ನಾಯಿಗೆ ಡ್ರೋನ್ ಲಿಫ್ಟ್ : ಶ್ವಾನ ಮರಿ ರಕ್ಷಣೆಗೆ AI ಬಳಕೆ
Team Udayavani, May 4, 2018, 8:45 AM IST
ಲಕ್ನೋ: ಮುದ್ದು ಮುದ್ದಾದ ನಾಯಿ ಮರಿಗಳೆಂದರೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ಅವುಗಳ ಆಟ ನೋಡುವುದೇ ಚೆಂದ. ಲಕ್ನೋದಲ್ಲಿ ನಾಯಿಮರಿಗಳನ್ನು ಪ್ರೀತಿಸುವ ಯುವಕನೊಬ್ಬ ಮೋರಿಯೊಳಗೆ ಬಿದ್ದಿದ್ದ ನಾಯಿ ಮರಿಯೊಂದನ್ನು ತಾನೇ ತಯಾರಿಸಿದ ಡ್ರೋನ್ ಮೂಲಕ ಮೇಲೆತ್ತಿ ಸುದ್ದಿಯಾಗಿದ್ದಾನೆ.
ಇತ್ತೀಚೆಗೆ, ಎಂದಿನಂತೆ ಮುಂಜಾನೆಯ ವಾಕಿಂಗ್ಗಾಗಿ ತೆರಳಿದ್ದ ಮಿಲಿಂದ್ ರಾಜ್ (27) ಅವರಿಗೆ ಹತ್ತಿರದ ಚರಂಡಿಯಿಂದ ನಾಯಿ ಮರಿಯ ಚೀತ್ಕಾರ ಕೇಳಿದೆ. ಹೋಗಿ ನೋಡಿದಾಗ, ಭಾರೀ ಕೊಚ್ಚೆ ತುಂಬಿದ್ದ ಆ ಚರಂಡಿಯೊಳಕ್ಕೆ ಅದು ಬಿದ್ದಿದ್ದು ಕಂಡಿದೆ. ಚರಂಡಿ ಆಳವಾಗಿದ್ದು, ಕೆಳಗಿಳಿದರೆ ತಾವೇ ಮುಳುಗುವ ಸಂಭವ ಇದ್ದಿದ್ದರಿಂದ ಇದಕ್ಕೆ ಬೇರೊಂದು ಉಪಾಯ ಮಾಡಿದ್ದಾರೆ.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ತೀವ್ರ ಆಸಕ್ತಿ ಹೊಂದಿರುವ ಅವರು ಈಗಾಗಲೇ ಹಲವಾರು ಪುಟ್ಟ ರೋಬೋ ಗಳನ್ನು, ಡ್ರೋನ್ಗಳನ್ನು ತಯಾರಿಸಿದ್ದಾರೆ. ಈ ಅನುಭವದ ಆಧಾರದ ಮೇಲೆ ನಾಯಿಯನ್ನು ಮೇಲೆತ್ತಲು ಆರೇ ಗಂಟೆಯ ಅವಧಿಯಲ್ಲಿ ವಿಶೇಷ ಡ್ರೋನ್ ತಯಾರಿಸಿದ್ದಾರೆ. ನಂತರ, ಡ್ರೋನ್ ಪ್ರಯೋಗಿಸಿ ನಾಯಿ ಮರಿ ಮೇಲೆತ್ತಿದ್ದಾರೆ. ನಾಯಿಮರಿಯನ್ನು ನಯವಾಗಿ ಹಿಡಿಯುವಂಥ ರೋಬೋ ಕೈಗಳು ಹಾಗೂ ಆ ಕೈಗಳಲ್ಲಿನ ನಾಯಿ ಮರಿ ಎದೆಬಡಿತ ದಾಖಲಿಸುವ ಸೆನ್ಸರ್ ಅಳವಡಿಸಿದ್ದು ಡ್ರೋನ್ ನ ವಿಶೇಷವಾಗಿತ್ತಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…