ನೋಟು ವಿವಾದ ಬಿಟ್ಟು , ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

Team Udayavani, Jan 1, 2017, 3:45 AM IST

31-NT-4.jpg

ಹೊಸದಿಲ್ಲಿ: ನೋಟು ಅಪಮೌಲ್ಯ ಯೋಜನೆ ಯಿಂದ ಜನರಿಗಾದ ತಲ್ಲಣಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ದೇಶವನ್ನುದ್ದೇಶಿಸಿ ಬಹುನಿರೀಕ್ಷಿತ ಭಾಷಣ ಮಾಡಿದರು. ಆದರೆ ಈ ಭಾಷಣದಲ್ಲಿ ಅಪಮೌಲ್ಯ ಯೋಜನೆ ಜಾರಿಗೆ ನೆರವಾದವರಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರೇ ಹೊರತು, ತತ್‌ಕ್ಷಣಕ್ಕೆ ನೋಟು ರದ್ದತಿಯಿಂದಾಗಿರುವ ಬಿಸಿ ತಪ್ಪಿಸುವ ಯಾವುದೇ ಹೊಸ ಕ್ರಮ ಪ್ರಕಟಿಸಲಿಲ್ಲ. ಬ್ಯಾಂಕ್‌ಗಳಲ್ಲಿ ಹಣ ಹಿಂಪಡೆಯುವ ಮಿತಿ ಹೆಚ್ಚಳ ಸಹಿತ ಕೆಲವು ಯೋಜನೆಗಳ ಬಗ್ಗೆ ಜನ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರಾದರೂ ಅದ್ಯಾವುದೂ ಘೋಷಣೆ ಆಗಲಿಲ್ಲ.

ಆದರೆ, ಅದರ ಬದ ಲಾಗಿ ರೈತ ಸಮುದಾಯ, ಉದ್ಯಮಿಗಳು, ಹಿರಿ ಯರು, ಬಡ, ಮಧ್ಯಮ ವರ್ಗದ ಜನರು, ಗರ್ಭಿಣಿ ಯರಿಗೆ ನೆರವಾಗುವ ಹಲವು ಯೋಜನೆಗಳನ್ನು ಪ್ರಕಟಿಸಿದರು. ಉತ್ತರ ಪ್ರದೇಶ ಸಹಿತ ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಪ್ರಕಟನೆಗೆ ಕ್ಷಣ ಗಣನೆ ಆರಂಭವಾಗಿರು ವಾಗಲೇ ಪ್ರಕಟಿಸಲಾದ ಈ ಯೋಜನೆಗಳು “ಮಿನಿ ಬಜೆಟ್‌’ ರೂಪದಲ್ಲಿದ್ದು, ಗ್ರಾಮೀಣ ಮತ್ತು ಬಡ ಜನರ ಮತಬುಟ್ಟಿಗಳ ಮೇಲೆ ಕಣ್ಣಿಟ್ಟೇ ಘೋಷಿಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇನ್ನು ಮೋದಿ ಭಾಷಣವನ್ನು ವಿಪಕ್ಷಗಳು ಕಟುವಾಗಿ ಟೀಕಿಸಿದ್ದು, “ಇದೊಂದು ಮಿನಿ ಬಜೆಟ್‌ನಂತಿದೆ. ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮೋದಿ ಈ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಜನ ನಿರೀಕ್ಷೆ ಇಟ್ಟುಕೊಂಡಿದ್ದ ಅಪಮೌಲ್ಯದ ಸಂಕಷ್ಟ ನಿವಾರಿಸುವ ಯಾವುದೇ ಕ್ರಮಗಳನ್ನು ಮೋದಿ ಪ್ರಕಟಿಸಲಿಲ್ಲ’ ಎಂದು ಟೀಕಿಸಿವೆ. ಇದೇ ವೇಳೆ ಈ ಭಾಷಣ, ಅಪಮೌಲ್ಯ ಯೋಜನೆಗೆ ಸಹಕರಿಸಿದ ಜನರಿಗೆ ಧನ್ಯವಾದ ಹೇಳುವ ಒಂದು ಉತ್ತಮ ಪ್ರಯತ್ನ ಎಂದು ಬಿಜೆಪಿ ಬಣ್ಣಿಸಿದೆ.

ಕಠಿನ  ಕ್ರಮ: ಶನಿವಾರ ಸಂಜೆ 7.30ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ನೋಟು ಅಪಮೌಲ್ಯ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು. ಕಾಳಧನ ತಡೆ, ನಕಲಿ ನೋಟುಗಳ ನಿಯಂತ್ರಣ, ಉಗ್ರರಿಗೆ ಹಣ ಪೂರೈಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿತ್ತು. ಇದಕ್ಕೆ ದೇಶದ ಜನ ಅಭೂತಪೂರ್ವ ಪ್ರತಿಕ್ರಿಯೆ ನೀಡಿದರು. ವಿಶ್ವದಲ್ಲಿ ಇಂಥ ಇನ್ಯಾವುದೇ ಉದಾಹರಣೆಯನ್ನು ನಾವು ಕಾಣುವುದು ಸಾಧ್ಯವಿಲ್ಲ. ನೋಟು ನಿಷೇಧದ ಬಳಿಕ ನನಗೆ ಸಾವಿರಾರು ಪತ್ರಗಳು ಬಂದಿವೆ. ಅದರಲ್ಲಿ ಜನ ತಮ್ಮ ನೋವುಗಳನ್ನು ಹಂಚಿಕೊಂಡಿದ್ದಾರೆ. ಆದರೆ ದೇಶದ ಅರ್ಥವ್ಯವಸ್ಥೆಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಳ ಧನದ ಅರ್ಥವ್ಯವಸ್ಥೆಯನ್ನು ಮಟ್ಟಹಾಕಲು ನಮಗೆ ಈ ಕ್ರಮ ಅತ್ಯಗತ್ಯವಾಗಿತ್ತು ಎಂದು ಮೋದಿ ಹೇಳಿದರು.

“ನಮ್ಮ ಸರಕಾರ ಎಂದೆಂದಿಗೂ ಸಜ್ಜನರ ಪರ ವಾಗಿರಲಿದೆ. ಅವರ ಕಷ್ಟಗಳನ್ನು ಪರಿಹರಿಸಲು ಎಲ್ಲ ರೀತಿಯಲ್ಲೂ ನೆರವು ನೀಡಲಿದೆ. ಅದೇ ರೀತಿ ದುರ್ಜನರನ್ನು ಸರಿದಾರಿಗೆ ತರಲು ಅವಕಾಶ ಮಾಡಿಕೊಡಲಿದೆ. ಇದರ ಹೊರತಾಗಿಯೂ ಅದೇ ಹಾದಿಯಲ್ಲಿ ಮುಂದುವರಿಯುವವರು ಸೂಕ್ತ ಕ್ರಮ ಗಳನ್ನು ಎದುರಿಸಲಿದ್ದಾರೆ. ಕಾಳಧನಿಕರಿಗೆ ಮುಂದಿನ ಹಾದಿ ಅತ್ಯಂತ ಕಠಿನವಾಗಿರಲಿದೆ ಎಂದು ಎಚ್ಚರಿಸಿದ ಪ್ರಧಾನಿ, ತಂತ್ರಜ್ಞಾನವು ಕಾಳಧನ ಮಟ್ಟಹಾಕುವಲ್ಲಿ ಮಹತ್ತರ ಪಾತ್ರ ವಹಿಸಿತು’ ಎಂದು ಮೆಚ್ಚಿಕೊಂಡರು.

ಶ್ಲಾಘನೆ: ನೋಟು ಅಪಮೌಲ್ಯದ ವೇಳೆ ಬ್ಯಾಂಕ್‌ ಮತ್ತು ಅಂಚೆ ಇಲಾಖೆಯ ಸಿಬಂದಿಯ ಶ್ರಮವನ್ನು ಶ್ಲಾಷಿಸಿದ ಮೋದಿ, ಕೆಲವು ಅಧಿಕಾರಿಗಳಿಂದಾಗಿ ಬ್ಯಾಂಕ್‌ಗಳಿಗೆ ಕೆಟ್ಟ ಹೆಸರು ಬಂದಿತು. ಅಂಥವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ. ಅದೇ ರೀತಿಯ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಮತ್ತೆ ಮುಂದಿನ ಕೆಲವು ದಿನಗಳಲ್ಲಿ ಹಳೆಯ ಸ್ಥಿತಿಗೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಹೊಸ ಸಂಕಲ್ಪದೊಂದಿಗೆ ಹೊಸ ವರ್ಷಕ್ಕೆ ಕಾಲಿಡೋಣ ಎಂದು ಹೇಳಿದರು.

ವಿಪಕ್ಷಗಳಿಗೆ ಸಲಹೆ: ಇದೇ ವೇಳೆ ನೈತಿಕವಾಗಿಯೇ ನಾವೇ ಇತರರೆಲ್ಲರಿಗಿಂತ ಪರಿಶುದ್ಧರು ಎಂಬ ಭಾವನೆ ಯನ್ನು ಕೈಬಿಟ್ಟು ವಿಪಕ್ಷಗಳು, ಆಡಳಿತದಲ್ಲಿ ಸುಧಾರಣೆ, ಕಪ್ಪು ಹಣ ನಿಗ್ರಹದ ಸರಕಾರದ ಯತ್ನಕ್ಕೆ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.

ಒಮ್ಮೆಲೆ ಚುನಾವಣೆ: ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಸುವ ದಿಕ್ಕಿನಲ್ಲಿ ನಾವು ಸಾಗಬೇಕಿದೆ. ಈ ದಿಶೆಯಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಯಾರಿಗೆ ಏನೇನು? 
ರೈತರಿಗೆ
ಜಿಲ್ಲಾ ಸಹಕಾರಿ ಬ್ಯಾಂಕ್‌ ಮತ್ತು ಸೊಸೈಟಿ ಗಳಿಂದ ಹಿಂಗಾರು ಕೃಷಿ ಸಾಲ ಪಡೆದ ರೈತರಿಗೆ ಅಪಮೌಲ್ಯ ಯೋಜನೆ ಜಾರಿಯಲ್ಲಿದ್ದ 2 ತಿಂಗಳ ಅವಧಿಗೆ ಸಾಲದ ಮೇಲಿನ ಬಡ್ಡಿ ಮನ್ನಾ, ಸರಕಾರದಿಂದಲೇ ಬಡ್ಡಿ ಭರಿಕೆ (ಇದು ವಾಣಿಜ್ಯ ಬ್ಯಾಂಕ್‌ನಲ್ಲಿನ ಹಿಂಗಾರು ಕೃಷಿ ಸಾಲಕ್ಕೆ  ಅನ್ವಯ ಇಲ್ಲ)

ಮುಂದಿನ 3 ತಿಂಗಳಲ್ಲಿ 3 ಕೋಟಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ರುಪೇ ಕಾರ್ಡ್‌ ಗಳನ್ನಾಗಿ ಪರಿವರ್ತನೆ. ಈ ಮೂಲಕ ಎಲ್ಲೆಡೆ ಕಾರ್ಡ್‌ ಬಳಕೆಗೆ ಅವಕಾಶ

ಮನೆ ಕಟ್ಟಲು
ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣ, ದುರಸ್ತಿ, ವಿಸ್ತರಣೆ ಯೋಜನೆಗಳಿಗೆ ಪಡೆ ಯುವ 2 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ. 3 ರಷ್ಟು ಬಡ್ಡಿ ರಿಯಾಯಿತಿ

ನಗರ ಪ್ರದೇಶಗಳಲ್ಲಿ ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆ ಜಾರಿ. ಇದರಡಿ ಮನೆ ನಿರ್ಮಿಸುವವರಿಗೆ 9 ಲಕ್ಷ ರೂ. ವರೆಗೆ ಪಡೆಯುವ ಸಾಲಕ್ಕೆ ಶೇ. 4ರಷ್ಟು ಮತ್ತು 12 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ. 3ರಷ್ಟು ಬಡ್ಡಿ  ರಿಯಾಯಿತಿ.

ಸಣ್ಣ ಉದ್ಯಮ
ಸಣ್ಣ ಉದ್ಯಮಗಳಿಗೆ ನೀಡುವ ನಗದು ಸಾಲ ಮಿತಿಯನ್ನು ಶೇ. 20ರಿಂದ ಶೇ.25ಕ್ಕೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಸೂಚನೆ

ಸಣ್ಣ ಉದ್ಯಮಿಗಳಿಗೆ ಖಾತರಿ ರಹಿತವಾಗಿ ನೀಡುವ ಸಾಲದ ಪ್ರಮಾಣ 1 ಕೋಟಿ ರೂ. ನಿಂದ 2 ಕೋಟಿ ರೂ.ಗೆ ಏರಿಕೆ

ಹಿರಿಯ ನಾಗರಿಕರು
10 ವರ್ಷದ ಅವಧಿಗೆ  7.5 ಲಕ್ಷ ರೂ. ಠೇವಣಿ ಇಡುವವರಿಗೆ ಕನಿಷ್ಠ ಶೇ. 8 ಬಡ್ಡಿ

ಗರ್ಭಿಣಿಯರಿಗೆ
ಗರ್ಭಿಣಿಯರಿಗೆ ವೈದ್ಯಕೀಯ ವೆಚ್ಚ ಭರಿಸಲು ಬ್ಯಾಂಕ್‌ ಖಾತೆಗೆ ನೇರವಾಗಿ 6,000 ರೂ. ಜಮೆ

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.