ಮೋದಿ ಹೊಗಳಿಕೆ: ನ್ಯಾ. ಮಿಶ್ರಾ ವಿರುದ್ಧ ಕಿಡಿ

Team Udayavani, Feb 27, 2020, 1:52 AM IST

ಹೊಸದಿಲ್ಲಿ: ಪ್ರಧಾನಿ ಮೋದಿ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾ| ಅರುಣ್‌ ಮಿಶ್ರಾ, ಅತಿಯಾಗಿ ಹೊಗಳಿದ್ದು ತಪ್ಪು ಎಂದು ಬಿಎಐ (ಬಾರ್‌ ಅಸೋಸಿಯೇಷನ್‌ ಆಫ್ ಇಂಡಿಯಾ) ಅಧ್ಯಕ್ಷ ಲಲಿತ್‌ ಭಾಸಿನ್‌ ಹೇಳಿದ್ದಾರೆ. ನ್ಯಾಯಮೂರ್ತಿಗಳು ಯಾವಾಗಲೂ ಕಾರ್‍ಯಾಂಗದೊಂದಿಗೆ ಗೌರವಯುತ ಅಂತರ ಕಾಯ್ದುಕೊಂಡಿರಬೇಕು. ನ್ಯಾಯಮೂರ್ತಿಗಳಾಗಿ ಯೋಗ್ಯರಾಗಿರುವುದರ ಜತೆಗೆ, ಸಾರ್ವಜನಿಕವಾಗಿ ಆ ಭಾವನೆ ಬರಿಸಬೇಕು. ಇಲ್ಲವಾದರೆ ಜನರಿಗೆ ಅನುಮಾನ ಬರುತ್ತದೆ ಎಂದು ಹೇಳಿದ್ದಾರೆ.

ಸರ್ವೋಚ್ಚ ನ್ಯಾಯಮೂರ್ತಿಗಳು, ಕಾರ್ಯಾಂಗದ ವಿರುದ್ಧದ ಪ್ರಕರಣಗಳನ್ನೂ ಇತ್ಯರ್ಥಪಡಿಸಬೇಕಾಗಿರುತ್ತದೆ. ಅಂತಹವರು ಹೀಗೆ ಅತಿಯಾಗಿ ಹೊಗಳುವುದು ಜನರ ನಂಬಿಕೆಯನ್ನು ಅಲ್ಲಾಡಿಸುತ್ತದೆ. ತಾವು ಪಕ್ಷಪಾತಿಯಲ್ಲ ಎನ್ನುವಂತೆ ನ್ಯಾಯಮೂರ್ತಿಗಳ ವರ್ತನೆಯಿರಬೇಕು ಎಂದು ಭಾಸಿನ್‌ ಹೇಳಿದ್ದಾರೆ.

ಫೆ.22ರಂದು ನಡೆದ ಅಂತಾರಾಷ್ಟ್ರೀಯ ನ್ಯಾಯಾಂಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲೇ ನ್ಯಾ| ಮಿಶ್ರಾ ಅವರು ‘ಮೋದಿ ದೂರದೃಷ್ಟಿಯುಳ್ಳ ನಾಯಕ, ಜಾಗತಿಕ ವಾಗಿ ಚಿಂತಿಸಿ ಸ್ಥಳೀಯವಾಗಿ ಜಾರಿ ಮಾಡುವ ನಾಯಕ’ ಎಂದು ಹೊಗಳಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ