ನಿಪಾ ಸೋಂಕು ದೃಢ: 311 ಮಂದಿ ಮೇಲೆ ನಿಗಾ
ಕೇರಳದ 2 ಜಿಲ್ಲೆಗಳಲ್ಲಿ ಮತ್ತೆ ಶುರುವಾದ ಆತಂಕ
Team Udayavani, Jun 5, 2019, 6:00 AM IST
ಕೊಚ್ಚಿ: ಕೇರಳದ 2 ಜಿಲ್ಲೆಗಳಿಗೆ ಮಾರಣಾಂತಿಕ ನಿಪಾ ಸೋಂಕು ವಕ್ಕರಿಸಿರುವುದು ದೃಢ ಪಟ್ಟಿದ್ದು, ರಾಜ್ಯಾದ್ಯಂತ ಆತಂಕ ಸೃಷ್ಟಿಯಾಗಿದೆ. ನಿಪಾ ಸೋಂಕಿನ ಲಕ್ಷಣಗಳಿದ್ದ 23 ವರ್ಷದ ಕಾಲೇಜು ವಿದ್ಯಾರ್ಥಿಗೆ ಅದೇ ಸೋಂಕು ತಗುಲಿ ರುವುದು ನಿಜ ಎಂದು ಪ್ರಯೋಗಾಲಯಗಳ ವರದಿಯಿಂದ ಮಂಗಳವಾರ ಸ್ಪಷ್ಟವಾಗಿದೆ.
ಇದೇ ವೇಳೆ, ಯುವಕನಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ಇಬ್ಬರು ನರ್ಸ್‌ಗಳಿಗೂ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದು, ಇವರಿಗೂ ಚಿಕಿತ್ಸೆ ಆರಂಭಿಸಲಾಗಿದೆ. ಎರ್ನಾಕುಳಂನ ಮತ್ತೂಬ್ಬ ಯುವಕನನ್ನೂ ಪ್ರತ್ಯೇಕ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಅಲ್ಲದೆ, ಸೋಂಕು ತಗುಲಿದ ಯುವಕನ ಜತೆ ಸಂಪರ್ಕದಲ್ಲಿದ್ದ 311 ಮಂದಿಯ ಪಟ್ಟಿ ಸಿದ್ಧಪಡಿಸಲಾಗಿದ್ದು, ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುವಕನು ಎರ್ನಾಕುಲಂ ಜಿಲ್ಲೆಯವನಾಗಿದ್ದು, ಇಡುಕ್ಕಿ ಜಿಲ್ಲೆಯ ತೋಡುಪುಳದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಹೀಗಾಗಿ ಈ ಎರಡು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ ಸ್ಥಿರ: 2 ದಿನಗಳ ಹಿಂದೆಯೇ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ್ದ ವಿದ್ಯಾರ್ಥಿಯಲ್ಲಿ ನಿಪಾ ಲಕ್ಷಣ ಗೋಚರಿಸಿದ್ದವು. ಕೂಡಲೇ ಆತನ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಹಾಗೂ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಕೇರಳ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿತ್ತು. ಇದೀಗ ಆತನಿಗೆ ನಿಪಾ ಸೋಂಕು ಇರುವುದು ವರದಿಯಲ್ಲಿ ದೃಢ ಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಸಚಿವೆ ಶೈಲಜಾ ತಿಳಿಸಿದ್ದಾರೆ.
ಕೇಂದ್ರದ ತಂಡ ರವಾನೆ
ನಿಪಾ ಸೋಂಕು ವಿಚಾರ ದೃಢವಾಗು ತ್ತಿದ್ದಂತೆ ಕೇಂದ್ರದ 6 ಮಂದಿ ತಜ್ಞರ ತಂಡವು ಕೇರಳಕ್ಕೆ ಧಾವಿಸಿದೆ. ಜತೆಗೆ, ರಾಜ್ಯಕ್ಕೆ ಅಗತ್ಯವಾದ ಎಲ್ಲ ನೆರವು ಒದಗಿಸುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಈ ನಡುವೆ, ಮಂಗಳವಾರ ಮಾತನಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, “ಯಾರೂ ಆತಂಕಕ್ಕೆ ಒಳಗಾಗ ಬೇಡಿ. ನಾವು ಕೇಂದ್ರ ಆರೋಗ್ಯ ಸಚಿವಾಲ ಯದೊಂದಿಗೆ ನಿರಂತರ ಸಂಪರ್ಕದಲ್ಲಿ ದ್ದೇವೆ. ಎಲ್ಲ ಸವಾಲುಗಳನ್ನು ಎದುರಿಸಲೂ ಸನ್ನದ್ಧರಾಗಿದ್ದೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್ ರೆಕಗ್ನಿಷನ್ ಇನ್ನು ಅಧಿಕೃತ ಪುರಾವೆ
ಶಾಲೆಗೆ ಬಣ್ಣ ಬಳಿಯುವ ವಿಚಾರದಲ್ಲಿ ಜೆಎಂಎಂ-ಬಿಜೆಪಿ ವರ್ಣ ಕದನ
ವಸುಂಧರಾ ಇಲ್ಲದೆ ನಡೆಯಲಿದೆ ಚುನಾವಣೆ? ರಾಜ್ಯ ಬಿಜೆಪಿ ಅಧ್ಯಕ್ಷರು ಹೇಳಿದೆನು?
ಮಳೆಗೆ ಬಳಲಿದ ಅಸ್ಸಾಂ; ನಿಲ್ಲದ ಪ್ರವಾಹ ಪ್ರಕೋಪ; ರಕ್ಷಣಾ ಕಾರ್ಯ
ಇ-ವಾಹನ ಬಳಕೆಗೆ ಮುಂದಾದ ಮೆಘಾಲಯ ಸಿಎಂ ಕಾನ್ರಾಡ್ ಸಂಗ್ಮಾ