ಭೂಸೇನೆಗೆ ‘ಐಸಿಜಿಎಸ್‌ ಸುಜಿತ್‌’ ಹಸ್ತಾಂತರ

Team Udayavani, May 27, 2019, 6:04 AM IST

ಪಣಜಿ (ವಾಸ್ಕೊ): ಗೋವಾ ಶಿಪ್‌ಯಾರ್ಡ್‌ ಉತ್ತಮ ಗುಣಮಟ್ಟದ ಯುದ್ಧ ನೌಕೆ ತಯಾರಿಸುವ ಮೂಲಕ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದು ಕೇಂದ್ರ ರಕ್ಷಣಾ ಮಂತ್ರಾಲಯದ ಲೇಖಾ ಮಹಾನಿಯಂತ್ರಕ ಸಂಜೀವ ಮಿತ್ತಲ್ ಅಭಿಪ್ರಾಯಪಟ್ಟರು.

ಗೋವಾ ಶಿಪ್‌ಯಾರ್ಡ್‌ಗೆ ಭಾರತೀಯ ಭೂಸೇನೆಯು 5 ಆಪ್‌ಶೋರ್‌ ಪೆಟ್ರೋಲ್ ವೇಸಲ್ ನಿರ್ಮಾಣದ ಗುತ್ತಿಗೆ ನೀಡಿತ್ತು. ಈ ಪೈಕಿ ಎರಡನೇ ನೌಕೆಯನ್ನು ಭೂಸೇನೆಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಎರಡನೇ ಅತ್ಯಾಧುನಿಕ ನೌಕೆಗೆ ‘ಐಸಿಜಿಎಸ್‌ ಸುಜಿತ್‌’ ಎಂದು ಹೆಸರಿಡಲಾಗಿದೆ. ಈ ನೌಕೆಯ ಉದ್ಘಾಟನೆಯನ್ನು ಸಂಜೀವ್‌ ಮಿತ್ತಲ್ ಅವರ ಪತ್ನಿ ಸೀಮಾ ಮಿತ್ತಲ್ ನೆರವೇರಿಸಿದರು. ಭಾರತೀಯ ನೌಕಾದಳದ ಹೆಚ್ಚುವರಿ ಡೈರಕ್ಟರ್‌ ಜನರಲ್ ಕಮಾಂಡರ್‌

ಕೆ.ನಟರಾಜನ್‌, ಗೋವಾ ಪೊಲೀಸ್‌ ಮಹಾಸಂಚಾಲಕ ಪ್ರಣಬ್‌ ನಂದಾ, ಭಾರತೀಯ ನೌಕಾದಳದ ಗೋವಾ ವಿಭಾಗದ ಧ್ವಜಾಧಿಕಾರಿ ರೀಯರ್‌ ಎಡ್ಮಿರಲ್ ಫಿಲಿಪಿನೋಸ್‌ ಇತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ