ಯುವ ಸೇನಾಧಿಕಾರಿ ಹತ್ಯೆಯಲ್ಲಿ ಹಿಜ್ಬುಲ್‌ ಕೈವಾಡ

Team Udayavani, May 12, 2017, 1:36 AM IST

ಶ್ರೀನಗರ: ಕಾಶ್ಮೀರದ ಯುವ ಸೇನಾಧಿಕಾರಿ, ಲೆ| ಉಮರ್‌ ಫ‌ಯಾಜ್‌ ಅವರ ಹತ್ಯೆಯ ಹಿಂದೆ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದೀನ್‌ ಅಥವಾ ಲಷ್ಕರ್‌ ಪಾತ್ರದ ಬಗ್ಗೆ  ಪ್ರಬಲ ಶಂಕೆ ವ್ಯಕ್ತವಾಗಿದೆ. ಜತೆಗೆ ಸೇನಾಧಿಕಾರಿ ಅವರ ಹತ್ಯೆಗೆ ಉಗ್ರರು ಭದ್ರತಾ ಪಡೆಗಳ ಕೈಯಿಂದ ಅಪಹರಿಸಿದ್ದ ಇನ್ಸಾಸ್‌ ಮಾದರಿ ರೈಫ‌ಲನ್ನು ಬಳಸಿದ್ದಾಗಿ ಹೇಳಲಾಗಿದೆ. ಈ ಬಗ್ಗೆ ವಿಸ್ತೃತ ಮಾಹಿತಿಗೆ ಶವಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. 

ಉಮರ್‌ ಅವರನ್ನು ಹತ್ಯೆಗೈದ ಸ್ಥಳದಲ್ಲಿ ಇನ್ಸಾಸ್‌ ಮಾದರಿಯ ರೈಫ‌ಲಿನ ಎರಡು ಖಾಲಿ ಕಾಟ್ರಿಡ್ಜ್ಗಳು ಪತ್ತೆಯಾಗಿವೆ. ಇತ್ತೀಚೆಗೆ ದಕ್ಷಿಣ ಕಾಶ್ಮೀರದಲ್ಲಿ ವರದಿಯಾದ ಎರಡು ಪ್ರಕರಣಗಳಲ್ಲಿ ಭದ್ರತಾ ಪಡೆಗಳಿಂದ ಉಗ್ರರು ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದಾರೆ. ಇದರಲ್ಲಿ ಲಷ್ಕರ್‌ ಮತ್ತು ಹಿಜ್ಬುಲ್‌ ಉಗ್ರರು ಭಾಗಿಯಾಗಿದ್ದರು. ಅಲ್ಲಿ ಅಪಹರಿಸಿದ್ದ ಶಸ್ತ್ರವನ್ನೇ ಲೆ| ಉಮರ್‌ ಅವರ ಹತ್ಯೆಗೆ ಬಳಸಿದ ಬಗ್ಗೆ ಪ್ರಬಲ ಶಂಕೆ ಇದೆ. ಆದರೆ ಉಗ್ರರು ಲೆ| ಉಮರ್‌ ಅವರಿಗೆ ಯಾವುದೇ ದೈಹಿಕ ಹಿಂಸೆ ನೀಡಿದ ಬಗ್ಗೆ ದೇಹದಲ್ಲಿ ಕಲೆಗಳು ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.  

ರಜೌರಿಯಲ್ಲಿ ಶಾಲೆ ಬಂದ್‌: ಇತ್ತ ರಜೌರಿ ಪ್ರದೇಶದ ನಿಯಂತ್ರಣ ರೇಖೆಯಲ್ಲಿ ಪಾಕ್‌ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ದಾಳಿಯಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದಾರೆ. ಈ ಮಧ್ಯೆ, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಮಹ್ರಿಷಿ ಅವರು ಜಮ್ಮು ಕಾಶ್ಮೀರ ರಾಜ್ಯಪಾಲ ಎನ್‌.ಎನ್‌.ವೋಹ್ರಾ ಮತ್ತು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. 

ಪಾಕ್‌ ಪ್ರತಿಭಟನೆ: ಭಾರತ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ಪಾಕ್‌ ಭಾರತದ ಉಪಕಮಿಷನರಿಗೆ ನೋಟಿಸ್‌ ನೀಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳನ್ನು ಒಪ್ಪಿಕೊಳ್ಳುವ ನಾಯಕ ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು. ಹಳಬರು ಮತ್ತು ಹೊಸಬರು ಎನ್ನದೆ ಎಲ್ಲ...

  • ಸುಮಾರು ಹದಿನೆಂಟು ವರ್ಷಗಳ ಹಿಂದೆ "ಗಟ್ಟಿಮೇಳ' ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬಂದಿದ್ದ ನಿರ್ದೇಶಕ ಎಸ್‌. ಮಹೇಂದರ್‌, ಈಗ "ಶಬ್ಧ' ಚಿತ್ರದಲ್ಲಿ ಮತ್ತೂಮ್ಮೆ...

  • ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅಭಿನಯದ "ತ್ರಿವಿಕ್ರಮ' ಚಿತ್ರ ಶುರುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಸದ್ದಿಲ್ಲದೆಯೇ...

  • ಈ ಹಿಂದೆ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ್‌ ನೇತೃತ್ವದಲ್ಲಿ ಸೆಲೆಬ್ರಿಟಿಗಳನ್ನು ಒಂದೆಡೆ ಸೇರಿಸಿ ಕ್ರಿಕೆಟ್‌ ಪಂದ್ಯ ಶುರುಮಾಡಿದ್ದು ಗೊತ್ತೇ...

  • ಭಾರತ್‌ ಬಾಂಡ್‌ ಎಂಬ ಇ.ಟಿ.ಎಫ್. ಜಾತಿಗೆ ಸೇರಿದ ಮ್ಯೂಚುವಲ್‌ ಫ‌ಂಡು ಕೇವಲ ಸರಕಾರಿ ಸ್ವಾಮ್ಯದ ಕಂಪೆನಿಗಳ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲಿದೆ. ಯಾವ ಸಾಲಪತ್ರಗಳಲ್ಲಿ...