ಗಡೀಪಾರಾದ ಭಾರತೀಯರು ದಿಲ್ಲಿಗೆ

Team Udayavani, Oct 19, 2019, 5:00 AM IST

ಹೊಸದಿಲ್ಲಿ: ಅಮೆರಿಕದೊಳಕ್ಕೆ ನುಸುಳುವ ಉದ್ದೇಶದಿಂದ ಅಕ್ರಮವಾಗಿ ಮೆಕ್ಸಿಕೋ ಗಡಿ ಪ್ರವೇಶಿಸಿದ ಆರೋಪದಲ್ಲಿ ಭಾರತಕ್ಕೆ ಗಡೀಪಾರಾದ ಓರ್ವ ಮಹಿಳೆ ಸಹಿತ 311 ಭಾರತೀಯರು ಶುಕ್ರವಾರ ಹೊಸದಿಲ್ಲಿಗೆ ಬಂದಿಳಿದಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಉದ್ಯೋಗ ಗಿಟ್ಟಿಸಿಕೊಂಡು, ಉತ್ತಮ ಜೀವನ ನಡೆಸುವ ಅವರ ಕನಸು ಭಗ್ನ ಗೊಂಡಿದೆ. 74 ಮಂದಿ ಮೆಕ್ಸಿಕೋ ಅಧಿಕಾರಿಗಳು ಈ 311 ಭಾರತಿಧೀಯರನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತಂದು ಹಸ್ತಾಂತರಿಸಿದ್ದಾರೆ. ಗಡಿ ಪಾರಾದವರ ಪೈಕಿ ಹೆಚ್ಚಿನವರು ಪಂಜಾಬ್‌, ಹರಿಯಾಣ ದ ವರು. ಈ ಪೈಕಿ ಕೆಲವರು 7 ದೇಶ ಗಳನ್ನು ದಾಟಿ ಮೆಕ್ಸಿಕೋ ತಲುಪಿದ್ದರು. ಆರಂಭ ದಲ್ಲಿ ಈಕ್ವೆಡಾರ್‌ಗೆ ತೆರಳಿ, ಅಲ್ಲಿಂದ ಬೇರೆ ಬೇರೆ ದೇಶ ದಾಟಿ ಮೆಕ್ಸಿಕೋ ತಲುಪಿದ್ದರು. “ಪ್ರಯಾಣದ ಅವಧಿ ಯಲ್ಲಿ 7 ದಿನಗಳ ಕಾಲ ಪನಾಮಾದ ದಟ್ಟಾರಣ್ಯ ದಲ್ಲಿ ಕಾಲ್ನಡಿಗೆಯಲ್ಲೇ ಸಾಗಿದ್ದೆವು. ಸೆ. 12ರಂದು ಮೆಕ್ಸಿಕೋ ತಲುಪಿದ್ದೆವು. ಅಮೆರಿಕ ಪ್ರವೇಶಿಸಲು ಇನ್ನೇನು 800 ಕಿ.ಮೀ. ಇದೆ ಎನ್ನು ವಷ್ಟರಲ್ಲಿ ಮೆಕ್ಸಿಕೋ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು, ಗಡಿಪಾರಾದೆವು’ ಎಂದು ಅವರು ಹೇಳಿಕೊಂಡಿದ್ದಾರೆ.

ಮೆಕ್ಸಿಕೋದಿಂದ ಗಡೀಪಾರಾಗಿ ಭಾರತಕ್ಕೆ ಬಂದಿಳಿದ ಯುವಕನೊಬ್ಬ ದುಃಖ ತಾಳಲಾರದೇ ರೋದಿಸಿದಾಗ, ಸಹವರ್ತಿಯೊಬ್ಬ ಸಮಾಧಾನಪಡಿಸಿದ ದೃಶ್ಯ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ