ಅಮೆರಿಕ ವೀಸಾ ಸಿಗಲು ಕಾಯಬೇಕು ಹೆಚ್ಚಿನ ಸಮಯ
Team Udayavani, Nov 1, 2021, 6:40 AM IST
ನವದೆಹಲಿ: ಸದ್ಯಕ್ಕೆ ಅಮೆರಿಕ ವೀಸಾ ಪಡೆಯಲು ಭಾರತೀಯರಿಗೆ ಹೆಚ್ಚಿನ ಸಮಯ ಬೇಕಾಗಬಹುದು ಎಂದು ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.
ನ.8ರಿಂದ ಮೂರು ಮಿಲಿಯ ಮಂದಿ ಭಾರತೀಯರು ಎರಡು ಡೋಸ್ ಲಸಿಕೆ ಪಡೆದ ದಾಖಲೆಗಳ ಸಹಿತ ಪರಿಶೀಲನೆಗೆ ಒಳಗಾಗಬೇಕಾಗಿದೆ. ಹೀಗಾಗಿ, ಅವುಗಳ ಪರಿಶೀಲನಗೆ ಹೆಚ್ಚಿನ ಸಮಯ ಬೇಕಾಗುವ ಸಾಧ್ಯತೆಗಳು ಇವೆ. ಇದರ ಜತೆಗೆ ಕೊರೊನಾ ಸಂಬಂಧಿತ ಸಮಸ್ಯೆಗಳಿಂದಾಗಿ ವೀಸಾ ನೀಡುವ ದಾಖಲೆಗಳನ್ನು ಪರಿಶೀಲಿಸಲು ಹಿಂದಿನ ಸಂದರ್ಭಗಳಲ್ಲಿ ಅಡ್ಡಿ ಉಂಟಾಗಿತ್ತು. ಅವುಗಳನ್ನೆಲ್ಲ ಪ್ರಸಕ್ತ ಸಾಲಿನಲ್ಲಿ ಸರಿಪಡಿಸಲಾಗುತ್ತದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಜನರು ತಾಳ್ಮೆಯಿಂದಾಗಿ ಕಾಯುತ್ತಿರುವುದಕ್ಕೆ ರಾಯಭಾರ ಕಚೇರಿ ಕೃತಜ್ಞತೆ ವ್ಯಕ್ತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಕೊವಿಶೀಲ್ಡ್ಗೆ ಮಾನ್ಯತೆ ನೀಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಅಮೆರಿಕ ಮಾನ್ಯತೆ ನೀಡಿದೆ.
ಇದನ್ನೂ ಓದಿ:ರಾಮನನ್ನು ವಿರೋಧಿಸಿದವರು ನತದೃಷ್ಟದಿಂದ ಬಳಲಿದ್ದಾರೆ: ಯೋಗಿ ಆದಿತ್ಯನಾಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ