ಶಿಕ್ಷಿತ ಪ್ರಧಾನಿಯನ್ನು ಜನ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ: ಕೇಜ್ರಿ

Team Udayavani, May 31, 2018, 3:30 PM IST

ಹೊಸದಿಲ್ಲಿ : ದೇಶದ ಜನರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಂತಹ ಶಿಕ್ಷಿತ ಪ್ರಧಾನಿಯನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೊಸ ವಾಗ್ಧಾಳಿ ಆರಂಭಿಸಿದ್ದಾರೆ.

ದೇಶದ ಜನರು ಡಾ. ಮನಮೋಹನ್‌ ಸಿಂಗ್‌ ಅವರಂತಹ ಶಿಕ್ಷಿತ ಪ್ರಧಾನಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಷ್ಟವನ್ನು ಜನರೀಗ ಅರ್ಥ ಮಾಡಿಕೊಳ್ಳುತ್ತಿದ್ದಾರೆ; ಪ್ರಧಾನಿ ಓದು ಬರಹ ಬಲ್ಲ ವ್ಯಕ್ತಿಯಾಗಿರಬೇಕು ಎಂದವರು ಈಗ ತಿಳಿಯುತ್ತಿದ್ದಾರೆ ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಡಾಲರ್‌ ಎದುರು ಕುಸಿಯುತ್ತಿರುವ ರೂಪಾಯಿಯಿಂದಾಗಿ ಮುಂಬರುವ ವರ್ಷಗಳಲ್ಲಿ ದೇಶದಲ್ಲಿನ ಹೂಡಿಕೆಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನು  ಕೇಜ್ರಿವಾಲ್‌ ತಮ್ಮ ಟ್ವೀಟ್‌ನಲ್ಲಿ ಸುದ್ದಿ ಬರಹವೊಂದನ್ನು ಉಲ್ಲೇಖೀಸಿ ಹೇಳಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ