Udayavni Special

ಜಾಗತಿಕ ಮಟ್ಟದ ನಾಯಕರಿಂದ ಸಂತಾಪ


Team Udayavani, Aug 18, 2018, 6:00 AM IST

6.jpg

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಅಂತಾರಾಷ್ಟ್ರೀಯ ನಾಯಕರೂ ಕಂಬನಿ ಮಿಡಿದಿದ್ದಾರೆ. ಅಮೆರಿಕ ಮತ್ತು ರಷ್ಯಾ ಪ್ರತಿಕ್ರಿಯಿಸಿ, “”ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ವಾಜಪೇಯಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ, ಶಾಂತಿ ಕಾಪಾಡಿಕೊಳ್ಳಲು ಹೆಚ್ಚಿನ ಮಹತ್ವ ನೀಡುತ್ತಿದ್ದರು” ಎಂದಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ರಾಷ್ಟ್ರಪತಿ ಕೋವಿಂದ್‌ ಮತ್ತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು, ಸಂತಾಪ ಸಂದೇಶ ರವಾನಿಸಿದ್ದಾರೆ. ಅಟಲ್‌ “ಅತ್ಯುತ್ತಮ ರಾಜಕಾರಣಿ’ ಎಂದು ಗುಣಗಾನ ಮಾಡಿರುವ ಪುಟಿನ್‌, “”ವಾಜಪೇಯಿ ಅವರು ವಿಶ್ವಮನ್ನಣೆಗೆ ಪಾತ್ರರಾದವರು. ರಾಜತಾಂತ್ರಿಕತೆಯನ್ನೂ ಮೀರಿದ ಸ್ನೇಹ ಅವರದ್ದು. ರಷ್ಯಾ ಮತ್ತು ಭಾರತದ ನಡುವೆ ವಿಶೇಷವಾದ ಬಾಂಧವ್ಯ ವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದು” ಎಂದಿದ್ದಾರೆ.

ಅಮೆರಿಕ ವಿದೇಶಾಂಗ ಸಚಿವ ಮೈಕೆಲ್‌ ಪೋಂಪಿಯೋ ಸಂದೇಶ ರವಾನಿಸಿ, “”ಅಮೆರಿಕ ಮತ್ತು ಭಾರತದ ನಡುವಿನ ಆರ್ಥಿಕ ಮತ್ತು ರಕ್ಷಣಾ ಕ್ಷೇತ್ರದ ಬಾಂಧವ್ಯ ವೃದ್ಧಿಸಲು ಅಪಾರ ಕೊಡುಗೆ ನೀಡಿದವರು ಅಟಲ್‌. ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಇರಬೇಕೆನ್ನುವ ದೂರದೃಷ್ಟಿ ಹೊಂದಿದ್ದರು. ಇಂದು ಉಭಯ ದೇಶಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ವಾಜಪೇಯಿ ಅವರ ಅಂದಿನ ಪ್ರಯತ್ನವೂ ಕಾರಣ” ಎಂದಿದ್ದಾರೆ.

ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ, ಮಾಲ್ಡೀವ್ಸ್‌ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ ಅಬ್ದುಲ್ಲಾ , ಮಾರಿಷಸ್‌ ಪ್ರಧಾನಿ ಜಗೌ°ಥ್‌, ಇಸ್ರೇಲ್‌ ವಿದೇಶಾಂಗ ಸಚಿವಾಲಯದ ಪ್ರಧಾನ ನಿರ್ದೇಶಕ ಯುವಾಲ್‌ ರೊಟೆಮ್‌ ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ.

ಪಾಕ್‌ ನಾಯಕರ ಕಂಬನಿ: ಇದೇ ವೇಳೆ, ಅಟಲ್‌ಜೀ ನಿಧನಕ್ಕೆ ಪಾಕಿಸ್ತಾನ ಸರ್ಕಾರ ಮತ್ತು ಅಲ್ಲಿನ ಪ್ರಮುಖ ನಾಯಕರು ಕಂಬನಿ ಮಿಡಿದಿದ್ದಾರೆ. ಪ್ರಾದೇಶಿಕ ಸಹಕಾರ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯ ಸುಧಾರಿಸುವ ನಿಟ್ಟಿನಲ್ಲಿ ವಾಜಪೇಯಿ ಶ್ರಮ ಮತ್ತು ಬದಲಾವಣೆ ತರಲು ಮುಂದಾಗಿದ್ದರು ಎಂದು ಅವರು ಪ್ರತಿಪಾದಿಸಿದ್ದಾರೆ. 

ಭಾರತ-ಪಾಕಿಸ್ತಾನ ಬಾಂಧವ್ಯ ವೃದ್ಧಿಸುವಲ್ಲಿ ವಾಜಪೇಯಿ ಸಾಹೆಬ್‌ರ ರಾಜತಾಂತ್ರಿಕ ನಡೆ ಮರೆಯುವಂಥದ್ದಲ್ಲ. ವಾಜಪೇಯಿ ಅವರ ನಿಧನ ದಕ್ಷಿಣ ಏಷ್ಯಾದ ರಾಜಕಾರಣಕ್ಕೆ ಆದ ದೊಡ್ಡ ಆಘಾತ.
ಇಮ್ರಾನ್‌ ಖಾನ್‌, ನಿಯೋಜಿತ ಪಾಕ್‌ ಪ್ರಧಾನಿ

ಚೀನಾದಿಂದ ಗೌರವ 
1998ರ ಪರಮಾಣು ಪರೀಕ್ಷೆಯು ಚೀನಾದ ಕೋಪಕ್ಕೆ ಕಾರಣವಾಗಿದ್ದರೂ, 2003ರಲ್ಲಿ ಎರಡೂ ದೇಶಗಳ ನಡುವೆ ಹೊಸ ಬಾಂಧವ್ಯ ಸೃಷ್ಟಿಸುವಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪಾತ್ರ ಮಹತ್ವದ್ದು. ಅವರನ್ನು ನಾವು ಭಾರತದ ಚೀನಾ ನೀತಿಯ ಶಿಲ್ಪಿ ಎಂದು ಪರಿಗಣಿಸುತ್ತೇವೆ ಎಂದು ಚೀನಾದ ವಿದ್ವಾಂಸರು ಹೇಳಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಮಂಡ್ಯ: 259 ಮಂದಿಗೆ ಕೋವಿಡ್ ದೃಢ ! 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

ಮಂಡ್ಯ: 259 ಮಂದಿಗೆ ಕೋವಿಡ್ ದೃಢ ! 10 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

ICU

20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಾಲಗೆ ಕತ್ತರಿಸಿದ ದುರುಳರು !

ದುಷ್ಕರ್ಮಿಗಳಿಂದ ವಾಯು ವಿಹಾರಕ್ಕೆ ತೆರಳಿದ ತುಂಬು ಗರ್ಭಿಣಿ ಸೇರಿದಂತೆ ಇಬ್ಬರು ಮಹಿಳೆಯರ ಕೊಲೆ

ವಾಯುವಿಹಾರಕ್ಕೆ ತೆರಳಿದಾಗ ದುಷ್ಕರ್ಮಿಗಳಿಂದ ತುಂಬು ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ! ಐವರ ಬಂಧನ: ಆರೋಪಿಗಳು ಯಾರು?

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ! ಐವರ ಬಂಧನ: ಆರೋಪಿಗಳ ವಿವರ ಇಲ್ಲಿದೆ

modi-2

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಯಾವಾಗ ಸಿಗಲಿದೆ ಹೆಚ್ಚಿನ ಮನ್ನಣೆ: ಪ್ರಧಾನಿ ಮೋದಿ ಖಡಕ್ ನುಡಿ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICU

20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಾಲಗೆ ಕತ್ತರಿಸಿದ ದುರುಳರು !

modi-2

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಯಾವಾಗ ಸಿಗಲಿದೆ ಹೆಚ್ಚಿನ ಮನ್ನಣೆ: ಪ್ರಧಾನಿ ಮೋದಿ ಖಡಕ್ ನುಡಿ

ಸರ್ಕಾರಿ ಗೌರವದೊಂದಿಗೆ ಫಾರ್ಮ್ ಹೌಸ್ ನಲ್ಲಿ SPB ಅಂತ್ಯಕ್ರಿಯೆ: ಅಂತಿಮ ದರ್ಶನಕ್ಕೆ ವ್ಯವಸ್ಥೆ

ಸರ್ಕಾರಿ ಗೌರವದೊಂದಿಗೆ ಫಾರ್ಮ್ ಹೌಸ್ ನಲ್ಲಿ SPB ಅಂತ್ಯಕ್ರಿಯೆ: ಅಂತಿಮ ದರ್ಶನಕ್ಕೆ ವ್ಯವಸ್ಥೆ

ಕೊನೆಗೂ ‘ಆ ದಿನ’ ಬರಲೇ ಇಲ್ಲ: ‘2ದಿನಗಳಲ್ಲಿ ಮರಳಿ ಬರುವೆ’ ಎಂದಿದ್ದ SPB ಬಾರದ ಲೋಕಕ್ಕೆ ಪಯಣ

ಕೊನೆಗೂ ‘ಆ ದಿನ’ ಬರಲೇ ಇಲ್ಲ: ‘2ದಿನಗಳಲ್ಲಿ ಮರಳಿ ಬರುವೆ’ ಎಂದಿದ್ದ SPB ಬಾರದ ಲೋಕಕ್ಕೆ ಪಯಣ

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

MUST WATCH

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕಹೊಸ ಸೇರ್ಪಡೆ

ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಲು ಒತ್ತಾಯ

ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಲು ಒತ್ತಾಯ

kopala-tdy-1

ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳ ಬಿತ್ತನೆ

ಜಾನುವಾರುಗಳಿಗೆ ಚರ್ಮ ಗಂಟು ರೋಗ: ಆತಂಕ ಬೇಡ

ಜಾನುವಾರುಗಳಿಗೆ ಚರ್ಮ ಗಂಟು ರೋಗ: ಆತಂಕ ಬೇಡ

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಮನೆಯ ಸಂಪುಗಳಿಗೆ ಅಳವಡಿಸಿದ ನೀರಿನ ಪಂಪುಗಳೇ ಈತನ ಟಾರ್ಗೆಟ್!

ಬೆಳೆ ಸಮೀಕ್ಷೆ; ರೈತರು ವಂಚಿತರಾಗದಿರಲಿ

ಬೆಳೆ ಸಮೀಕ್ಷೆ; ರೈತರು ವಂಚಿತರಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.