15 ದಿನಗಳಲ್ಲಿ ಮೂರು ಬಾರಿ ಪವಾರ್, ಪ್ರಶಾಂತ್ ಕಿಶೋರ್ ಭೇಟಿ! ಬಿಜೆಪಿ ವಿರುದ್ಧ ಹೊಸ ತಂತ್ರ..?


Team Udayavani, Jun 23, 2021, 8:10 PM IST

political-strategist-prashant-kishor-meets-ncp-supremo-sharad-pawar-in-new-delhi

ನವ  ದೆಹಲಿ : ಕಳೆದ ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣೆ ತಂತ್ರಜ್ಙ ಪ್ರಶಾಂತ್ ಕಿಶೋರ್ ಇಂದು(ಬುಧವಾರ, ಜೂನ್ 23) ಎನ್ ಸಿ ಪಿ ಮುಖಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ.

ಪವಾರ್ ಗೃಹದಲ್ಲಿ ಇತರೆ ಆಡಳಿತ ವಿರೋಧಿ ಪಕ್ಷಗಳ ಪ್ರಮೂಕ ನಾಯಕರ ಸಭೆ ನಡೆದ ಬೆನ್ನಲ್ಲೇ ಕಿಶೋರ್, ಪವಾರ್ ಅವರನ್ನು ಭೇಟಿ ಮಾಡಿದ್ದು, ರಾಜಕೀಯ ರಂಗದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ 15 ದಿನಗಳ ಅಂತರದಲ್ಲಿ ಇದು ಪ್ರಶಾಂತ್ ಕಿಶೋರ್ ಹಾಗೂ ಶರದ್ ಪವಾರ್ ಮೂರನೇ ಬಾರಿ ಭೇಟಿ ನೀಡಿದ್ದು, ಆಡಳಿತ ವಿರೋಧಿ ಪಕ್ಷಗಳ ಹೊಸ ಮಹಾ ಘಟಬಂಧನ್ ವೊಂದು ರಚನೆಯಾಗುವ ಸಾಧ್ಯತೆ ಇದೆ ಎನ್ನುವ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ : ಅಲೋಪತಿ ವಿರುದ್ಧ ಹೇಳಿಕೆ: ಎಫ್ ಐಆರ್ ವಿಚಾರಣೆಗೆ ತಡೆ ನೀಡಿ- ಬಾಬಾ ಸುಪ್ರೀಂಗೆ ಮೊರೆ

ಜೂನ್ 11 ರಂದು ಕಿಶೋರ್ ಮುಂಬೈ ನ ತಮ್ಮ ನಿವಾಸದಲ್ಲಿ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು ಹಾಗೂ ಕಳೆದ ಸೋಮವಾರ ನವ ದೆಹಲಿಯಲ್ಲಿ ಪವಾರ್ ನಿವಾಸದಲ್ಲಿ ಹಾಗೂ ಇಂದು ಮತ್ತೆ ಪವಾರ್ ಮನೆಯಲ್ಲೇ ಭೇಟಿಯಾಗಿರುವುದು ಬಿಜೆಪಿ ವಿರುದ್ಧದ ತೃತೀಯ ರಂಗ ಸೃಷ್ಟಿಯಾಗುವುದರ ಬಗ್ಗೆ ಸಭೆ ಎಂದು ಹೇಳಲಾಗುತ್ತಿದೆ.

ಪವಾರ್ ನಿನ್ನೆ(ಮಂಗಳವಾರ, ಜೂನ್ 22) ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ರಾಷ್ಟ್ರೀಯ ಲೋಕ ದಳ ಮತ್ತು ಎಡಪಕ್ಷಗಳನ್ನು ಒಳಗೊಂಡು ಎಂಟು ವಿರೋಧ ಪಕ್ಷಗಳ ನಾಯಕರ ಸಭೆಯನ್ನು ನವ ದೆಹಲಿಯ ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು. ಆದಾಗ್ಯೂ ಆ ಚರ್ಚೆಗಳಲ್ಲಿ ಭಾಗವಹಿಸಿದ ನಾಯಕರು ಸಮಾನ ಮನಸ್ಕ ವ್ಯಕ್ತಿಗಳ “ರಾಜಕೀಯೇತರ” ಸಭೆ ಎಂದು ಪ್ರತಿಪಾದಿಸಿದ್ದರು.

ಇನ್ನು, ಪವಾರ್ ಅವರ ನಿವಾಸದಲ್ಲಿ ನಡೆದ ವಿರೋಧ ಪಕ್ಷದ ನಾಯಕರ ಸಭೆಯಲ್ಲಿ ರಾಷ್ಟ್ರೀಯ ಸಮ್ಮೇಳನದ ಮುಖಂಡ ಒಮರ್ ಅಬ್ದುಲ್ಲಾ, ಎಸ್‌ ಪಿ ಯ ಘನಶ್ಯಾಮ್ ತಿವಾರಿ, ಆರ್‌ ಎಲ್‌ ಡಿ ಅಧ್ಯಕ್ಷ ಜಯಂತ್ ಚೌಧರಿ, ಎಎಪಿಯಿಂದ ಸುಶೀಲ್ ಗುಪ್ತಾ, ಸಿಪಿಐನಿಂದ ಬಿನೊಯ್ ವಿಶ್ವ, ಸಿಪಿಐ-ಎಂನಿಂದ ನಿಲೋತ್ಪಲ್ ಬಸು ಮತ್ತು ಟಿಎಂಸಿ ಉಪಾಧ್ಯಕ್ಷ ಯಶ್ವಂತ್ ಸಿನ್ಹಾ, ಮಾಜಿ ಕಾಂಗ್ರೆಸ್ ಮುಖಂಡ ಸಂಜಯ್ ಝಾ ಮತ್ತು ಜನತಾದಳ-ಯುನೈಟೆಡ್ (ಜೆಡಿ-ಯು) ಮಾಜಿ ನಾಯಕ ಪವನ್ ವರ್ಮಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಒಟ್ಟಿನಲ್ಲಿ, ವಿರೋಧ ಪಕ್ಷಗಳ ಪ್ರಮುಖ ನಾಯಕರ ಈ ಸಭೆ ದೊಡ್ಡ ಪ್ರಮಾಣದಲ್ಲಿ ಕುತೂಹಲ ಮೂಡಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ವಿರೋಧ ಪಕ್ಷದ ನಾಯಕರುಗಳೊಂದಿಗೆ ಆಡಳಿತ ಬಿಜೆಪಿ ವಿರುದ್ಧ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೊಸ ತಂತ್ರ ಹೆಣೆಯಲು ಹೆಜ್ಜೆಯಿಟ್ಟಿದ್ದಾರಾ ..? ಎಂಬ ಪ್ರಶ್ನೆ ಎಬ್ಬಿಸಿದೆ.

ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 6455 ಸೋಂಕಿತರು ಗುಣಮುಖ; 4436 ಹೊಸ ಪ್ರಕರಣ ಪತ್ತೆ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.