ಮೋದಿಗಿಂತ ರಾಹುಲ್ ಸಮರ್ಥ!: ಶಿವಸೇನೆ
Team Udayavani, Oct 27, 2017, 9:06 AM IST
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅಲೆ ಮಂಕಾಗಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಿ ದೇಶವನ್ನು ಸಮರ್ಥರಿದ್ದಾರೆ ಎಂದಿದೆ ಶಿವಸೇನೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಕ್ಷದ ವಕ್ತಾರ ಸಂಜಯ ರಾವುತ್, “”ಜಿಎಸ್ಟಿ ಜಾರಿಯಿಂದ ಗುಜರಾತ್ನಲ್ಲಿ ಪ್ರತಿರೋಧ ಉಂಟಾಗಿದೆ. ಅದರ ಫಲಿತಾಂಶ ಚುನಾವಣೆಯಲ್ಲಿ ವ್ಯಕ್ತವಾಗಲಿದೆ ಎಂದಿದ್ದಾರೆ.
ಶಿವಸೇನೆಯ ಜತೆಗೆ ಅಷ್ಟೊಂದು ಉತ್ತಮ ಬಾಂಧವ್ಯ ಹೊಂದಿರದ ಬಿಜೆಪಿಗೆ ಈ ಹೇಳಿಕೆ ಕೋಪ ತರಿಸಲಿದೆ. ಕಾಂಗ್ರೆಸ್ ಉಪಾಧ್ಯಕ್ಷರನ್ನು ಪಪ್ಪು ಎಂದು ಕರೆಯುವುದು ಸರಿಯಲ್ಲ. ದೇಶದ ಜನ ಶಕ್ತಿವಂತರಾಗಿದ್ದು ಯಾರನ್ನು ಬೇಕಾದರೂ ಪಪ್ಪುವನ್ನಾಗಿ ಮಾಡಬಹುದು” ಎಂದಿದ್ದಾರೆ.