋಗಿ ವ್ಯಕ್ತಿಯೊಬ್ಬ ತನ್ನ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಂಡ ವಿಡಿಯೋವೊಂದು ವೈರಲ್ ಆಗುತ್ತಿದೆ.
ಅಂದಹಾಗೆ ಟ್ವಿಟರ್ ನಲ್ಲಿ ಅಪ್ ಲೋಡ್ ಆದ ವಿಡಿಯೋದಲ್ಲಿ ಕಾಣುವಂತೆ, ಕಾರಿನಲ್ಲಿ ಕುಳಿತ್ತಿದ್ದ ವ್ಯಕ್ತಿಯೊಬ್ಬ ತನ್ನ ಕೈಯಲ್ಲಿದ್ದ ಬಂದೂಕಿನಿಂದ ನಾಗರ ಹಾವಿನ ಮೇಲೆ ಗುಂಡಿನ ದಾಳಿ ನಡೆಸುತ್ತಾನೆ ಆದರೆ ಹಾವಿನ ಅದೃಷ್ಟ ಚೆನ್ನಾಗಿತ್ತು ನೋಡಿ, ಎರಡು ಸುತ್ತು ಗುಂಡು ಹೊಡೆದರೂ ಹಾವಿಗೆ ಮಾತ್ರ ಗುಂಡು ತಾಗಲೇ ಇಲ್ಲ, ಆದರೆ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡ ನಾಗರ ಹಾವು ಮರು ಕ್ಷಣವೇ ವ್ಯಕ್ತಿಯ ಮೇಲೆ ದಾಳಿ ಮಾಡಲು ಕಾರಿನತ್ತ ಹೋಗುತ್ತಿರುವ ವಿಡಿಯೋ ಕಾಣಬಹುದು ಹಾವು ತನ್ನತ್ತ ಬರುತ್ತಿರುವ ವೇಳೆ ವ್ಯಕ್ತಿ ಗಾಬರಿಯಿಂದ ಕಿರುಚಾಡುತ್ತಿರುವುದು ಗೊತ್ತಾಗಿದೆ ಆದರೆ ಬಳಿಕ ಏನಾಗಿದೆ ಎಂಬುದು ಮಾತ್ರ ಗೊತ್ತಾಗಲಿಲ್ಲ. ಅದರ ಪಾಡಿಗೆ ಇದ್ದ ಹಾವನ್ನು ಕೆಣಕಲು ಹೋಗಿ ತಾನು ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ತಂದೊಡ್ಡಿದ ವ್ಯಕ್ತಿಗೆ ಸದ್ಯ ತಾನು ಮಾಡಿದ ತಪ್ಪಿನ ಅರಿವಾಗಿರಬೇಕು.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ನಾನಾ ತರದ ಕಾಮೆಂಟ್ ಗಳನ್ನು ಮಾಡಿದ್ದಾರೆ.
Don’t bring a gun to a cobra fight! 🐍 pic.twitter.com/qGshAWdjHu
— Instant Karma (@Instantregretss) December 16, 2022