ತರಬೇತಿ 30 ಲಕ್ಷ ಮಂದಿಗೆ, ಉದ್ಯೋಗ 3 ಲಕ್ಷ ಮಂದಿಗೆ
Team Udayavani, Sep 22, 2017, 11:35 AM IST
ಹೊಸದಿಲ್ಲಿ: ದೇಶದ ಯುವಕರಿಗೆ ಕೌಶಲ್ಯ ತರಬೇತಿ ನೀಡಬೇಕೆಂದು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ (ಪಿಎಂಕೆವಿವೈ) ಜಾರಿ ಮಾಡಲಾಗಿದೆ. ಆದರೆ ತರಬೇತಿ ಪಡೆದಿರುವ 30 ಲಕ್ಷ ಪೈಕಿ ಉದ್ಯೋಗ ಸಿಕ್ಕಿದ್ದು ಕೇವಲ 3 ಲಕ್ಷ ಮಂದಿಗೆ. 2016ರ ಅ.2ರಂದು ಜಾರಿಯಾದ ಈ ಯೋಜನೆಗೆ ಒಟ್ಟು 12 ಸಾವಿರ ಕೋಟಿ ರೂ. ವಿನಿಯೋಗ ಮಾಡಿ 2016-2020ರ ಒಳಗಾಗಿ ಒಂದು ಕೋಟಿ ಮಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಸದ್ಯ ನಿಗದಿತ ಗುರಿ ತಲುಪಲು ವಿಫಲವಾದ್ದರಿಂದ ಉದ್ಯೋಗ ಸಂಸ್ಥೆಗಳ ಮೇಲೆ ನಿಗಾ ಇರಿಸುವ ಸ್ಥಿತಿಗೆ ಬಂದಿದೆ. ಮಾತ್ರವಲ್ಲ ಜಿಲ್ಲಾ ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಅಲ್ಪಾವಧಿಯ ತರಬೇತಿ ಜಾರಿಗೊಳಿಸಲೂ ಉದ್ದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್