ಅನುಷ್ಕಾಗೆ ರಿಜಿಜು ಬೆಂಬಲ

Team Udayavani, Jun 19, 2018, 12:09 PM IST

ಹೊಸದಿಲ್ಲಿ: ಮುಂಬಯಿನಲ್ಲಿ ಐಷಾರಾಮಿ ಕಾರಲ್ಲಿ ಕುಳಿತು ರಸ್ತೆಯ ಮೇಲೆ ಕಸ ಚೆಲ್ಲಿದ ವ್ಯಕ್ತಿಗೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಬೈದು ವಿಡಿಯೋ ಬಿಡುಗಡೆ ಮಾಡಿದ ವಿಚಾರ ಸಂಬಂಧ ಕೇಂದ್ರ ಸಚಿವ ಕಿರಣ್‌ ರಿಜಿಜು ಮಾತ ನಾಡಿದ್ದು, ಅನುಷ್ಕಾರನ್ನು ಬೆಂಬಲಿಸಿದ್ದಾರೆ. ಅನುಷ್ಕಾ ಹಾಗೂ ಕೊಹ್ಲಿ ದಂಪತಿಗೆ ಜನಪ್ರಿಯತೆ ಅಗತ್ಯವಿಲ್ಲ. ಅವರು ಗೌಪ್ಯತೆ ಬಯಸಬಹುದಿತ್ತು. ನಮ್ಮ ವರ್ತನೆ ನಮ್ಮ ಮನಸ್ಥಿತಿಯನ್ನು ಸೂಚಿಸುತ್ತದೆ. ನೈತಿಕವಾಗಿ ವರ್ತಿಸುವುದು ಶ್ರೀಮಂತಿಕೆ ಹಾಗೂ ಶಿಕ್ಷಣದಿಂದ ಬರುವುದಿಲ್ಲ. ಭಾರತವನ್ನು ಸ್ವತ್ಛವಾಗಿರಿಸೋಣ ಎಂದು ಕಿರಣ್‌ ಟ್ವೀಟ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿತ್ತು. ನಂತರ ಕಸ ಚೆಲ್ಲಿದವನು ನಾನೇ ಎಂದು ಹೇಳಿಕೊಂಡ ಅರ್ಹಾನ್‌ ಸಿಂಗ್‌, ಸಾಮಾನ್ಯ ರಸ್ತೆ ಬದಿಯ ವ್ಯಕ್ತಿಯಂತೆ ಅನುಷ್ಕಾ ಕಿರುಚಾಡಿದ್ದಳು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ