ಕಚೇರಿಗೆ ಕೊಟ್ಟಿದ್ದ ಪೀಠೊಪಕರಣ ಮನೆಗೆ ಸಾಗಿಸಿದ ಆಂಧ್ರ ಮಾಜಿ ಸ್ಪೀಕರ್‌!

Team Udayavani, Aug 23, 2019, 8:15 PM IST

ಹೈದರಾಬಾದ್‌: ಅಧಿಕಾರದಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಹೊಸತೇನಲ್ಲ. ಅಧಿಕಾರ ಇಲ್ಲದಿದ್ದರೂ ಇನ್ನೂ ಸರಕಾರಿ ಬಂಗಲೆಯಲ್ಲೇ ವಾಸ ಮಾಡುವುದು, ಸರಕಾರದ ಸೊತ್ತುಗಳನ್ನು ಮನೆಗೆ ಸಾಗಿಸುವುದು ಇದ್ದೇ ಇದೆ. ಇಂಥದ್ದೇ ಒಂದು ಪ್ರಕರಣದಲ್ಲಿ ಆಂಧ್ರ ಪ್ರದೇಶದ ಮಾಜಿ ಸ್ಪೀಕರ್‌, ಟಿಡಿಪಿ ಪಕ್ಷದ ಹಿರಿಯ ನಾಯಕ ಕೊಡೇಲ ಶಿವಪ್ರಸಾದ್‌ ಸ್ಪೀಕರ್‌ ಕಚೇರಿಯಲ್ಲಿದ್ದ ಪೀಠೊಪಕರಣಗಳನ್ನು ಮನೆಗೆ ಸಾಗಿಸಿ ಸುದ್ದಿಯಾಗಿದ್ದಾರೆ.

ಆದರೂ ಶಿವಪ್ರಸಾದ್‌ ಧಿಮಾಕಿನಿಂದ ಹೇಳಿಕೆ ನೀಡಿದ್ದು, ಬೇಕಾದರೆ ಅವರು ತೆಗೆದುಕೊಂಡು ಹೋಗಲಿ, ಇಲ್ಲದಿದ್ದರೆ ಬೆಲೆ ಎಷ್ಟೆಂದರೆ ನಾನೇ ಕೊಡುತ್ತೇನೆ ಎಂದು ಹೇಳಿದ್ದಾರೆ. ಇಷ್ಟಕ್ಕೂ ಈ ಘಟನೆ ನಡೆದಿದ್ದು 2014ರ ಹೊತ್ತಿನಲ್ಲಿ. ಆಂಧ್ರ ವಿಭಜನೆಯಾದ ಬಳಿಕ ಕಚೇರಿ ಪೀಠೊಪಕರಣಗಳನ್ನು ಹಂಚಲಾಗಿತ್ತು. ಆಂಧ್ರಕ್ಕೆ ಸೇರಿದ ವಸ್ತುಗಳನ್ನು ವಿಜಯವಾಡಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ ಸ್ಪೀಕರ್‌ ಕಚೇರಿಯ ಅಮೂಲ್ಯ ಪೀಠೊಪಕರಣಗಳನ್ನು ಶಿವಪ್ರಸಾದ್‌ ಸೀದ ಮನೆಗೆ ಸಾಗಿಸಿದ್ದಾರೆ. ಅಂದು ಕೊಟ್ಟಿದ್ದ ಪೀಠೊಪಕರಣಗಳು ಕಾಣುತ್ತಿಲ್ಲ ಎಂಬುದು ಇತ್ತೀಚಿಗೆ ವೈಎಸ್‌ಆರ್‌ ಕಾಂಗ್ರೆಸ್‌ ಸರಕಾರದ ಅರಿವಿಗೆ ಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ಶಿವಪ್ರಸಾದ್‌ ಮನೆಯಲ್ಲಿರುವುದು ಗೊತ್ತಾಗಿದೆ. ಜತೆಗೆ ಅವರು ಎ.ಸಿ., ಫ್ಯಾನ್‌ಗಳನ್ನು ಪುತ್ರ, ಪುತ್ರಿಯರ ಮನೆಗೂ ಕೊಟ್ಟಿದ್ದಾಗಿ ಹೇಳಲಾಗಿದೆ. ಕಚೇರಿ ಪೀಠೊಪಕರಣ ತೆಗೆದುಕೊಂಡು ಹೋದ ಬಗ್ಗೆ ಸದ್ಯ ಹೊಸ ಸ್ಪೀಕರ್‌ ತಮಿನೇನಿ ಸೀತಾರಾಂ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ