ಈರುಳ್ಳಿಯಿಂದ ಮತ್ತಷ್ಟು ಕಣ್ಣೀರು ! ಕ್ವಿಂಟಾಲಿಗೆ 7100 ರೂ.!

ರಖಂ ಮಾರುಕಟ್ಟೆಯಲ್ಲಿ ಈಗ ಕ್ವಿಂಟಾಲಿಗೆ 7100 ರೂ.!

Team Udayavani, Dec 3, 2019, 7:36 PM IST

ನಾಸಿಕ್‌: ಈರುಳ್ಳಿ ದರ ಏರಿಕೆ ಇನ್ನಷ್ಟು ಆಗುವ ಸಂಭವವಿದ್ದು, ದೇಶದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿ ಕ್ವಿಂಟಾಲ್‌ ಈರುಳ್ಳಿ ಬೆಲೆ 7100 ರೂ. ದಾಟಿದೆ.

ಇದು ಈ ವರ್ಷದ ಅತ್ಯಧಿಕ ದರ ಮಾತ್ರವಲ್ಲದೇ, ಇಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ 72 ವರ್ಷದ ಇತಿಹಾಸದಲ್ಲೇ ಅತ್ಯಧಿಕ ದರವಾಗಿದೆ.
ಇದೇ ವೇಳೆ ಇನ್ನೊಂದು ಅತಿ ದೊಡ್ಡ ಮಾರುಕಟ್ಟೆ ಪಿಂಪಲ್‌ಗಾಂವ್‌ನಲ್ಲಿ ಕೆಂಪು ಈರುಳ್ಳಿ ಬೆಲೆ ಕ್ವಿಂಟಾಲಿಗೆ 7500 ರೂ. ದಾಟಿದೆ. ಗೋಲ್ತಿ ಈರುಳ್ಳಿ ಬೆಲೆ ಕಾಲವಾನ್‌ ಎಪಿಎಂಸಿಯಲ್ಲಿ 9500 ರೂ. ಆಗಿತ್ತು.

ಈಗಾಗಲೇ ರೈತರಲ್ಲಿ ಬೇಸಗೆ ದಾಸ್ತಾನು ಮುಗಿದಿದ್ದು, ಉಳಿದ ಶೇ.15-20ರಷ್ಟು ದಾಸ್ತಾನುಗಳು ಮಾರುಕಟ್ಟೆಗೆ ಪೂರೈಕೆಯಾಗಿವೆ. ಮಹಾರಾಷ್ಟ್ರದಲ್ಲಿ ಕೆಂಪು ಈರುಳ್ಳಿ ಈ ಬಾರಿ ಮಳೆಗೆ ಅತ್ಯಧಿಕ ಹಾನಿಯಾಗಿವೆ. ಶೇ.50ರಷ್ಟು ಬೆಳೆ ಹಾನಿಯಾದ ಅಂದಾಜಿದೆ. ಕರ್ನಾಟಕ, ಗುಜರಾತ್‌, ಆಂಧ್ರಪ್ರದೇಶದಲ್ಲೂ ಮಾರುಕಟ್ಟೆಗೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಈ ಮೊದಲು ಖರೀದಿದಾರರು ಈರುಳ್ಳಿ ಕ್ವಿಂಟಾಲಿಗೆ 500-700 ರೂ. ದರ ವಿಧಿಸುತ್ತಿದ್ದರು. ಈಗ 1200 ರೂ. ಹೇಳುತ್ತಿದ್ದರೂ, ಈರುಳ್ಳಿ ಬರುತ್ತಿಲ್ಲ ಎನ್ನಲಾಗಿದೆ. ಈರುಳ್ಳಿಯ ಈ ಬೆಲೆ ಏರಿಕೆ, ಅಲಭ್ಯತೆಯಿಂದಾಗಿ ಮಾರುಕಟ್ಟೆಯಲ್ಲಿ ಇನ್ನಷ್ಟು ದರ ಏರಿಕೆಯಾಗುವ ಲಕ್ಷಣವಿದೆ. ಸೋಮವಾರ ದಿಲ್ಲಿ, ಕೋಲ್ಕತಾ, ಚೆನ್ನೈ, ಮುಂಬಯಿ, ಒಡಿಶಾ, ಪುಣೆಯಲ್ಲಿ ಈರುಳ್ಳಿ ಕೆ.ಜಿ. ಒಂದಕ್ಕೆ 120-130 ರೂ.ಗಳಂತೆ ಮಾರಾಟವಾಗಿವೆ.

ಕೇಂದ್ರ ಸರಕಾರ ಈಗಾಗಲೇ ವಿದೇಶಗಳಿಂದ ಈರುಳ್ಳಿ ಆಮದಿಗೆ ಯತ್ನಿಸುತ್ತಿದ್ದು, ಟರ್ಕಿ, ಈಜಿಪ್ಟ್ನಿಂದ ಆಮದು ಮಾಡುತ್ತಿದೆ. ಮುಂದಿನ ಭಾಗವಾಗಿ ನೆದರ್ಲೆಂಡ್‌ನಿಂದಲೂ ಯತ್ನಿಸುತ್ತಿದೆ. ಮುಂದಿನ ತಿಂಗಳು ಈಜಿಪ್ಟ್ನಿಂದ 6090ಟನ್‌ ಈರುಳ್ಳಿ, ಟರ್ಕಿಯಿಂದ 11 ಸಾವಿರ ಟನ್‌ ಈರುಳ್ಳಿ ಲಭ್ಯವಾಗಲಿದೆ. ಕಳೆದ ತಿಂಗಳು ಕೇಂದ್ರ ಸರಕಾರ 1.2 ಲಕ್ಷ ಟನ್‌ ಈರುಳ್ಳಿಯನ್ನು ವಿದೇಶದಿಂದ ಆಮದು ಮಾಡಿಕೊಂಡಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ