ದಕ್ಷಿಣಕ್ಕೆ ಮುಂಗಾರು ಕೊರತೆ

Team Udayavani, Apr 5, 2018, 7:00 AM IST

ಹೊಸದಿಲ್ಲಿ: ಖಾಸಗಿ ಹವಾಮಾನ ಸಂಸ್ಥೆ ಯಾದ ಸ್ಕೈಮೆಟ್‌, ಪ್ರಸಕ್ತ ಸಾಲಿನ ಮುಂಗಾರಿನ ಬಗ್ಗೆ ವಿಶ್ಲೇಷಣಾ ವರದಿ ನೀಡಿದೆ. ಅದರಂತೆ, ಈ ವರ್ಷದ ಮುಂಗಾರು ತೃಪ್ತಿದಾಯಕವಾಗಿರಲಿದೆ. ಆದರೆ, ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ತಿಳಿಸಿದೆ. 

ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು, ಕೇರಳ ಭಾಗಗಳು ಕೊಂಚ ಮಳೆ ಕೊರತೆ ಎದುರಿಸಬೇಕಾಗುತ್ತದೆ. ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಮಳೆ ಕೊರತೆ ಕಂಡು ಬರಲಿದ್ದು, ತೆಲಂಗಾಣದಲ್ಲಿ ಮಾತ್ರ ಸಾಮಾನ್ಯ ಮಳೆಯಾಗಲಿದೆ ಎಂದು ಸಂಸ್ಥೆ ಹೇಳಿದೆ. 

ಇನ್ನು, ದೇಶಾದ್ಯಂತ 887 ಮಿಲಿಮೀಟರ್‌ನಷ್ಟು ಮಳೆ ಬೀಳಲಿದೆ ಎಂದು ಹೇಳಿರುವ ಸಂಸ್ಥೆ, ಈ ಬಾರಿ ಬರ ಆವರಿಸುವ ಅವಕಾ ಶವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಜೂನ್‌ನಲ್ಲಿ ಅತಿ ಮಳೆ ಸುರಿಯಲಿದ್ದು, ಜುಲೈನಲ್ಲಿ ಸಾಮಾನ್ಯವಾಗಿ ಸುರಿಯುವ ಮಳೆ, ಆಗಸ್ಟ್‌ ವೇಳೆ ಸಮಾಧಾನಕರವಾಗಿರಲಿದೆ. ಆದರೆ, ಸೆಪ್ಟಂಬರ್‌ನಿಂದ ಮತ್ತೆ ಬಿರುಸು ಪಡೆಯಲಿವೆ. ಒಟ್ಟಾರೆಯಾಗಿ, ಈ ಬಾರಿಯ ನಿರೀಕ್ಷೆಯಲ್ಲಿ ಶೇ. 70ರಷ್ಟು ನಿರೀಕ್ಷೆಯನ್ನು ಈ ಬಾರಿಯ ಮುಂಗಾರು ಮುಟ್ಟಲಿದೆ. ಇದೇ ವೇಳೆ, ಸಾಮಾನ್ಯ ಮುಂಗಾರಿಗಿಂತ ಕೊಂಚ ಉತ್ತಮವಾಗಿ ಮಳೆ ಬೀಳುವ ಸಾಧ್ಯತೆಗಳು ಶೇ. 20ರಷ್ಟು ಹೆಚ್ಚಾಗಿದ್ದು, ಸಾಮಾನ್ಯಕ್ಕಿಂತ ಕಡಿಮೆ ಮಳೆ ಬೀಳುವ ಅವಕಾಶವೂ ಶೇ. 20ರಷ್ಟಿದೆ ಎಂದು ಸಂಸ್ಥೆ ತಿಳಿಸಿದೆ. ಭಾರತೀಯ ಹವಮಾನ ಇಲಾಖೆ ಈ ತಿಂಗಳ ಮಧ್ಯಭಾಗದಲ್ಲಿ ತನ್ನ ಮಂಗಾರು ಕುರಿತ ವರದಿಯನ್ನು ಬಿಡುಗಡೆ ಮಾಡಲಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ