ದಾಂಪತ್ಯಕ್ಕೆ ಕಾಲಿಟ್ಟ ಇರೋಮ್
Team Udayavani, Aug 18, 2017, 8:55 AM IST
ಕೊಡೈಕೆನಾಲ್: ಮಣಿಪುರ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಗುರುವಾರ ಕಡೆಗೂ ತಮ್ಮ ದೀರ್ಘಕಾಲೀನ ಪ್ರಿಯಕರನ ಕೈಹಿಡಿದರು. ಇಲ್ಲಿನ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಇರೋಮ್ ಮತ್ತು ಬ್ರಿಟಿಷ್ ಪ್ರಜೆ ಡೆಸ್ಮಂಡ್ ಕುಟಿನ್ಹೊ ವಿಶೇಷ ವಿವಾಹ ಕಾಯ್ದೆ ಅಡಿ ದಾಂಪತ್ಯಕ್ಕೆ ಕಾಲಿಟ್ಟರು. ಸರಳ ಸಮಾರಂಭದಲ್ಲಿ ಸಬ್ರಿಜಿಸ್ಟ್ರಾರ್ ರಾಧಾಕೃಷ್ಣನ್ ಹಾಗೂ ಬೆರಳೆಣಿಕೆಯ ಗೆಳೆಯರ ಸಮ್ಮುಖದಲ್ಲಿ ಡೆಸ್ಮಂಡ್ ಅವರು ಇರೋಮ್ ಬೆರಳಿಗೆ ಉಂಗುರ ತೊಡಿಸಿದರು. ಆದರೆ ಇರೋಮ್ ಕುಟುಂಬದವರಾಗಲೀ, ಡೆಸ್ಮಂಡ್ ಕುಟುಂಬದವರಾಗಲೀ ಉಪಸ್ಥಿತರಿರಲಿಲ್ಲ.
ಕೊಡೈಕೆನಾಲ್ನಲ್ಲಿ ನೆಲೆಸುವ ಕುರಿತು ಸಂತಸ ವ್ಯಕ್ತಪಡಿಸಿರುವ ಶರ್ಮಿಳಾ, “ನಾನು ಹುಡುಕುತ್ತಿದ್ದ ಶಾಂತಿ ನನಗೆ ಇಲ್ಲಿ ಸಿಕ್ಕಿದೆ’ ಎಂದಿದ್ದಾರೆ. ಇವರಿಗೆ ಹಲವಾರು ಆದಿವಾಸಿಗಳು ಬೆಂಬಲ ಸೂಚಿಸಿದ್ದಾರೆ.