
ಶೀಘ್ರವೇ ಸ್ಪ್ಯಾಮ್ ಕರೆಗಳಿಂದ ಮುಕ್ತಿ?: ಹೊಸ ದೂರಸಂಪರ್ಕ ವಿಧೇಯಕದಲ್ಲಿ ಕ್ರಮಗಳ ಸೇರ್ಪಡೆ
Team Udayavani, Sep 25, 2022, 7:35 AM IST

ನವದೆಹಲಿ: ಅನಾಮಧೇಯ ಸಂಖ್ಯೆಗಳಿಂದ ಕರೆ ಮಾಡಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇಂತಹ ಸ್ಪ್ಯಾಮ್ ಕರೆ ಮತ್ತು ಸಂದೇಶಗಳಿಗೆ ಕಡಿವಾಣ ಹಾಕುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಹೊಸ ಟೆಲಿಕಾಂ ಮಸೂದೆಯಲ್ಲಿ ಅದಕ್ಕೆಂದು ಹಲವು ಕ್ರಮಗಳನ್ನು ಸೇರಿಸಿಕೊಂಡಿರುವುದಾಗಿ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
“ಪ್ರತಿಯೊಬ್ಬ ಗ್ರಾಹಕನಿಗೆ ತನಗೆ ಯಾರಿಂದ ಕರೆ ಬರುತ್ತಿದೆ ಎನ್ನುವುದನ್ನು ತಿಳಿಯುವ ಹಕ್ಕಿದೆ. ಈವರೆಗೆ ಅದು ಕಾಯ್ದೆಯಲ್ಲಿ ಇರಲಿಲ್ಲ. ಇದೀಗ ಅದನ್ನು ಕಾಯ್ದೆ ಮಾಡಲಾಗುತ್ತಿದೆ. ಅದರಿಂದಾಗಿ ಸ್ಪ್ಯಾಮ್ ಕರೆಗಳಿಗೆ ಕಡಿವಾಣ ಬಿದ್ದಂತಾಗುತ್ತದೆ. ಮಾಮೂಲಿ ಕರೆ ಮಾತ್ರವಲ್ಲದೆ, ಜೂಮ್, ವಾಟ್ಸ್‌ಆ್ಯಪ್‌ಗಳಂತಹ ಆ್ಯಪ್‌ಗಳಲ್ಲಿ ಕರೆ ಮಾಡಿದರೂ, ಅವರ ಮಾಹಿತಿಯನ್ನು ಕರೆ ಸ್ವೀಕರಿಸುವವರಿಗೆ ನೀಡುವಂತೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.
ಈ ಮಸೂದೆಯಲ್ಲಿ ಗ್ರಾಹಕರ ರಕ್ಷಣೆ ವಿಚಾರದಲ್ಲಿ ಹೆಚ್ಚು ಗಮನ ಕೊಡಲಾಗಿದೆ. ಈಗಿರುವ ಎಲ್ಲ ನಿಯಮಗಳ ಜೊತೆ ಹಲವು ಸೇರ್ಪಡೆಗಳೂ ಆಗಲಿವೆ ಎಂದೂ ಸಚಿವರು ಮಾಹಿತಿ ಕೊಟ್ಟಿದ್ದಾರೆ.
ಸದ್ಯ ಈ ಮಸೂದೆಗೆ ಸಾರ್ವಜನಿಕರಿಂದ ಸಲಹೆ ಕೋರಲಾಗಿದ್ದು, ಸಲಹೆಗಳನ್ನಾಧರಿಸಿ ಅಂತಿಮ ಕರಡು ಸಿದ್ಧಪಡಿಸಲಾಗುವುದು. ಇದು ಕಾಯ್ದೆ ರೂಪ ಪಡೆಯಲು ಕನಿಷ್ಠ 6 ತಿಂಗಳ ಕಾಲಾವಕಾಶ ಬೇಕು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಮೊದಲ ಬಾರಿ ಮಗಳ ಮುಖ ರಿವೀಲ್ ಮಾಡಿದ ಪಿಂಕಿ: ವೈರಲ್ ಆಯಿತು ಕ್ಯೂಟ್ ಮಾಲ್ತಿ ಫೋಟೋ

ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

ಉದ್ದಿಮೆಗಳ ಖಾತಾ ಬದಲಾವಣೆ ಸಮಸ್ಯೆಗೆ ತ್ವರಿತ ಪರಿಹಾರ: ಅತಿಕ್

ದೊಡ್ಡ ಟ್ರೋಫಿ ಇನ್ನೂ ಒಂದಿದೆ: ಶಫಾಲಿ ವರ್ಮ