ಶಬರಿಮಲೆಗೆ ರೈಲು ಸಂಪರ್ಕ ಕಲ್ಪಿಸಲು ಕೇರಳ ಸರಕಾರ ಹಿಂದೇಟು

Team Udayavani, Jan 12, 2020, 8:54 PM IST

ನವದೆಹಲಿ: ಪುಣ್ಯಕ್ಷೇತ್ರ ಶಬರಿಮಲೆಗೆ ರೈಲ್ವೆ ಸಂಪರ್ಕ ಕಲ್ಪಿಸಲು ಕೇರಳ ಸರ್ಕಾರ ಸಹಕಾರ ನೀಡುತ್ತಿಲ್ಲ. ಸಾಕಷ್ಟು ವಿಳಂಬ ಮಾಡುತ್ತಿರುವುದರಿಂದ ಭಾರೀ ವೆಚ್ಚ ಭರಿಸಬೇಕಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದಿರುವ ಅವರು, ಶಬರಿಮಲೆ ಸಮೀಪ ಯಾವುದೇ ರೈಲ್ವೆ ನಿಲ್ದಾಣವಿಲ್ಲ. ಕೊಟ್ಟಾಯಂ, ತಿರುವಳ್ಳ, ಚೆಂಗನೂರು ರೈಲ್ವೆ ನಿಲ್ದಾಣಗಳು ಶಬರಿಮಲೆಯಿಂದ 90 ಕಿ.ಮೀ. ದೂರ ಇವೆ. 1997ರಲ್ಲಿ 111 ಕಿ.ಮೀ. ಉದ್ದದ ಅಂಗಮಾಲಿ-ಶಬರಿಮಲೆ ರೈಲ್ವೆ ಸಂಪರ್ಕಕ್ಕೆ ಯೋಜನೆ ರೂಪಿಸಲಾಗಿತ್ತು. ಅಂದು ಇದಕ್ಕೆ 550 ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ, ವಿಳಂಬದಿಂದ ಇಂದು ಈ ವೆಚ್ಚವು 1,566 ಕೋಟಿ ರೂ. ತಲುಪಿದೆ. ಶೇ. 512ರಷ್ಟು ವೆಚ್ಚ ಏರಿಕೆಯಾಗಿದೆ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ