ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಶೌಕತ್ ಸೇರಿ ನಾಲ್ವರು ಉಗ್ರರು ಫಿನಿಶ್

Team Udayavani, May 18, 2019, 5:26 PM IST

Indian Army

ಜಮ್ಮು: ಜಮ್ಮು-ಕಾಶ್ಮೀರದ ಪುಲ್ವಾಮಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಬೆಂಬಲಿತ ನಾಲ್ವರು ಉಗ್ರರು ಶನಿವಾರ ಎನ್ ಕೌಂಟರ್ ಗೆ ಬಲಿಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ನಾಲ್ವರು ಉಗ್ರರಲ್ಲಿ ಮೂವರು ಹಿಜ್ಬುಲ್ ಮುಜಹಿದೀನ್ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ವರದಿ ಹೇಳಿದೆ. ಪುಲ್ವಾಮಾದ ಪಂಝ್ ಗಾಮ್ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದ ವೇಳೆ ಪ್ರತಿದಾಳಿ ನಡೆಸಿದ್ದರು.

ಸಿಆರ್ ಪಿಎಫ್, 55 ರಾಷ್ಟ್ರೀಯ ರೈಫಲ್ಸ್, ವಿಶೇಷ ಕಾರ್ಯಾಚರಣೆ ಪಡೆ ಸೇರಿದಂತೆ ಜಂಟಿ ದಾಳಿಯಲ್ಲಿ ನಾಲ್ವರು ಉಗ್ರರು ಬಲಿಯಾಗಿದ್ದಾರೆ. ಮೂವರು ಕಾಶ್ಮೀರದ ನಿವಾಸಿಗಳಾಗಿದ್ದಾರೆ. ಉಗ್ರರನ್ನು ಶೌಕತ್ ಅಹ್ಮದ್ ದಾರ್, ಇರ್ಫಾನ್ ಅಹ್ಮದ್ ಮತ್ತು ಮುಜಾಫರ್ ಅಹ್ಮದ್ ಎಂದು ಗುರುತಿಸಲಾಗಿದೆ. ಹಿಜ್ಜುಲ್ ಮುಜಾಹಿದೀನ್ ಕಮಾಂಡರ್ ಆಗಿದ್ದ ಶೌಕತ್ ಅಹ್ಮದ್ ದಾರ್ ಕಳೆದ ವರ್ಷ ಭಾರತೀಯ ಸೇನೆಯ ಯೋಧ ಔರಂಗ್ ಜೇಬ್ ಅವರನ್ನು ಗುಂಡಿಟ್ಟು ಕೊಂದ ಪ್ರಕರಣದಲ್ಲಿ ಶಾಮೀಲಾಗಿದ್ದ ಎಂದು ವರದಿ ವಿವರಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳನ್ನು ಒಪ್ಪಿಕೊಳ್ಳುವ ನಾಯಕ ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು. ಹಳಬರು ಮತ್ತು ಹೊಸಬರು ಎನ್ನದೆ ಎಲ್ಲ...

  • ಸುಮಾರು ಹದಿನೆಂಟು ವರ್ಷಗಳ ಹಿಂದೆ "ಗಟ್ಟಿಮೇಳ' ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬಂದಿದ್ದ ನಿರ್ದೇಶಕ ಎಸ್‌. ಮಹೇಂದರ್‌, ಈಗ "ಶಬ್ಧ' ಚಿತ್ರದಲ್ಲಿ ಮತ್ತೂಮ್ಮೆ...

  • ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅಭಿನಯದ "ತ್ರಿವಿಕ್ರಮ' ಚಿತ್ರ ಶುರುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಸದ್ದಿಲ್ಲದೆಯೇ...

  • ಈ ಹಿಂದೆ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ್‌ ನೇತೃತ್ವದಲ್ಲಿ ಸೆಲೆಬ್ರಿಟಿಗಳನ್ನು ಒಂದೆಡೆ ಸೇರಿಸಿ ಕ್ರಿಕೆಟ್‌ ಪಂದ್ಯ ಶುರುಮಾಡಿದ್ದು ಗೊತ್ತೇ...

  • ಭಾರತ್‌ ಬಾಂಡ್‌ ಎಂಬ ಇ.ಟಿ.ಎಫ್. ಜಾತಿಗೆ ಸೇರಿದ ಮ್ಯೂಚುವಲ್‌ ಫ‌ಂಡು ಕೇವಲ ಸರಕಾರಿ ಸ್ವಾಮ್ಯದ ಕಂಪೆನಿಗಳ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲಿದೆ. ಯಾವ ಸಾಲಪತ್ರಗಳಲ್ಲಿ...