ರಕ್ತಹೆಪ್ಪುಗಟ್ಟಿಸೋ ಹಿಮಪಾತದ ನಡುವೆ ಗಡಿನಿಯಂತ್ರಣ ರೇಖೆಯಲ್ಲಿ ಸೈನಿಕರ ಕ್ರಿಸ್ಮಸ್ ಸಂಭ್ರಮ
50-60 ಭಾರತೀಯ ಸೈನಿಕರು ಕ್ರಿಸ್ಮಸ್ ಕ್ಯಾರೋಲ್ಸ್, ಜಿಂಗಲ್ ಬೆಲ್ಸ್ ಹಾಡುವ ಮೂಲಕ ಸಂಭ್ರಮಿಸುತ್ತಿರುವ ದೃಶ್ಯ
Team Udayavani, Dec 25, 2019, 3:14 PM IST
ನವದೆಹಲಿ: ಇತ್ತೀಚೆಗೆ ಕಾಶ್ಮೀರದ ಗಡಿ ನಿಯಂತ್ರಣ (ಎಲ್ ಒಸಿ) ರೇಖೆ ಸಮೀಪ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯನ್ನು ಮತ್ತು ಉಗ್ರರ ನುಸುಳುವಿಕೆಯನ್ನು ತಡೆದು ಹಿಮ್ಮೆಟ್ಟಿಸಲಾಗಿದೆ. ಮತ್ತೊಂದೆಡೆ ಭಾರತೀಯ ಸೈನಿಕರ ಸಂಭ್ರಮ, ಸಂದೇಶವನ್ನು ಹರಡುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಗಡಿ ನಿಯಂತ್ರಣ ರೇಖೆ ಸಮೀಪ ಸುಮಾರು 50-60 ಭಾರತೀಯ ಸೈನಿಕರು ಪ್ರೀತಿಯನ್ನು ಸಾರುವ ಕ್ರಿಸ್ಮಸ್ ಕ್ಯಾರೋಲ್ಸ್, ಜಿಂಗಲ್ ಬೆಲ್ಸ್ ಹಾಡುವ ಮೂಲಕ ಸಂಭ್ರಮಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ರಕ್ತ ಹೆಪ್ಪುಗಟ್ಟಿಸುವ ಹಿಮಪಾತ, ಶೂನ್ಯ ಉಷ್ಣಾಂಶದ ಅತೀ ಎತ್ತರದ ಗಡಿ ನಿಯಂತ್ರಣ ರೇಖೆಯ ಪ್ರದೇಶದಲ್ಲಿ ಸೈನಿಕರು ಕ್ರಿಸ್ಮಸ್ ಸಂಭ್ರಮವನ್ನಾಚರಿಸುವುದು ಸುಲಭದ ಕೆಲಸವಲ್ಲ ಎಂದು ವರದಿ ತಿಳಿಸಿದೆ. ಪ್ರತಿಭಾನ್ವಿತ ಸೈನಿಕರ ಗಾಯಕರ ತಂಡ ಚಪ್ಪಾಳೆ ತಟ್ಟುತ್ತಾ, ಜತೆಗೆ ಸಾಂತಾ ಕ್ಲಾಸ್ ಕೂಡಾ ಹೆಜ್ಜೆ ಹಾಕುತ್ತಿರುವುದು ವಿಡಿಯೋದಲ್ಲಿದೆ.
Christmas cheer near the LoC in Kashmir! Do watch. pic.twitter.com/A9mWPe7hOm
— Rahul Singh (@rahulsinghx) December 25, 2019
130 ಸೆಕೆಂಡುಗಳ ವಿಡಿಯೋದಲ್ಲಿ ಅಸ್ಸಾಂ ರೆಜಿಮೆಂಟ್ ಸೈನಿಕರು ಹಿಮಪಾತದದ ನಡುವೆಯೇ ಕ್ರಿಸ್ಮಸ್ ಸಂಭ್ರಮದಲ್ಲಿ ತೊಡಗಿದ್ದು, ಅಸ್ಸಾಂ ರೆಜಿಮೆಂಟ್ ನ ಸಂಕೇತವಾದ ಖಡ್ಗಮೃಗದ ಸಂಕೇತವನ್ನು ಹಿಮದಲ್ಲಿಯೇ ರಚಿಸಿ ಅದರ ಸುತ್ತ ಹಾಡುತ್ತಿರುವುದು ದೃಶ್ಯದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್