ಅತ್ಯಾಚಾರ ಪ್ರಕರಣದಲ್ಲಿ 17 ವರ್ಷದ ಬಾಲಕನ ಬಂಧನ, ಬಾಲಕಿ ಕೊಲೆ..!
Team Udayavani, Jun 5, 2022, 5:34 PM IST
ಜೈಪುರ : ನಗರದ ಅಮೇರ್ ಪ್ರದೇಶದಲ್ಲಿ 9 ವರ್ಷದ ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಹಿಂಸಿಸಿ ಕೊಲೆ ಮಾಡಿದ್ದಕ್ಕಾಗಿ ಜಮೀನುದಾರನೋರ್ವನ 17 ವರ್ಷದ ಮಗನನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕೊಲೆ ಮಾಡುವ ಮೊದಲು ಬಾಲಕಿಯ ಮೇಲೆ ಅತ್ಯಾಚಾರವೆಸಗಿರಬಹುದು ಎಂದು ಬಾಲಕಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. 9 ವರ್ಷದ ಬಾಲಕಿ ನಾಪತ್ತೆಯಾದ ಬಳಿಕ ಜೂನ್ 4ರ ಶನಿವಾರದಂದು ಈ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿಯನ್ನು ಹುಡುಕಲು ತೀವ್ರ ಹುಡುಕಾಟ ಪ್ರಾರಂಭವಾಯಿತು. ಇದಾದ ಕೆಲವೇ ದಿನಗಳಲ್ಲಿ ಬಾಲಕಿಯ ಶವ ಆಕೆಯ ಮನೆಯಿಂದ ಕೆಲವು ಮೀಟರ್ ದೂರದಲ್ಲಿ ಶಿಥಿಲಗೊಂಡ ಕಟ್ಟಡದಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಜಮೀನುದಾರನ 17 ವರ್ಷದ ಮಗ ನಾಪತ್ತೆಯಾಗಿದ್ದು, ಪೊಲೀಸರು, ಶೋಧ ಕಾರ್ಯಾಚರಣೆಯ ಮೂಲಕ ಆತನಿರುವ ಲೊಕೇಶನ್ ಪತ್ತೆಹಚ್ಚಲಾಗಿದೆ. ಬಳಿಕ ಆರೋಪಿಗಳನ್ನು ಪೊಲೀಸರು ಬಮದಿಸಿದ್ದು, ವಿಚಾರಣೆ ವೇಳೆ ಆರೋಪಿಗಳು ಬಾಲಕಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಂದೆ ತನ್ನ ದೂರಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದರು.
ಈ ಸಂಬಂಧ ಪೊಲೀಸರು ಸೆಕ್ಷನ್ 302, 375 ಮತ್ತು ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
Arvind Kejriwal ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು
NEET; ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ!: ಚುನಾವಣಾ ಅಸ್ತ್ರ
Uttarakhand; ಕಾಳ್ಗಿಚ್ಚು ತಡೆಗೆ ಮೋಡ ಬಿತ್ತನೆಗೆ ಮೊರೆ?: ಮೂವರ ಸೆರೆ
Tamilnadu ಗಿರಿಧಾಮ ಪ್ರವೇಶಕ್ಕೆ ಇಂದಿನಿಂದ ಇ-ಪಾಸ್ ಕಡ್ಡಾಯ
MUST WATCH
ಹೊಸ ಸೇರ್ಪಡೆ
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ
LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು
Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ