ಗೋದ್ರಾ ಘಟನೆ ವೇಳೆ ನಿತೀಶ್ ಕುಮಾರ್ ಬಿಜೆಪಿಯೊಂದಿಗಿದ್ದರು: ಓವೈಸಿ
ಬೂಟಾಟಿಕೆ; ಯಾರು ಜಾತ್ಯತೀತರು ಮತ್ತು ಯಾರು ಕೋಮುವಾದಿ?
Team Udayavani, Sep 10, 2022, 1:49 PM IST
ಅಹಮದಾಬಾದ್: ”ನಿತೀಶ್ ಕುಮಾರ್ ಬಿಜೆಪಿಯೊಂದಿಗಿದ್ದಾಗ ಸಿಎಂ ಆದರು. ಗೋದ್ರಾ ಹತ್ಯಾಕಾಂಡದ ಸಂದರ್ಭದಲ್ಲಿ ಅವರು ಬಿಜೆಪಿಯೊಂದಿಗಿದ್ದರು” ಎಂದು ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಹೇಳಿಕೆ ನೀಡಿದ್ದಾರೆ.
”ನಿತೀಶ್ 2015 ರಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ತೊರೆದರು, 2017 ರಲ್ಲಿ ಹಿಂತಿರುಗಿದರು ಮತ್ತು ನರೇಂದ್ರ ಮೋದಿ ಅವರನ್ನು ಗೆಲ್ಲಿಸಲು 2019 ರ ಚುನಾವಣೆಯಲ್ಲಿ ಒಂದಾದರು, ಮತ್ತೆ ಮೈತ್ರಿ ತೊರೆದರು. ಮಮತಾ ಬ್ಯಾನರ್ಜಿ ಈ ಹಿಂದೆ ಎನ್‌ಡಿಎಯಲ್ಲಿದ್ದರು ಮತ್ತು ಆರ್‌ಎಸ್‌ಎಸ್ ಅನ್ನು ಹೊಗಳಿದ್ದರು” ಎಂದರು.
”ನಾವು ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿ ಮತ್ತು ಅವರಿಗೆ ನ್ಯಾಯದ ಬಗ್ಗೆ ಮಾತನಾಡುವಾಗ, ನಮ್ಮ ವಿರುದ್ಧ ಅಸಂಬದ್ಧ ಮಾತನಾಡುತ್ತಾರೆ. ಇಂದು ಜಾತ್ಯತೀತತೆಯ ಪರಿಣತರು ಎಂದು ಬಿಂಬಿಸಿಕೊಳ್ಳುವವರು ಯಾರು ಜಾತ್ಯತೀತರು ಮತ್ತು ಯಾರು ಕೋಮುವಾದಿ ಎಂದು ನಿರ್ಧರಿಸುವ ರೀತಿಯಲ್ಲಿ ಇದು ಬೂಟಾಟಿಕೆಯಾಗಿದೆ. ದೇಶವು ಅವರನ್ನು ಗಮನಿಸುತ್ತಿದೆ” ಎಂದರು.