ಮಧ್ಯ ಪ್ರದೇಶ ಮಾಜಿ ಸಿಎಂ ಅರ್ಜುನ್ ಸಿಂಗ್ ಪತ್ನಿ ಸರೋಜಾ ಕುಮಾರಿ ವಿಧಿವಶ
Team Udayavani, May 15, 2019, 12:06 PM IST
ಹೊಸದಿಲ್ಲಿ : ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಅವರ ಪತ್ನಿ ಸರೋಜಾ ಕುಮಾರಿ (84) ಇಂದು ಬುಧವಾರ ನಸುಕಿನ ವೇಳೆ ಹೃದಯಾಘಾತದಿಂದ ನಿಧನ ಹೊಂದಿದರು.
ಸರೋಜಾ ಕುಮಾರಿ ಅವರು ನಿದ್ದೆಯಲ್ಲೇ ಹೃದಯ ಸ್ತಂಭನಕ್ಕೆ ಗುರಿಯಾದರು ಎಂದು ಇಂದು ಬೆಳಗ್ಗೆ ಆಕೆಯನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದರು.
ಸರೋಜಾ ಕುಮಾರಿ ಆರು ವಾರಗಳ ಕಾಲ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕಳೆದ ಎ.25ರಂದು ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆಕೆಯ ಅಂತ್ಯಕ್ರಿಯೆ ಮಧ್ಯ ಪ್ರದೇಶದಲ್ಲಿನ ಆಕೆಯ ಹುಟ್ಟೂರಾದ ಚುರ್ಹಟ್ ನಲ್ಲಿ ನಡೆಯಲಿದೆ ಎಂದು ಕುಟುಂಬದವರು ಹೇಳಿದ್ದಾರೆ.