ಲಾಲು ಪ್ರಸಾದ್‌ ಯಾದವ್‌ಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್‌ ಹೈಕೋರ್ಟ್‌

Team Udayavani, Jul 12, 2019, 4:50 PM IST

ರಾಂಚಿ : ದೇವಗಢ ಟ್ರೆಶರಿಗೆ ಸಂಬಂಧಿಸಿದ ಬಹುಕೋಟಿ ಮೇವು ಹಗರಣದಲ್ಲಿ ಜಾರ್ಖಂಡ್‌ ಹೈಕೋರ್ಟ್‌ ಇಂದು ಶುಕ್ರವಾರ ಆರ್‌ಜೆಡಿ ನಾಯಕ ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ಗೆ ಜಾಮೀನು ಮಂಜೂರು ಮಾಡಿತು.

ಲಾಲು ಅವರು ಈ ಮೊದಲು ಸಲ್ಲಿಸಿದ್ದ ಹಲವಾರು ಜಾಮೀನು ಕೋರಿಕೆ ಅರ್ಜಿ  ತಿರಸ್ಕೃತವಾಗಿದ್ದವು. ಸುಪ್ರೀಂ ಕೋರ್ಟ್‌ ಕೂಡ ಈ ವರ್ಷ ಎಪ್ರಿಲ್‌ ನಲ್ಲಿ ಲಾಲು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಕಳೆದ ಜೂನ್‌ 13ರಂದು ಲಾಲು ಅವರು ಜಾರ್ಖಂಡ್‌ ಹೈಕೋರ್ಟಿಗೆ ಜಾಮೀನು ಕೋರಿಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಅಪರೇಶ್‌ ಸಿಂಗ್‌ ಅವರು ಜುಲೈ 12ರಂದು ಕೋರ್ಟಿಗೆ ಹಾಜರಾಗುವಂತೆ ಲಾಲು ಗೆ ಸೂಚಿಸಿದ್ದರು.

 

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ