ಫಾಸ್ಟ್ ಟೆಸ್ಟ್ ಫಿಂಗರ್ ಫಸ್ಟ್ ಪ್ರಶ್ನೆ ಇಲ್ಲದೆ ಕೋಟಿ ಗೆಲಲ್ಲು ಅವಕಾಶ ಕೊಟ್ಟ ಬಿಗ್ ಬಿ..!
Team Udayavani, Oct 16, 2020, 9:35 PM IST
ನವದೆಹಲಿ : ಹಿಂದಿಯ ಜನಪ್ರಿಯ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ ಪತಿ’ ಯಲ್ಲಿ ಈ ವಾರ ಅಚ್ಚರಿಯ ಘಟನೆಯೊಂದು ನಡೆದಿದೆ.
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಸದ್ಯ ತನ್ನ 12 ಆವೃತಿಯಲ್ಲಿ ಸಾಗುತ್ತಿದೆ.ಸ್ಪರ್ಧಿಗಳಿಗೆ ಹಾಟ್ ಸೀಟ್ ಗೆ ಬರುವ ಮುನ್ನ ಕೇಳಲಾಗುವ ಫಸ್ಟ್ ಟೆಸ್ಟ್ ಫಿಂಗರ್ ಫಸ್ಟ್ ಪ್ರಶ್ನೆಗಳನ್ನು ಕೇಳುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ರುನಾ ಸಹಾ ಎನ್ನುವ ಸ್ಪರ್ಧಿಯೊಬ್ಬರು ಎರಡು ಬಾರಿ ಫಸ್ಟ್ ಟೆಸ್ಟ್ ಫಿಂಗರ್ ಫಸ್ಟ್ ಪ್ರಶ್ನೆಗಳಿಗೆ ವೇಗವಾಗಿ ಉತ್ತರಿಸುವಲ್ಲಿ ವಿಫಲರಾಗುತ್ತಾರೆ. ತನ್ನ ವಿಫಲತೆಗೆ ಭಾವುಕರಾಗುವ ಸ್ಪರ್ಧಿ ರುನಾರನ್ನು ನೋಡುವ ಬಿಗ್ ಬಿ ಅಚ್ಚರಿಯ ಘಟನೆಯೊಂದಕ್ಕೆ ಸೃಷ್ಟಿಕರ್ತರಾಗುತ್ತಾರೆ.
ಫಸ್ಟ್ ಟೆಸ್ಟ್ ಫಿಂಗರ್ ಫಸ್ಟ್ ಪ್ರಶ್ನೆಗೆ ಉತ್ತರಿಸದೆ ವಿಫಲರಾಗುವ ರುನಾ ಸಹಾ ಭಾವುಕರಾದ ಕ್ಷಣಕ್ಕೆ ಮಿಡಿಯುವ ಅಮಿತಾಭ್ ವೇದಿಕೆಗೆ ಆಹ್ವಾನ ನೀಡಿ ಅವರನ್ನು ಹಾಟ್ ಸೀಟ್ ನಲ್ಲಿ ಕೂರಲು ಹೇಳುತ್ತಾರೆ.ಅಮಿತಾಭ್ ಅವರ ಈ ನಡೆ ರುನಾ ಅವರನ್ನು ಮತ್ತೆ ಭಾವುಕರನ್ನಾಗಿ ಮಾಡುತ್ತದೆ. ಅಮಿತಾಭ್ ರ ಈ ನಡೆ ಕೌನ್ ಬನೇಗಾ ಕರೋಡ್ ಪತಿಯ ಈ ಹಿಂದಿನ ಎಲ್ಲಾ ಆವೃತ್ತಿಯಲ್ಲಿ ಎಂದೂ ಕಂಡು ಬಂದಿಲ್ಲ. ಸ್ಪರ್ಧಿ ರುನಾ ಭಾವುಕರಾಗಿ ಅಮಿತಾಭ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಆಟ ಮುಂದುವರೆಸಿರುವ ರುನಾ ಸದ್ಯ 10 ಸಾವಿರ ಗಡಿಯನ್ನು ದಾಟಿದ್ದಾರೆ.ಶನಿವಾರ ಮತ್ತೆ ಅಮಿತಾಭ್ ರೊಂದಿಗೆ ಆಟವನ್ನು ಮುಂದುವರೆಸಲಿದ್ದಾರೆ. ಆಟದ ನಡುವೆ ರುನಾ ತನ್ನ ಜೀವನದ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
MUST WATCH
ಹೊಸ ಸೇರ್ಪಡೆ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ
ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ