ಜಮ್ಮು ಕಾಶ್ಮೀರಕ್ಕೆ ಹೊಸ ಮನ್ವಂತರ

ಲೋಕಸಭೆಯಲ್ಲೂ ವಿಧೇಯಕಕ್ಕೆ ಮನ್ನಣೆ

Team Udayavani, Aug 7, 2019, 6:00 AM IST

s-48

ಮಸೂದೆಗೆ ಒಪ್ಪಿಗೆ ಸಿಕ್ಕ ಬಳಿಕ ಶಾಗೆ ಮೋದಿ ಅಭಿನಂದನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಹೊಸ ಇತಿಹಾಸ ಬರೆದಿರುವ ಕೇಂದ್ರ ಸರ್ಕಾರ, ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ಮತ್ತು 35(ಎ)ಪರಿಚ್ಛೇದವನ್ನು ಬದಿಗೆ ಸರಿಸುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ಲೋಕಸಭೆಯಲ್ಲೂ ಈ ಎರಡೂ ಮಸೂದೆಗಳಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ವಿಧೇಯಕದ ಪರವಾಗಿ 370 ಮತ್ತು ವಿರುದ್ಧವಾಗಿ 70 ಮತಗಳು ಬಿದ್ದಿವೆ. ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಅಮಿತ್‌ ಶಾ ಸೇರಿದಂತೆ ಎಲ್ಲ ಸಂಸದರನ್ನು ಶ್ಲಾಘಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಐತಿಹಾಸಿಕ ನಿರ್ಧಾರದಿಂದ ಗಲಿಬಿಲಿಗೊಂಡಿರುವ ನೆರೆಯ ಪಾಕಿಸ್ತಾನ ಯುದ್ಧದ ಮಾತುಗಳನ್ನಾಡಿದೆ. ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಕೋರಿತಾದರೂ, ಅಮೆರಿಕ, ಯುಎಇಯಂಥ ದೇಶಗಳು ಇದು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಎಂದು ಹೇಳುವ ಮೂಲಕ ಪಾಕ್‌ಗೆ ಭ್ರಮ ನಿರಸನಗೊಳಿಸಿವೆ.

ಸೋಮವಾರವಷ್ಟೇ ರಾಜ್ಯಸಭೆಯಲ್ಲಿ ಸುದೀರ್ಘ‌ ಚರ್ಚೆ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಹಿಂತೆಗೆತ ಮಸೂದೆ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಮಸೂದೆಗೆ ಒಪ್ಪಿಗೆ ಪಡೆದಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಮಂಗಳವಾರ ಬೆಳಗ್ಗೆಯೇ ಲೋಕಸಭೆಯಲ್ಲೂ ಈ ಎರಡೂ ಮಸೂದೆಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶೇಷ ಸ್ಥಾನಮಾನ ತೆಗೆಯುವ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ನಿರ್ಧಾರವನ್ನು ಯಾರಿಂದರೂ ತಡೆಯಲು ಸಾಧ್ಯವಿಲ್ಲ ಎಂದೂ ಖಡಕ್ಕಾಗಿಯೇ ಹೇಳಿದರು. ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡುವಾಗ ಇದರಲ್ಲಿ ಪಿಒಕೆ ಮತ್ತು ಚೀನಾ ಆಕ್ರಮಿತ ಆಕ್ಸಾಯ್‌ ಚಿನ್‌ ಕೂಡ ಬರುತ್ತವೆ ಎಂದೂ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನ ಚೌಧರಿ ಪ್ರಮಾದ

ಮಸೂದೆ ಕುರಿತಂತೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಮಹಾ ಪ್ರಮಾದ ಎಸಗಿಬಿಟ್ಟರು. ಕಾಶ್ಮೀರ ಭಾರತದ ‘ಆಂತರಿಕ’ ಪ್ರದೇಶವಾಗಿರಲಿಲ್ಲ ಎಂದ ಅವರು, ಇದಕ್ಕೆ ಉದಾಹರಣೆಯಾಗಿ, 1948ರಿಂದಲೂ ವಿಶ್ವಸಂಸ್ಥೆ ಕಾಶ್ಮೀರದ ಮೇಲೆ ನಿಗಾ ಇಟ್ಟಿದೆ. ಶಿಮ್ಲಾ ಒಪ್ಪಂದಕ್ಕೆ ಒಳಪಟ್ಟಿದೆ, ಲಾಹೋರ್‌ ಘೋಷಣೆಗೂ ಅನ್ವಯಗೊಳ್ಳುತ್ತದೆ ಎಂದು ಹೇಳಿದರು. ಹೀಗಾಗಿ ಇದು ಆಂತರಿಕ ವಿಷಯವೇ ಅಥವಾ ದ್ವಿಪಕ್ಷೀಯ ವಿಷಯವೇ ಎಂಬುದನ್ನು ನೀವೇ ಸ್ಪಷ್ಟಪಡಿಸಿ ಎಂದು ಕೇಳಿಬಿಟ್ಟರು. ಚೌಧರಿ ಅವರ ಮಾತಿನಿಂದ ಸಿಟ್ಟಿಗೆದ್ದ ಆಡಳಿತ ಪಕ್ಷಗಳ ಸದಸ್ಯರು, ಇದು ಕಾಂಗ್ರೆಸ್‌ ಪಕ್ಷದ ನಿಲುವೇ ಎಂದು ಪ್ರಶ್ನಿಸಿದರು. ಅಮಿತ್‌ ಶಾ ಕೂಡ, ಈ ಕೂಡಲೇ ಕಾಂಗ್ರೆಸ್‌ 370ನೇ ವಿಧಿ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ವಿಚಿತ್ರವೆಂದರೆ, ಅಧೀರ್‌ ರಂಜನ್‌ ಚೌಧರಿ ಅವರ ಈ ಮಾತುಗಳ ಬಗ್ಗೆ ಸ್ವತಃ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೂ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಚೌಧರಿ ಅವರು ಮಾತನಾಡುವಾಗಲೇ ಸೋನಿಯಾ ಅವರು ಸಿಟ್ಟಾಗಿದ್ದನ್ನೂ ಕೆಲವು ಮಾಧ್ಯಮಗಳು ಪ್ರಸಾರ ಮಾಡಿವೆ.

ಪಾಕಿಸ್ತಾನ ಯುದ್ಧದ ಕ್ಯಾತೆ

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದಿರುವ ವಿಚಾರ ಸಂಬಂಧ ಪಾಕಿಸ್ತಾನ ಸಂಪೂರ್ಣವಾಗಿ ಗಲಿಬಿಲಿಗೊಂಡಿದೆ. ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದೇ ನೇರವಾಗಿ ಯುದ್ಧದ ಮಾತುಗಳನ್ನಾಡಿದೆ. ಭಾರತದಲ್ಲಿನ ಕಾಶ್ಮೀರ ನಿರ್ಣಯದ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ವಿಶೇಷ ಸಂಸತ್‌ ಅಧಿವೇಶನದಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮಾತನಾಡಿದ್ದು, ಭಾರತದ ನಿರ್ಣಯವನ್ನು ವಿರೋಧಿಸಿದ್ದಾರೆ. ಇದಷ್ಟೇ ಅಲ್ಲ, ಮತ್ತೂಂದು ಪುಲ್ವಾಮಾ ರೀತಿಯ ದಾಳಿಯಾದರೂ ಆಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದರ ಜತೆಗೆ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ವೇದಿಕೆಗಳನ್ನು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಇನ್ನು ಪಾಕ್‌ ಸೇನಾ ಮುಖ್ಯಸ್ಥರು ಕೂಡ, ಕಾಶ್ಮೀರದ ಜನರಿಗಾಗಿ ಎಂಥ ಸನ್ನಿವೇಶ ಬಂದರೂ ಎದುರಿಸಲು ಸಿದ್ಧರಿರಬೇಕು ಎಂದು ಅಲ್ಲಿನ ಸೈನಿಕರಿಗೆ ಕರೆ ನೀಡಿದ್ದಾರೆ.

ಚೀನಾ ಅಪಸ್ವರ

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿರುವುದಕ್ಕೆ ಚೀನಾ ಯಾವುದೇ ಅಪಸ್ವರ ಎತ್ತಿಲ್ಲ. ಆದರೆ, ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಿರುವುದಕ್ಕೆ ಆಕ್ಷೇಪ ಎತ್ತಿದೆ. ಇನ್ನೂ ಗಡಿ ವಿವಾದ ಬಾಕಿ ಇರುವುದರಿಂದ ಭಾರತ ಇಂಥ ಕ್ರಮಕ್ಕೆ ಮುಂದಾಗಬಾರದಿತ್ತು ಎಂದು ಹೇಳಿದೆ. ಚೀನಾದ ಈ ವಾದವನ್ನು ತಿರಸ್ಕರಿಸಿರುವ ಭಾರತ, ಇದೊಂದು ಆಂತರಿಕ ವಿಷಯ ಎಂದಿದೆ.
ನಾವೆಲ್ಲರೂ ಸೇರಿ, 130 ಕೋಟಿ ಭಾರತೀಯರ ಕನಸು ನನಸು ಮಾಡಲು ಶ್ರಮಿಸೋಣ. ಕಾಶ್ಮೀರದ ಮಸೂದೆಗೆ ಒಪ್ಪಿಗೆ ನೀಡುವ ಮೂಲಕ ಸಂಸದೀಯ ಪ್ರಜಾಪ್ರಭುತ್ವ ದಲ್ಲಿ ಮಹತ್ವದ ಘಳಿಗೆಗೆ ನಾವು ಸಾಕ್ಷಿಯಾಗಿದ್ದೇವೆ.
• ನರೇಂದ್ರ ಮೋದಿ, ಪ್ರಧಾನಿ
370ನೇ ವಿಧಿಯಿಂದಲೇ ಯುವಕರು ಉಗ್ರವಾದದತ್ತ ಹೋಗಿದ್ದು, ಇದರಿಂದಲೇ 41,500 ಮಂದಿ ಸಾವನ್ನಪ್ಪಿದ್ದು. ನಾವು ಐತಿಹಾಸಿಕ ತಪ್ಪು ಮಾಡುತ್ತಿಲ್ಲ, ಐತಿಹಾಸಿಕ ತಪ್ಪನ್ನು ಸರಿ ಮಾಡುತ್ತಿದ್ದೇವೆ.
• ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಟಾಪ್ ನ್ಯೂಸ್

1-we-ew-rewr

ಮತ ಮಾರಾಟಕ್ಕಿಲ್ಲ ಎಂದು ಜನಸಂಕಲ್ಪ ಮಾಡಬೇಕು :ಗಣಪತಿ ಸಚ್ಚಿದಾನಂದ ಶ್ರೀ

once upon a time in jamaaligudda

ಧನಂಜಯ್‌ ಹೊಸಚಿತ್ರ ‘ಜಮಾಲಿಗುಡ್ಡ’ ರಿಲೀಸ್‌ ಡೇಟ್‌ ಫಿಕ್ಸ್‌

1-ffsfsd

ಪಾಕ್ ಗಡಿಯಲ್ಲಿ ಬಾಂಬ್‌, ಗ್ರೆನೇಡ್‌ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ

1-dfdfdsf

ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ : ಪ್ರಕರಣ ದಾಖಲು

ಅಕ್ರಮ ಮತಾಂತರ ಆರೋಪ: ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಚಿಕ್ಕಮಗಳೂರು: ಅಕ್ರಮ ಮತಾಂತರ ಆರೋಪ; ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಸುಗುಣೇಂದ್ರ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ffsfsd

ಪಾಕ್ ಗಡಿಯಲ್ಲಿ ಬಾಂಬ್‌, ಗ್ರೆನೇಡ್‌ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ

ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್‌ ರೈಲುಗಳಿಗೆ ಕಲ್ಲು ತೂರಾಟ!

ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್‌ ರೈಲುಗಳಿಗೆ ಕಲ್ಲು ತೂರಾಟ!

three arrested for ‘Shaktimaan’-style bike stunt

ಶಕ್ತಿಮಾನ್ ನಂತೆ ಸಾಹಸ ಪ್ರದರ್ಶನ ಮಾಡಲು ಹೋಗಿ ಜೈಲುಪಾಲಾದ ಮೂವರು ಯುವಕರು: ಇಲ್ಲಿದೆ ವಿಡಿಯೋ

thumb 2

ಭಾರತವು ಠಾಕ್ರೆ- ಮೋದಿಗೆ ಸೇರಿದ್ದಲ್ಲ, ಭಾರತವು..: ಅಸಾದುದ್ದೀನ್ ಓವೈಸಿ

BJPಮೋದಿ ಸರ್ಕಾರಕ್ಕೆ 8 ವರ್ಷ: ನಾಳೆಯಿಂದ ಬಿಜೆಪಿ ಜನಸಂಪರ್ಕ ಕಾರ್ಯಕ್ರಮ

ಮೋದಿ ಸರ್ಕಾರಕ್ಕೆ 8 ವರ್ಷ: ನಾಳೆಯಿಂದ ಬಿಜೆಪಿ ಜನಸಂಪರ್ಕ ಕಾರ್ಯಕ್ರಮ

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

13pension

ನೂತನ ಪಿಂಚಣಿ ಯೋಜನೆ ರದ್ದತಿಗೆ ನೌಕರರ ಒಕ್ಕೂಟ ಆಗ್ರಹ

17

ತಿಂಗಳಿಗೆ 4 ಬಾರಿ ಡೀಸಿಗಳ ಭೇಟಿ

freedom-fighters

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಣೀಯ

12takerl

ಟ್ಯಾಟರಲ್‌ ಕಾಮಗಾರಿ ವಿಳಂಬ ಖಂಡಿಸಿ ಪಾದಯಾತ್ರೆ

1-we-ew-rewr

ಮತ ಮಾರಾಟಕ್ಕಿಲ್ಲ ಎಂದು ಜನಸಂಕಲ್ಪ ಮಾಡಬೇಕು :ಗಣಪತಿ ಸಚ್ಚಿದಾನಂದ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.