ಗೂಗ್ಲೀ ಡೊಮೈನ್ ಹೆಸರೂ ಕೂಡ ಗೂಗಲ್ ಪಾಲಿಗೆ
Team Udayavani, Apr 6, 2017, 3:45 AM IST
ನವದೆಹಲಿ: ಸಾಫ್ಟವೇರ್ ದೈತ್ಯ ಗೂಗಲ್ ತೆಕ್ಕೆಗೆ ಈಗ “ಗೂಗ್ಲೀ’ ಹೆಸರಿನ ಅಂತರ್ಜಾಲ ಡೊಮೈನ್ (ವೆಬ್ಪೇಜ್ ಗುರುತು) ಕೂಡ ಸೇರಿದೆ. ಗೂಗ್ಲೀ ಡೊಮೈನ್ ಅನ್ನು ಗೂಗಲ್.ಕಾಮ್ಗೆ ಕೊಡುವ ಅಂತಾರಾಷ್ಟ್ರೀಯ ನ್ಯಾಯಾಧಿಕರಣದ ತೀರ್ಪಲ್ಲಿ ಮಧ್ಯಪ್ರವೇಶಿಸಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಜೊತೆಗೆ ಗೂಗ್ಲೀ ಡೊಮೈನ್ ಅನ್ನು ನೋಂದಾಯಿಸಿದ್ದರಲ್ಲಿ ಸದುದ್ದೇಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಗುಲ್ಶನ್ ಖಂತ್ರಿ ಎಂಬುವವರು ಗೂಗ್ಲೀ ಹೆಸರಿನ ಡೊಮೈನ್ ಅನ್ನು ನೋಂದಾಯಿಸಿದ್ದು, ಪ್ರಮಾದವಶಾತ್ ಮಾಡಿದ್ದಾಗಿ ಹೇಳಿದ್ದರು. ಇದರಲ್ಲಿ ತಪ್ಪೇನಿದೆ? ಕ್ರಿಕೆಟ್ನಲ್ಲೂ ಬಳಕೆಯಲ್ಲಿದೆ ಎಂದಿದ್ದರು. ಈ ಬಗ್ಗೆ ನ್ಯಾಯಾಧಿಕರಣ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಗೂಗ್ಲೀ ಹೆಸರಿನ ಆರಂಭದಲ್ಲಿ ಗೂಗಲ್ ಎಂಬುದು ಬರುವುದರಿಂದ ಮತ್ತು ಗೂಗಲ್ ಸರಕು ಮತ್ತು ಸೇವೆಯ ಹೆಸರನ್ನೇ ಪ್ರತಿನಿಧಿಸುವುದರಿಂದ ಈ ಡೊಮೈನ್ ಸದುದ್ದೇಶದ್ದಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೇ ಗೂಗಲ್ ಅನ್ನೇ ವೆಬ್ಪೇಜ್ನಲ್ಲಿ ಅನುಕರಿಸಲಾಗಿದೆ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ