ಮಳೆಗೆ ಸೋತ ಮುಂಬಯಿ, ರಸ್ತೆಗಳಲ್ಲಿ ಹರಿದ ಪ್ರವಾಹದ ನೀರು


Team Udayavani, Jul 11, 2018, 12:03 PM IST

male.png

ಮುಂಬಯಿ:  ವಾಣಿಜ್ಯ ನಗರ ಮುಂಬಯಿನಲ್ಲಿ  ಸತತ ನಾಲ್ಕನೇ ದಿನವಾದ ಮಂಗಳವಾರ ಕೂಡ ಬಿರುಸಿನ ಮಳೆ ಮುಂದುವರಿದಿದೆ. ಹೀಗಾಗಿ ಉಪ ನಗರ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಜನಜೀವನಕ್ಕೆ ತೊಂದರೆಯಾಗಿದೆ. ಹೆಚ್ಚಿನ ಕಡೆಗಳಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರವಾಹದ ನೀರು ನುಗ್ಗಿದ್ದರಿಂದ ಸ್ಥಳೀಯ ಮತ್ತು ದೂರ ಪ್ರಯಾಣದ ರೈಲುಗಳ ಪ್ರಯಾಣ ರದ್ದುಗೊಳಿಸಲಾಗಿದೆ ಇಲ್ಲವೇ ಮಾರ್ಗ ಬದಲಾವಣೆ ಮಾಡಲಾಗಿದೆ.

ಇನ್ನು ರಸ್ತೆಗಳಲ್ಲಿ ಸಂಚರಿಸಲು ವಾಹನ ಚಾಲ ಕರು, ಬಸ್‌ ಪ್ರಯಾಣಿಕರು ಗಂಟೆಗಟ್ಟಲೆ ಕಾಯಬೇಕಾಯಿತು.

ನಾಲ್ವರ ಸಾವು: ಮಹಾರಾಷ್ಟ್ರದ ಯವತ್‌ಮಾಳ್‌ನಲ್ಲಿ ಮಳೆ ಸಂಬಂಧಿ ದುರಂತದಲ್ಲಿ ಭಾನುವಾರದಿಂದ ಈಚೆಗೆ ನಾಲ್ವರು ಅಸುನೀಗಿದ್ದಾರೆ. ಜಿಲ್ಲೆಯಲ್ಲಿನ ಸಣ್ಣ, ದೊಡ್ಡ ನದಿಗಳೆಲ್ಲ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 

1,500 ಮಂದಿ ರಕ್ಷಣೆ: ಮುಂಬಯಿನ ನಾಲಾ ಸೊಪಾರಾ ರೈಲು ನಿಲ್ದಾಣದಲ್ಲಿ ಪ್ರವಾಹದಲ್ಲಿ ನಡುವೆ ಇದ್ದ  ವಡೋದರಾ ಎಕ್ಸ್‌ ಪ್ರಸ್‌ನಿಂದ 1,500 ಮಂದಿಯನ್ನು ಎನ್‌ಡಿಆರ್‌ಎಫ್ ಸಿಬಂದಿ ರಕ್ಷಿಸಿದ್ದಾರೆ. ಪಾಲಾ^ರ್‌ನಲ್ಲಿ ಉಪ್ಪು ತಯಾರಿಕಾ ಕೇಂದ್ರಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ 81 ಮಂದಿಯನ್ನೂ ರಕ್ಷಿಸಲಾಗಿದೆ. ಥಾಣೆ ಮತ್ತು ಪಾಲಾ^ರ್‌ನಲ್ಲೂ ಧಾರಾಕಾರ ಮಳೆಯಾಗಿದೆ. ಉತ್ತರ ಮುಂಬಯಿ ಮತ್ತು ನಗರದ ಭಾಗಕ್ಕೆ ನೀರು ಪೂರೈಕೆ ಮಾಡುವ ತುಳಸಿ ಕೆರೆಯಲ್ಲಿ ನೀರು ತುಂಬಿದೆ. ಮಳೆ ಕಾರಣದಿಂದ ಡಬ್ಟಾವಾಲಾಗಳು ತಮ್ಮ ಸೇವೆ ರದ್ದುಗೊಳಿಸಿದ್ದಾರೆ. ಗುರುವಾರದವರೆಗೆ ಮುಂಬಯಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. 

ದಾಖಲೆ ಮಳೆ: ಕೊಲಾಬಾದಲ್ಲಿರುವ ಮಳೆ ಮಾಪನ ಕೇಂದ್ರದ ಪ್ರಕಾರ ಸೋಮವಾರ ಬೆಳಗ್ಗೆ 8.30ರಿಂದ ಮಂಗಳವಾರ ಬೆಳಗ್ಗೆ 8.30ರ ಅವಧಿಯಲ್ಲಿ 165.9 ಮಿ.ಮೀ. ಮಳೆಯಾಗಿದೆ. ಸಾಂತಾಕ್ರೂಜ್‌ನಲ್ಲಿರುವ ಕೇಂದ್ರ ಇದೇ ಅವಧಿಯಲ್ಲಿ 184.4 ಮಿ.ಮೀ. ಮಳೆಯಾಗಿದೆ ಎಂದು ದಾಖಲಿಸಿದೆ. 

ತಪ್ಪಿದ ದುರಂತ: ಮುಂಬಯಿ ವಿಮಾನ ನಿಲ್ದಾಣದಲ್ಲಿ ಮಳೆಯಿಂದಾಗಿ ವಿಮಾನ ಹಾರಾಟಕ್ಕೂ ತೊಂದರೆ ಉಂಟಾಗಿದೆ. ವಿಜಯವಾಡದಿಂದ ಮುಂಬಯಿಗೆ ಬರುತ್ತಿದ್ದ ವಿಮಾನ ಬದಲಿ ರನ್‌ವೇಯಲ್ಲಿ ಲ್ಯಾಂಡ್‌ ಆಗುವ ವೇಳೆ ಜಾರಿ ಹೋಗಿದೆ. ನಿಗದಿತ ಸ್ಥಳಕ್ಕಿಂತ 10 ಅಡಿ ಮುಂದೆ ಹೋಗಿ ನಿಂತಿದೆ. 

ಖಾಸಗಿಯವರಿಗೆ ಒಪ್ಪಿಸಿ: ಬಾಂಬೆ ಹೈಕೋರ್ಟ್‌
ಪ್ರತಿ ವರ್ಷದ ಮುಂಗಾರಿನಲ್ಲಿ ಹಳಿಗಳು ಮುಳುಗುವುದನ್ನು ತಪ್ಪಿಸಲು ಸಾಧ್ಯವಾಗದೇ ಇದ್ದರೆ ಖಾಸಗಿಯವರಿಗೆ ಒಪ್ಪಿಸಿ ಎಂದು ಬಾಂಬೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಹಳಿಗಳು ಮುಳುಗುವುದರ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್‌ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾ.ಎನ್‌.ಎಚ್‌. ಪಾಟೀಲ್‌ ನೇತೃತ್ವದ ಪೀಠ, ಪ್ರತಿ ವರ್ಷ ನೆರೆ ಉಂಟಾಗುವ ಸ್ಥಳಗಳನ್ನು ಗುರುತು ಮಾಡಿ, ಅಲ್ಲಿ ಎತ್ತರಿಸಿದ ಮಾರ್ಗಗಳ ಮೂಲಕ ಹಳಿಗಳು ಇರು ವಂತೆ ಏಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದೆ.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.