ಇಂಗ್ಲಿಷ್‌ನಲ್ಲಿ ಮಾತನಾಡಿದ ವ್ಯಕ್ತಿಗೆ ಐವರಿಂದ ಗಂಭೀರ ಹಲ್ಲೆ
Team Udayavani, Sep 12, 2017, 11:55 AM IST
ಹೊಸದಿಲ್ಲಿ : ತನ್ನ ಸ್ನೇಹಿತನೊಂದಿಗೆ ನಿರರ್ಗಳ ಇಂಗ್ಲಿಷ್‌ನಲ್ಲಿ ಮಾತನಾಡಿದ ಕಾರಣಕ್ಕೆ 22ರ ಹರೆಯದ ವ್ಯಕ್ತಿಯೊಬ್ಬನನ್ನು ಐವರು ಕೂಡಿಕೊಂಡು ಹಿಗ್ಗಾಮುಗ್ಗಾ ಹೊಡೆದು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ದಿಲ್ಲಿಯಲ್ಲಿ ನಡೆದಿದೆ.
ದಿಲ್ಲಿಯ ಲುಟೆನ್ಸ್‌ನಲ್ಲಿನ ಪಂಚತಾರಾ ಹೊಟೇಲೊಂದರ ಸಮೀಪ ತನ್ನ ಸ್ನೇಹಿತನನ್ನು ವ್ಯಕ್ತಿಯೊಬ್ಬ ಇಳಿಸಿದ ಸಂದರ್ಭದಲ್ಲಿ ಆತ ನಿರರ್ಗಳವಾಗಿ ತನ್ನ ಸ್ನೇಹಿತನ ಜತೆಗೆ ಇಂಗ್ಲಿಷ್‌ನಲ್ಲಿ ಮಾತನಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಆತನ ಮೇಲೆ ಐವರು ಸೇರಿ ಗಂಭೀರ ಪ್ರಮಾಣದ ಹಲ್ಲೆ ನಡೆಸಿದರು.
ಘಟನೆಗೆ ಸಂಬಂಧಿಸಿ ಪೊಲೀಸರು ಐವರಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ತಿಳಿಸಿರುವ ಪ್ರಕಾರ ನೋಯ್ಡಾ ನಿವಾಸಿಯಾಗಿರುವ ವರುಣ್ ಗುಲಾಟಿ ಎಂಬಾತ ತನ್ನ ಸ್ನೇಹಿತ ಅಮನ್ ಎಂಬಾತನನ್ನು ಆತನ ಸ್ನೇಹಿತ ದಕ್ಷ ಎಂಬಾತನ ಕಾರಿನಲ್ಲಿ ದಿಲ್ಲಿಯ ಕನ್ಹಾಟ್ ಪ್ಲೇಸ್‌ನಲ್ಲಿರುವ ಪಂಚತಾರಾ ಹೊಟೇಲಿಗೆ ಶನಿವಾರ ನಸುಕಿನ ವೇಳೆ ಡ್ರಾಪ್ ಮಾಡಲು ಬಂದಿದ್ದ.
ಗುಲಾಟಿ ಪಂಚತಾರಾ ಹೊಟೇಲಿನ ಕಡೆಗೆ, ದಕ್‌ಶ್ ಗೆ ಗುಡ್ ಬೈ ಹೇಳಿದ ಬಳಿಕ, ಸಾಗುತ್ತಿದ್ದಂತೆಯೇ ಕುಡಿದ ಅಮಲಿನಲ್ಲಿದ್ದ ಐವರು ವ್ಯಕ್ತಿಗಳು ಗುಲಾಟಿಯನ್ನು ಸುತ್ತುವರಿದರು. ನೀನ್ಯಾಕೆ ಆ ಪಾಟಿ ಇಂಗ್ಲಿಷ್‌ನಲ್ಲಿ ಮಾತನಾಡೋದು ಎಂದವರು ದಬಾಯಿಸಿದರು. ಆಗ ಗುಲಾಟಿ ಮತ್ತು ಹಲ್ಲೆಕೋರರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯಿತು. ಅಂತಿಮವಾಗಿ ಆ ಐವರು ಗುಲಾಟಿಯನ್ನು ಯದ್ವಾತದ್ವಾ ಹೊಡೆದು ಗಂಭೀರವಾಗಿ ಗಾಯಗೊಳಿಸಿದರು.
ಘಟನೆಯ ಬಳಿಕ ಹಲ್ಲೆಕೋರರು ವಾಹನವೊಂದರಲ್ಲಿ ಪರಾರಿಯಾದರು. ಗಾಯಗೊಂಡಿದ್ದ ಗುಲಾಟಿ ಆ ಸ್ಥಿತಿಯಲ್ಲೂ ಕಾರಿನ ನಂಬರ್ ನೋಟ್ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದ. ನಂಬರ್ ಪ್ಲೇಟ್ ಆಧಾರದಲ್ಲಿ ಪೊಲೀಸಲು ಐವರು ಹಲ್ಲೆಕೋರರಲ್ಲಿ ಮೂವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಉಳಿದಿಬ್ಬರಿಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?