ಆಂಫಾನ್ ಚಂಡಮಾರುತ ಹಾನಿ ಪ್ರದೇಶ ಸಮೀಕ್ಷೆ; ಪಶ್ಚಿಮಬಂಗಾಳಕ್ಕೆ 1 ಸಾವಿರ ಕೋಟಿ ಪರಿಹಾರ
ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿತ್ತು. ವೈಮಾನಿಕ ಸಮೀಕ್ಷೆ ವೇಳೆ ಪ್ರಧಾನಿ ಜತೆ ಬ್ಯಾನರ್ಜಿ, ಗವರ್ನರ್ ಜಗದೀಪ್ ಸಾಥ್ ನೀಡಿದ್ದರು
Team Udayavani, May 22, 2020, 4:40 PM IST
ಕೋಲ್ಕತಾ: ಆಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೈಮಾನಿಕ ಸಮೀಕ್ಷೆ ನಡೆಸಿದರು. ಶುಕ್ರವಾರ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಮಧ್ಯಂತರವಾಗಿ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಆಂಫಾನ್ ಭೀಕರ ಚಂಡಮಾರುತದಲ್ಲಿ 80 ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿತ್ತು. ವೈಮಾನಿಕ ಸಮೀಕ್ಷೆ ವೇಳೆ ಪ್ರಧಾನಿ ಜತೆ ಬ್ಯಾನರ್ಜಿ, ಗವರ್ನರ್ ಜಗದೀಪ್ ಸಾಥ್ ನೀಡಿದ್ದರು ಎಂದು ವರದಿ ತಿಳಿಸಿದೆ.
ಪಶ್ಚಿಮಬಂಗಾಳಕ್ಕೆ ಮುಂಗಡವಾಗಿ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಿರುವುದಾಗಿ ಪ್ರಧಾನಿ ಮೋದಿ ಉತ್ತರ 24ನೇ ಪರಾಗಣ್ ನ ಬಾಸಿರಾತ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ ಬಳಿಕ ತಿಳಿಸಿದರು. ಆಂಫಾನ್ ನಿಂದ ಹಾನಿಗೊಳಗಾದವರಿಗೆ ಮನೆ ಕಳೆದುಕೊಂಡವರಿಗೆ, ಹಾನಿಗೊಂಡವರಿಗೆ ನೆರವು ನೀಡಲಾಗುವುದು ಎಂದರು.
ಇಂತಹ ಅಗ್ನಿಪರೀಕ್ಷೆ ಸಮಯದಲ್ಲಿ ಕೇಂದ್ರ ಸರ್ಕಾರ ಪಶ್ಚಿಮಬಂಗಾಳದ ಜತೆ ಇರುತ್ತೇವೆ. ನಾವು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಕೆಲಸವನ್ನು ಸಾಧಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನದಿಗೆ ಬಿಯರ್ ಬಾಟಲಿ: ಗೋವಾದಲ್ಲಿ ಪ್ರವಾಸಿಗರ ವಾಹನ ಬೆನ್ನಟ್ಟಿ ದಂಡ !
ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ
ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿ
ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ
ತೆಲಂಗಾಣ: 17 ಮಹಿಳೆಯರ ಹತ್ಯೆ, ಸರಣಿ ಹಂತಕ ಶ್ರೀನಿಗೆ ಜೀವಾವಧಿ ಶಿಕ್ಷೆ