ಕೋವಿಡ್ 19 ಅಟ್ಟಹಾಸ: ಕ್ವಾರಂಟೈನ್, ಐಸೋಲೇಶನ್, ಲಾಕ್ ಡೌನ್ ಇವುಗಳ ನಡುವಿನ ವ್ಯತ್ಯಾಸ ಏನು?


Team Udayavani, Mar 24, 2020, 11:41 AM IST

ಕೋವಿಡ್ 19 ಅಟ್ಟಹಾಸ: ಕ್ವಾರಂಟೈನ್, ಐಸೋಲೇಶನ್, ಲಾಕ್ ಡೌನ್ ಇವುಗಳ ನಡುವಿನ ವ್ಯತ್ಯಾಸ ಏನು?

Representative Image

ನವದೆಹಲಿ:ಕೋವಿಡ್ 19 ಮಹಾಮಾರಿ ಅಟ್ಟಹಾಸ ಮುಂದುವರಿಯುವ ಮೂಲಕ ಭಾರತ ಸೇರಿದಂತೆ ಜಗತ್ತಿನ ನೂರಕ್ಕೂ ಅಧಿಕ ದೇಶಗಳು ತತ್ತರಿಸಿ ಹೋಗಿವೆ. ಏತನ್ಮಧ್ಯೆ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಶಬ್ದಗಳನ್ನು ಗಮನಿಸಿದ್ದೀರಿ.

ಜಗತ್ತಿನಾದ್ಯಂತ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಶಬ್ದಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವುದು ಮುಖ್ಯ. ಯಾಕೆಂದರೆ ಇದು ಜೀವನ ಮತ್ತು ಭವಿಷ್ಯ ಸಾವಿನ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ.

ಇದೀಗ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವಂತೆಯೇ ಐಸೋಲೇಶನ್, ಕ್ವಾರಂಟೈನ್, ಲಾಕ್ ಡೌನ್, ಸೋಶಿಯಲ್ ಡಿಸ್ಟೆನ್ಸ್ ಶಬ್ದದ ಬಳಕೆಗೆ ಹೆಚ್ಚಾಗುತ್ತಿದೆ. ಆದರೆ ಈ ಎಲ್ಲಾ ಶಬ್ದಗಳ ಅರ್ಥ ತುಂಬಾ ಭಿನ್ನವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಕ್ವಾರಂಟೈನ್, ಐಸೋಲೇಶನ್, ಲಾಕ್ ಡೌನ್ ಹಾಗೂ ಸೋಶಿಯಲ್ ಡಿಸ್ಟ್ಯಾನ್ಸಿಂಗ್…ಒಂದು ವೇಳೆ ನಿಮಗೆ
ಈ ಶಬ್ದಗಳ ಬಗ್ಗೆ ಬಳಕೆ ಬಗ್ಗೆ ಗೊಂದಲಗಳಿದ್ದರೆ…ಈ ವರದಿ ಓದಿ.

ಏನಿದು ಸೋಶಿಯಲ್ ಡಿಸ್ಟೆನ್ಸ್:
ಸೋಶಿಯಲ್ ಡಿಸ್ಟ್ಯಾನ್ಸಿಂಗ್(ಸಾಮಾಜಿಕ ಅಂತರ) ಅಂದರೆ ಇತರ ಜನರೊಂದಿಗಿನ ಮುಖಾಮುಖಿ ಸಂವಹನ (ಮಾತುಕತೆ) ಆದಷ್ಟು ಕಡಿಮೆ ಮಾಡುವುದು. ಅಲ್ಲದೇ ಕನಿಷ್ಠ ಆರು ಅಡಿಗಳಷ್ಟು ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಸಾಮಾಜಿಕ ಅಂತರದಲ್ಲಿ
*ಸಾರ್ವಜನಿಕವಾಗಿ ಹೆಚ್ಚು ಬೆರೆಯುವುದನ್ನು ಕಡಿಮೆ ಮಾಡಬೇಕು
*ಯಾವುದೇ ಗುಂಪುಗಳ ಜತೆ, ಗುಂಪು, ಗುಂಪಾಗಿ ಮಾತನಾಡುವುದನ್ನು ನಿಲ್ಲಿಸಿ
*ಯಾವುದೇ ಧಾರ್ಮಿಕ, ಸಾಮಾಜಿಕ ಹಾಗೂ ಕ್ರೀಡಾ ಸ್ಪರ್ಧೆ/ಸಮಾರಂಭಗಳಲ್ಲಿ ಭಾಗವಹಿಸಬೇಡಿ
*ಗುಂಪು ಸೇರೋದನ್ನು ಮೊದಲು ನಿಷೇಧಿಸಿ
*ಮನೆ ಪಾಠ, ಸಾಮಾಜಿಕ ಜಾಲತಾಣಗಳ ಪಾಠ ನಿಲ್ಲಿಸಿ
*ಮನೆಯಿಂದ ಹೊರ ಹೋದರೆ ಆರು ಅಡಿಗಳ ಅಂತರ ಕಾಯ್ದುಕೊಳ್ಳಿ
*ಹ್ಯಾಂಡ್ ಶೇಕ್ ಬದಲು ನಮಸ್ತೆ ಎಂದು ಹೇಳಿ

ಕ್ವಾರಂಟೈನ್:
ಸೋಶಿಯಲ್ ಡಿಸ್ಟ್ಯಾನ್ಸಿಂಗ್ ಗಿಂತ ಕ್ವಾರಂಟೈನ್ ತುಂಬಾ ಗಂಭೀರವಾದದ್ದು. ಕ್ವಾರಂಟೈನ್ ಅಂದ್ರೆ ಮನೆಯೊಳಗೆ ಪ್ರತ್ಯೇಕವಾಗಿ ಇರುವುದು. ಯಾವ ವ್ಯಕ್ತಿ ಪರೀಕ್ಷೆಗೊಳಗಾದಾಗ ಕೋವಿಡ್ 19 ವೈರಸ್ ಶಂಕಿತ ಅಂತಾದರೆ ಅಂತಹ ವ್ಯಕ್ತಿಗಳನ್ನು ಬೇರೆ ಜನರಿಂದ 14 ದಿನ ದೂರ ಇರಿಸಲು ಮನೆಯಲ್ಲೇ ತೀವ್ರ ನಿಗಾದಲ್ಲಿ ಇರಿಸಲು ಕ್ವಾರಂಟೈನ್ ಅಂತ ಹೇಳುತ್ತಾರೆ.

ಕೋವಿಡ್ 19 ಸೋಂಕಿಗೆ ಸಂಬಂಧಿಸಿದ ಲಕ್ಷಣ ಕಂಡು ಬಂದಲ್ಲಿ ಅಂತಹವರು ಸ್ವಯಂ ಆಗಿ ಪ್ರತ್ಯೇಕವಾಗಿ ಇರುವುದು ಮುಖ್ಯ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಹೋಂ ಕ್ವಾರಂಟೈನ್:
*ಶಂಕಿತ ವ್ಯಕ್ತಿಗಳಿಗೆ ವೈದ್ಯಕೀಯ ನೆರವು ಅಗತ್ಯ ಇಲ್ಲ ಎಂದಾದಲ್ಲಿ ಮನೆಯಲ್ಲಿಯೇ 14 ದಿನಗಳ ಕಾಲ ಪ್ರತ್ಯೇಕವಾಗಿ ಇರುವುದು.
*ಸಾರ್ವಜನಿಕ ಸ್ಥಳಗಳಿಂದ ದೂರ ಇರಬೇಕು, ಸಾರ್ವಜನಿಕ ಸಂಚಾರ ವ್ಯವಸ್ಥೆ ಬಳಸಿಕೊಳ್ಳಬಾರದು
*ಕೋವಿಡ್ 19 ಶಂಕಿತ ವ್ಯಕ್ತಿಗಳನ್ನು ದಿನಂಪ್ರತಿ ರೋಗ ಲಕ್ಷಣದ ಬಗ್ಗೆ ತಪಾಸಣೆ, ಉಸಿರಾಟದ ತೊಂದರೆ, ಜ್ವರ ಹಾಗೂ ಕೆಮ್ಮ ಇದೆಯೇ ಎಂಬ ಬಗ್ಗೆ ಪರಿಶೀಲನೆ
*ಸೋಪು ಅಥವಾ ಸ್ಯಾನಿಟೈಸರ್ ನಿಂದ ನೀರನ್ನು ಬಳಸಿ ಕೈ ತೊಳೆಯುತ್ತಿರಬೇಕು
*ಮನೆಯನ್ನು ಕೂಡಾ ಶುಚಿಯಾಗಿಟ್ಟುಕೊಳ್ಳಬೇಕು
*ಸಾಧ್ಯವಾದರೆ ಮನೆಯಲ್ಲಿರುವ ಸದಸ್ಯರಿಂದಲೂ ಅಂತರ ಕಾಯ್ದುಕೊಳ್ಳಿ

ಐಸೋಲೇಶನ್:
ಕೋವಿಡ್ 19 ವೈರಸ್ ದೃಢ ಪಟ್ಟ ವ್ಯಕ್ತಿಗಳನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವುದೇ ಐಸೋಲೇಶನ್. ಕೋವಿಡ್ 19 ಪೀಡಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಅತೀಯಾದ ಉಷ್ಣಾಂಶದಲ್ಲಿ ಇಡುವುದು. ಈ ವ್ಯಕ್ತಿಗಳನ್ನು ಕೇವಲ ವೈದ್ಯರು ಮತ್ತು ನರ್ಸ್ ಗಳು ಮಾತ್ರ ವಿಶೇಷ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಚಿಕಿತ್ಸೆ ನೀಡುವ ಕ್ರಮ ಇದಾಗಿದೆ. ಒಂದು ವೇಳೆ ಯಾರೊ ಒಬ್ಬರು ಐಸೋಲೇಶನ್ ನಲ್ಲಿ ಇದ್ದಾರೆ/ಳೆ ಎಂದರೆ ಅವರು ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಇರಲಿದ್ದಾರೆ. ಅವರು ಸಂಪೂರ್ಣವಾಗಿ ಗುಣಮುಖರಾದ ಮೇಲೆ ಅವರನ್ನು ಹೊರ ಕಳುಹಿಸಲಾಗುತ್ತದೆ.

ಲಾಕ್ ಡೌನ್:
ನಗರವನ್ನು ಲಾಕ್ ಡೌನ್ ಮಾಡುವ ಮುಖ್ಯ ಉದ್ದೇಶ ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನ ಸಂಚಾರವನ್ನು ಸ್ಥಗಿತಗೊಳಿಸುವುದಾಗಿದೆ. ಜನರೇ ಸ್ವಯಂ ಆಗಿ ಈ ನಿರ್ಧಾರ ತೆಗೆದುಕೊಳ್ಳದೇ ಇದ್ದಾಗ ಸರ್ಕಾರವೇ ಮುಂದಾಗಿ ನಗರಗಳನ್ನು, ರಾಜ್ಯವನ್ನು ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡು ಜನ ಸಂಚಾರವನ್ನು ಸ್ಥಗಿತಗೊಳಿಸಲು ಮುಂದಾಗುತ್ತದೆ.

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.