Salman Khan ನಿವಾಸಕ್ಕೆ ಫೈರಿಂಗ್: ಶಂಕಿತ ಇಬ್ಬರ ಬಂಧನ
Team Udayavani, Apr 16, 2024, 1:27 AM IST
ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ರವಿವಾರ ನಡೆದ ಗುಂಡಿನದಾಳಿಗೆ ಅಮೆರಿಕದಲ್ಲೇ ಪಿತೂರಿ ರೂಪಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನ ಸಹವರ್ತಿ ರೋಹಿತ್ ಗೊಡಾರಾ ಅಮೆರಿಕದಲ್ಲಿದ್ದುಕೊಂಡೇ ಕೃತ್ಯ ಎಸಗಲು ಹರಿಯಾಣದ ಗುರು ಗ್ರಾಮದ ಇಬ್ಬರು ವ್ಯಕ್ತಿಗಳನ್ನು ನೇಮಿ ಸಿದ್ದ. ಕೃತ್ಯ ಎಸಗಿದ ಇಬ್ಬರೂ ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.
ಪ್ರಕರಣದ ಬಗ್ಗೆ ಮುಂಬಯಿ ಕ್ರೈಂ ಬ್ರ್ಯಾಂಚ್ ಪೊಲೀಸರು ತನಿಖೆ ನಡೆಸು ತ್ತಿದ್ದು, ಕೃತ್ಯ ಎಸಗಿದ ಶಂಕಿತರನ್ನು ಮುಂಬ ಯಿಯಲ್ಲಿ ಬಂಧಿಸಲಾಗಿದ್ದು, ಈ ಇಬ್ಬರೂ ಹರಿಯಾಣದವರಾಗಿದ್ದು ಕೃತ್ಯ ಎಸಗುವುದಕ್ಕಾಗಿ ರೋಹಿತ್ ಇವರನ್ನು ನಿಯೋಜಿಸಿದ್ದ ಎನ್ನಲಾಗಿದೆ. ಸಂಚಾನ್ ಮುಂಜಾಲ್ ಎಂಬ ಉದ್ಯಮಿಯ ಹತ್ಯೆಯಲ್ಲೂ ರೋಹಿತ್ ಕೈವಾಡವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು