ಇಸ್ರೋದಿಂದ ಕೃತಕ ಸ್ಮಾರ್ಟ್ ಕಾಲುಗಳ ಅಭಿವೃದ್ಧಿ: ಶೀಘ್ರವೇ ಮಾರುಕಟ್ಟೆಗೆ
Team Udayavani, Sep 24, 2022, 7:45 AM IST
ನವದೆಹಲಿ: ಬಾಹ್ಯಾಕಾಶ ತಂತ್ರಜ್ಞಾನ ಬಳಸಿ ಕೃತಕ ಸ್ಮಾರ್ಟ್ ಕಾಲುಗಳನ್ನು ಇಸ್ರೋ ಅಭಿವೃದ್ಧಿಪಡಿಸಿದೆ. ಸಾಮಾನ್ಯ ಕೃತಕ ಕಾಲುಗಳಿಗೆ ಹೋಲಿಸಿದರೆ ಮೈಕ್ರೋಪ್ರೊಸೆಸರ್ ನಿಯಂತ್ರಿತ ಕೃತಕ ಕಾಲುಗಳು ದಿವ್ಯಾಂಗರಿಗೆ ವಿಸ್ತೃತ ಸಾಮರ್ಥ್ಯವನ್ನು ಒದಗಿಸಲಿದೆ. ಕನಿಷ್ಠ ಬೆಂಬಲದೊಂದಿಗೆ ದಿವ್ಯಾಂಗರು ನಡೆದಾಡಲು ಇದು ಸಹಕಾರಿಯಾಗಿದೆ.
ಇದನ್ನು ಶೀಘ್ರ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಇಸ್ರೋ ಯೋಜಿಸುತ್ತಿದೆ. ಇತರೆ ಮೈಕ್ರೋಚಿಪ್ ಹೊಂದಿರುವ ಕೃತಕಕಾಲುಗಳ ದರಕ್ಕೆ ಹೋಲಿಸಿದರೆ ಇದರ ದರ 10 ಪಟ್ಟು ಅಗ್ಗವಾಗಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಮೈಕ್ರೋಚಿಪ್ ಹೊಂದಿರುವ ಕೃತಕಕಾಲುಗಳ ದರ 10 ಲಕ್ಷ ರೂ.ಗಳಿಂದ 60 ಲಕ್ಷ ರೂ. ವರೆಗಿದೆ. ಇಸ್ರೋ ಅಭಿವೃದ್ಧಿಪಡಿಸಿರುವ ಕೃತಕ ಸ್ಮಾರ್ಟ್ ಕಾಲುಗಳು ಅಂದಾಜು 4 ರಿಂದ 5 ಲಕ್ಷ ರೂ. ದರದಲ್ಲಿ ಸಿಗಲಿದೆ.
ವಿಕ್ರಂ ಸಾರಾಬಾಯ್ ಸ್ಪೇಸ್ ಸೆಂಟರ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಲೋಕೋಮೋಟರ್ ಡಿಸೆಬಿಲಿಟಿಸ್, ಪಂಡಿತ್ ದೀನ್ ದಾಯಾಳ್ ಉಪಾಧ್ಯಯ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಪರ್ಸನ್ಸ್ ವಿಥ್ ಫಿಸಿಕಲ್ ಡಿಸೆಬಿಲಿಟಿಸ್ ಸಹಯೋಗದಲ್ಲಿ ಇಸ್ರೋ ಕೃತಕ ಸ್ಮಾರ್ಟ್ ಕಾಲುಗಳನ್ನು ಅಭಿವೃದ್ಧಿಪಡಿಸಿದೆ.