ಮದುವೆಗೆ ಸಿಕ್ಕಿತು ಈರುಳ್ಳಿ ಉಡುಗೊರೆ

Team Udayavani, Dec 14, 2019, 5:30 PM IST

ಚೆನ್ನೈ: ಮದುವೆ ಅಂದರೆ ವಿಶಿಷ್ಟ ರೀತಿಯ ಉಡುಗೊರೆಗಳನ್ನು ಕೊಡುವವರಿದ್ದಾರೆ. ಆದರೆ ಈ ಮದುವೆಯಲ್ಲಿ ಮದುಮಕ್ಕಳಿಗೆ ಸಿಕ್ಕಿದ್ದೇ ಯಾರೂ ಊಹಿಸದ ಉಡುಗೊರೆ. ಒಂದು ಲೆಕ್ಕದಲ್ಲಿ ಈಗಿನ ಮಟ್ಟಿಗೆ ಇದು ದುಬಾರಿ ಉಡುಗೊರೆಯೂ ಹೌದು.

ತಮಿಳುನಾಡಿನ ಕಡಲೊರ್‌ನ ಮಂಜಕುಪ್ಪಮ್‌ನ ನವದಂಪತಿಗೆ ಈರುಳ್ಳಿ ಉಡುಗೊರೆ ಸಿಕ್ಕಿದೆ. ನಾಲ್ವರು ಸ್ನೇಹಿತರು 2.5 ಕೆ.ಜಿ ಈರುಳ್ಳಿಯನ್ನು ನೀಡಿದ್ದಾರೆ. ಇದನ್ನು ಮದುವೆಯಲ್ಲಿ ಭಾಗಿಯಾದವರು ಫೋಟೋ ತೆಗೆದಿದ್ದು, ಟ್ವಿಟರ್‌ನಲ್ಲಿ ಸುದ್ದಿ ಹರಿಯಬಿಟ್ಟಿದ್ದಾರೆ. ಕೂಡಲೇ ಅದು ವೈರಲ್‌ ಆಗಿದೆ. ಕಡಲೂರ್‌ನಲ್ಲಿ ಈರುಳ್ಳಿ ಕೆ.ಜಿ.ಗೆ 195 ರೂ.ಗಳಂತೆ ಮಾರಾಟವಾಗುತ್ತಿತ್ತು. ನಾವು ವಿವಾಹಕ್ಕೆ ಗಿಫ್ಟ್ ಕೊಡಲು 500 ರೂ. ಕೊಟ್ಟು ಈರುಳ್ಳಿ ಖರೀದಿಸಿದ್ದೇವೆ ಎಂದು ಸ್ನೇಹಿತರು ಹೇಳಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಕೆ.ಜಿ.ಗೆ 150ರಿಂದ 160 ರೂ. ದರವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ