ಭಾರತೀಯರಿಬ್ಬರ ಶಿರಚ್ಛೇದ

Team Udayavani, Apr 18, 2019, 6:00 AM IST

ಚಂಡೀಗಢ: ಭಾರತೀಯ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್‌ ಮೂಲದ ಸಾತ್ವಿಂದರ್‌ ಕುಮಾರ್‌ ಮತ್ತು ಹರ್ಜೀತ್‌ ಸಿಂಗ್‌ ಎಂಬುವರ ಶಿರಚ್ಛೇದ ಮಾಡಲಾಗಿದೆ ಎಂದು ಸೌದಿ ಅರೇಬಿಯಾ ಸರಕಾರ ತಿಳಿಸಿದೆ. ಇಮಾಮುದ್ದೀನ್‌ ಎಂಬಾತನನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಫೆ. 28ರಂದೇ ಮರಣದಂಡನೆ ವಿಧಿಸಲಾಗಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ.ಇಮಾಮುದ್ದೀನ್‌, ಸಾತ್ವಿಂದರ್‌ ಮತ್ತು ಹರ್ಜೀತ್‌ ಸಿಂಗ್‌ ನಡುವೆ ಲೂಟಿ ಮಾಡಿಕೊಂಡು ಬಂದಿದ್ದ ಹಣ ಹಂಚುವ ವಿಚಾರದ ಜಗಳ ಇಮಾಮುದ್ದೀನ್‌ನ ಸಾವಿನಲ್ಲಿ ಅಂತ್ಯವಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ