ಈಸ್ಟರ್: ಸೇಕ್ರೆಡ್ ಹಾರ್ಟ್ ಚರ್ಚ್ ಗೆ ಭೇಟಿ ನೀಡಿದ PM Modi ; Watch
Team Udayavani, Apr 9, 2023, 9:49 PM IST
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟರ್ ಹಬ್ಬದ ಪ್ರಯುಕ್ತ ಭಾನುವಾರ ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್ಗೆ ಭೇಟಿ ನೀಡಿದರು.
ಪ್ರಧಾನಿಯೊಬ್ಬರು ಚರ್ಚ್ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ಪ್ರಧಾನಿ ಮೋದಿಯವರ ಭೇಟಿಗೂ ಮುನ್ನ ಫಾದರ್ ಫ್ರಾನ್ಸಿಸ್ ಸ್ವಾಮಿನಾಥನ್ ಹೇಳಿದರು.
#WATCH | Prime Minister Narendra Modi reached Sacred Heart Cathedral Catholic Church in Delhi. pic.twitter.com/RCq9EqslfV
— ANI (@ANI) April 9, 2023
“ಪ್ರಧಾನಿ ನಮ್ಮ ಚರ್ಚ್ಗೆ ಭೇಟಿ ನೀಡುತ್ತಿರುವುದು ರೋಮಾಂಚನಕಾರಿಯಾಗಿದೆ. ಪ್ರಧಾನಿಯೊಬ್ಬರು ಚರ್ಚ್ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ನಾನು ನಂಬುತ್ತೇನೆ” ಎಂದು ಫಾ. ಫ್ರಾನ್ಸಿಸ್ ಸ್ವಾಮಿನಾಥನ್ ಎಎನ್ಐಗೆ ತಿಳಿಸಿದ್ದಾರೆ.
ಇದು ಸಂತೋಷದ ಕ್ಷಣವಾಗಿತ್ತು. ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ನಾವು ಅವರಿಗೆ ಉಡುಗೊರೆಯನ್ನೂ ನೀಡಿದ್ದೇವೆ. ಅವರು ಸಸಿಯೊಂದನ್ನು ಚರ್ಚ್ ಪ್ರಾಂಗಣದಲ್ಲಿ ನೆಟ್ಟರು ಎಂದು ಬಿಷಪ್ ಅನಿಲ್ ಖುತೋ ಹೇಳಿದರು.
ಪ್ರಧಾನಿ ಮೋದಿ ಅವರು ಈಸ್ಟರ್ ಹಬ್ಬದ ಶುಭಾಶಯಗಳನ್ನು ತಿಳಿಸಿ “ಈಸ್ಟರ್ ಶುಭಾಶಯಗಳು! ಈ ವಿಶೇಷ ಸಂದರ್ಭವು ನಮ್ಮ ಸಮಾಜದ ಸಾಮರಸ್ಯದ ಮನೋಭಾವವನ್ನು ಆಳವಾಗಿಸುತ್ತದೆ. ಸಮಾಜಕ್ಕೆ ಮರಳಿ ನೀಡಲು ಮತ್ತು ತುಳಿತಕ್ಕೊಳಗಾದವರಿಗೆ ಅಧಿಕಾರ ನೀಡಲು ಇದು ಜನರನ್ನು ಪ್ರೇರೇಪಿಸಲಿ. ಈ ದಿನ ನಾವು ಭಗವಂತ ಕ್ರಿಸ್ತನ ಧಾರ್ಮಿಕ ಚಿಂತನೆಗಳನ್ನು ನೆನಪಿಸಿಕೊಳ್ಳುತ್ತೇವೆ” ಎಂದು ಟ್ವೀಟ್ ಮಾಡಿದ್ದರು.
ಯೇಸುಕ್ರಿಸ್ತನ ಅದ್ಭುತ ಪುನರುತ್ಥಾನದ ನೆನಪಿಗಾಗಿ ಈಸ್ಟರ್ ಅನ್ನು ಆಚರಿಸಲಾಗುತ್ತದೆ. ದೇಶದಾದ್ಯಂತ, ಚರ್ಚುಗಳು ಮಧ್ಯರಾತ್ರಿ ಈಸ್ಟರ್ ಆಚರಣೆಗಳನ್ನು ನಡೆಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ