ವಿಶ್ವದ ಅತೀ ಹೆಚ್ಚು ಪ್ರಶಂಸಿತ 10 ನಾಯಕರಲ್ಲಿ ಮೋದಿಗೆ 8ನೇ ಸ್ಥಾನ

Team Udayavani, Apr 12, 2018, 7:35 PM IST

ಹೊಸದಿಲ್ಲಿ : ವಿಶ್ವದಲ್ಲಿ ಅತ್ಯಧಿಕ ಪ್ರಶಂಸೆಗೆ ಪಾತ್ರರಾಗಿರುವ ಹತ್ತು ಅಗ್ರ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಂಟನೇ ಸ್ಥಾನ ಪ್ರಾಪ್ತವಾಗಿದೆ. 

ಮೋದಿ ಅವರು ಈ ಪಟ್ಟಿಯಲ್ಲಿ ಟಿಬೆಟ್‌ ಧರ್ಮಗುರು ದಲಾಯಿ ಲಾಮಾ ಅವರಿಗಿಂತ ಒಂದು ಸ್ಥಾನ ಹಿಂದಿದ್ದಾರೆ; ಐಕಾನಿಕ್‌ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರಿಗಿಂತ ಒಂದು ಸ್ಥಾನ ಮುಂದಿದ್ದಾರೆ. 

ಬಿಲ್‌ ಗೇಟ್ಸ್‌ ಅವರು ಪುರುಷರ ಪಟ್ಟಿಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದ್ದಾರೆ. ಮಹಿಳೆಯರ ಪಟ್ಟಿಯ ಅಗ್ರಸ್ಥಾನವನ್ನು ಏಂಜಲಿನಾ ಜೋಲಿ ಅಲಂಕರಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಪಟ್ಟಿಯಲ್ಲಿ ಕಳೆದ ಬಾರಿಗಿಂತ ಒಂದು ಸ್ಥಾನ ಮುಂದಕ್ಕೆ ಹೋಗಿದ್ದಾರೆ. 

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ (2), ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (4), ರಶ್ಯ ಅಧ್ಯಕ್ಷ  ವ್ಲಾದಿಮಿರ್‌ ಪುಟಿನ್‌ (6) ಈ ಪಟ್ಟಿಯಲ್ಲಿ ವಿರಾಜಿಸಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ