ಒನ್‌ ಮ್ಯಾನ್‌ ಶೋ, ಟೂ ಮೆನ್‌ ಆರ್ಮಿ: ಮೋದಿ, ಶಾ ಬಗ್ಗೆ ಶತ್ರು

Team Udayavani, Dec 14, 2017, 3:54 PM IST

ಹೊಸದಿಲ್ಲಿ : ”ಗುಜರಾತ್‌ ಚುನಾವಣಾ ಪ್ರಚಾರಾಭಿಯಾನದ ಹೊಣೆಗಾರಿಕೆಯನ್ನು ಏಕಾಂಗಿಯಾಗಿ ಹೆಗಲಿಗೇರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರದ್ದು ಒನ್‌ ಮ್ಯಾನ್‌ಶೋ; ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮೋದಿ ಅವರದ್ದು ಟೂ ಮೆನ್‌ ಆರ್ಮಿ ಕಾರ್ಯಶೈಲಿ” ಎಂದು ಬಿಜೆಪಿಯವರೇ ಆಗಿರುವ, ರಾಜಕಾರಣಿಯಾಗಿ ಪರಿವರ್ತಿತರಾಗಿರುವ, ಮಾಜಿ ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ವ್ಯಂಗ್ಯವಾಡಿದ್ದಾರೆ. 

“ಗುಜರಾತ್‌ನಲ್ಲಿ ಒಂದರ ಮೇಲೊಂದು ಟ್ರಿಕ್‌ಗಳು, ಸುಳ್ಳು ಹೇಳಿಕೆಗಳು ಮತ್ತು ಆಗಸದೆತ್ತರದ ಭರವಸೆಗಳನ್ನು ನೀಡಿ ನೀವು ದಣಿದಿರುವುದರಿಂದ ಬೇಗನೆ ದಿಲ್ಲಿಗೆ ಮರಳಬೇಕು ಎಂಬುದು ನನ್ನ ಮನವಿಯಾಗಿದೆ” ಎಂದು ಮೋದಿ ಮತ್ತು ಶಾ ವಿರುದ್ದ ಸಿನ್ಹಾ ಕಟಕಿಯಾಡಿದ್ದಾರೆ. 

“ಗುಜರಾತ್‌ನಲ್ಲಿ ಒಂದೊಮ್ಮೆ ನಾವು ವಿಜಯಿಗಳಾದರೆ, ಅದರ ಫ‌ುಲ್‌ ಕ್ರೆಡಿಟ್‌ ನಿಮಗೇ ಎಂದು ನಮಗೆಲ್ಲ ಗೊತ್ತು. ಕೈಚಪ್ಪಾಳೆ ನಾಯಕನಿಗಾದರೆ, ಬೈಗುಳಗಳು ಕೂಡ ನಾಯಕನಿಗೇ’ ಎಂಬ ಹಳೇ ಮಾತಿದೆ. ಆದರೆ ನಮಗೆ ಗುಜರಾತ್‌ ಚುನಾವಣೆಗಳಲ್ಲಿ ಕೈ ಚಪ್ಪಾಳೆ ಮಾತ್ರವೇ ಸಿಗಲಿ ಎಂದು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ; ಜೈ ಹಿಂದ್‌’ ಎಂದು ಶತ್ರುಘ್ನ ಸಿನ್ಹಾ ವ್ಯಂಗ್ಯವಾಡಿದ್ದಾರೆ. 

ಶತ್ರುಘ್ನ ಸಿನ್ಹಾ ಅವರು ಬಿಜೆಪಿಯಲ್ಲಿ ಬದಿಗೆ ಒತ್ತಲ್ಪಟ್ಟಂದಿನಿಂದಲೂ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ವ್ಯಂಗ್ಯದ, ಟೀಕೆಯ ಮಾತುಗಳನ್ನು ಆಡುವ ಚಾಳಿಯನ್ನೇ ಬೆಳೆಸಿಕೊಂಡಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ