ನಾಳೆಯಿಂದ ಪ್ರಮುಖ ಕೇಸ್‌ಗಳ ವಿಚಾರಣೆ ಶುರು

Team Udayavani, Jun 30, 2019, 5:02 AM IST

ಹೊಸದಿಲ್ಲಿ:ಒಂದೂವರೆ ತಿಂಗಳ ಕಾಲ ಬೇಸಿಗೆ ರಜೆ ಮುಗಿಸಿ ಜುಲೈ 1ರಿಂದ ಕಾರ್ಯಾರಂಭ ಮಾಡಲಿರುವ ಸುಪ್ರೀಂ ಕೋರ್ಟ್‌, ಈ ವಾರ ಹಲವು ಮಹತ್ವದ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಅಯೋಧ್ಯೆಯ ಭೂ ವಿವಾದ, ರಫೇಲ್ ಪ್ರಕರಣ ಕುರಿತ ತೀರ್ಪಿನ ಮರುಪರಿಶೀಲನೆ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ‘ಚೌಕೀದಾರ್‌ ಚೋರ್‌ ಹೈ’ ಎಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪ್ರಕರಣದ ವಿಚಾರಣೆಯೂ ನಡೆಯಲಿದೆ. ಮೂಲಗಳ ಪ್ರಕಾರ ಈ ತಿಂಗಳಲ್ಲೇ ರಫೇಲ್ ಕುರಿತ ತೀರ್ಪನ್ನು ಕೋರ್ಟ್‌ ನೀಡಲಿದೆ. ಹಲವು ವರ್ಷಗಳ ಅನಂತರ ಸಂಪೂರ್ಣ ಸಾಮರ್ಥ್ಯದಲ್ಲಿ ಕೋರ್ಟ್‌ ಕೆಲಸ ಮಾಡಲಿದೆ. ಅಂದರೆ ಎಲ್ಲ 31 ನ್ಯಾಯಮೂರ್ತಿಗಳೂ ಹಾಜರಿರಲಿದ್ದಾರೆ.

‘ಚೌಕೀದಾರ್‌ ಚೋರ್‌’ ಪ್ರಕರಣದಲ್ಲಿ ರಾಹುಲ್ ಈಗಾಗಲೇ ಕ್ಷಮೆ ಕೋರಿದ್ದಾರೆ. ಅಲ್ಲದೆ, ಪ್ರಕರಣವನ್ನು ಮುಕ್ತಾಯಗೊಳಿಸು ವಂತೆಯೂ ಮನವಿ ಸಲ್ಲಿಸಿದ್ದಾರೆ. ಇನ್ನು ಅಯೋಧ್ಯೆ ಪ್ರಕರಣದಲ್ಲಿ ರಾಜೀ ಸಂಧಾನ ಸಮಿತಿಯ ವರದಿಗಳನ್ನು ಸುಪ್ರೀಂಕೋರ್ಟ್‌ ಪಡೆಯಲಿದ್ದು, ಇದು ಅತ್ಯಂತ ಮಹತ್ವ ಪಡೆದಿದೆ. ಇದೂ ಸಹಿತ ಇನ್ನೂ ಹಲವು ಹೈಪ್ರೊಫೈಲ್ ಕೇಸ್‌ಗಳು ವಿಚಾರಣೆಗೆ ಬರಲಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ