ಪ್ರಿಯಾಂಕಾ ರಾಜಕೀಯ ಪಯಣ ಆರಂಭ; ಪತಿ ವಾದ್ರಾ ಭಾವಪರವಶ


Team Udayavani, Feb 11, 2019, 12:20 PM IST

priyanka-vadra-700.jpg

ಹೊಸದಿಲ್ಲಿ : ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಪಯಣ ಇಂದು ಭರ್ಜರಿ ರೋಡ್‌ ಶೋ ಮೂಲಕ ಆರಂಭವಾಗಿರುವ ಸಂದರ್ಭದಲ್ಲಿ ಆಕೆಯ ಪತಿ ರಾಬರ್ಟ್‌ ವಾದ್ರಾ ಭಾವಪರವಶರಾಗಿದ್ದು ದೇಶದ ಜನರಲ್ಲಿ ತಮ್ಮ ಕೋರಿಕೆ ಮಂಡಿಸಿದ್ದಾರೆ : ‘ಪ್ರಿಯಾಂಕಾಳನ್ನು ನಿಮ್ಮ ಕೈಗೊಪ್ಪಿಸುತ್ತಿದ್ದೇನೆ. ಆಕೆಯ ಸುರಕ್ಷೆಯನ್ನು ದಯವಿಟ್ಟು ನೋಡಿಕೊಳ್ಳಿ’.  ಹೀಗೆಂದು ವಾದ್ರಾ ಟ್ವೀಟ್‌ ಮಾಡಿದ್ದಾರೆ.

ಅಂದ ಹಾಗೆ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಲಕ್ನೋದಲ್ಲಿ ತಮ್ಮ ರಾಜಕೀಯ ಯಾತ್ರೆಯ ಮೊದಲ ಚರಣದಲ್ಲಿ ಭಾರೀ ರೋಡ್‌ ಶೋ ನಡೆಸಿ ತಮಗಿರುವ ಅಪಾರ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ. 

”ರಾಜಕೀಯ ರಂಗ ಅತ್ಯಂತ ಕೆಟ್ಟು ಹೋಗಿರುವ ಇಂದಿನ ದಿನಗಳಲ್ಲಿ  ಪ್ರಿಯಾಂಕಾಳ ಸುರಕ್ಷೆಯನ್ನು ನೋಡಿಕೊಳ್ಳುವಂತೆ ನಿಮ್ಮಲ್ಲಿ (ದೇಶದ ಜನರಲ್ಲಿ) ನಾನು ವಿನಂತಿಸುತ್ತಿದ್ದೇನೆ” ಎಂದು ವಾದ್ರಾ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪತ್ನಿ ಪ್ರಿಯಾಂಕಾಳನ್ನು ವಾದ್ರಾ Perfect Wife  ಎಂದು ಅಪಾರ ಪ್ರೀತಿ, ಮೆಚ್ಚುಗೆಯಿಂದ ಕರೆದಿದ್ದಾರೆ !

ಪ್ರಿಯಾಂಕಾ ಗಾಂಧಿಯನ್ನು ಈಚೆಗಷ್ಟೇ ಪೂರ್ವ ಉತ್ತರ ಪ್ರದೇಶದ ಪ್ರಭಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದ್ದು ಆ ಸಂದರ್ಭದಲ್ಲಿ ವಾದ್ರಾ ಫೇಸ್‌ ಬುಕ್‌ನಲ್ಲಿ ಹೀಗೆ ಬರೆದುಕೊಂಡಿದ್ದರು : ಅಭಿನಂದನೆಗಳು ಪ್ರಿಯಾಂಕಾ; ನಿನ್ನ ಬದುಕಿನ ಪ್ರತಿಯೊಂದು ಹಂತದಲ್ಲಿ ನಾನು ನಿನ್ನ ಜತೆಗಿದ್ದೇನೆ. ನಿನ್ನಿಂದ ಸಾಧ್ಯವಿರುವ ಉತ್ಕೃಷ್ಟತೆಯನ್ನೇ ಕೊಡು !

1997ರಲ್ಲಿ ರಾಬರ್ಟ್‌ ವಾದ್ರಾ – ಪ್ರಿಯಾಂಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.  

ಪ್ರಕೃತ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ ನಿಂದ ಹಣಕಾಸು ಅಕ್ರಮ ಪ್ರಕರಣಗಳ ತನಿಖೆ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕಾ, ಪತಿ ವಾದ್ರಾರನ್ನು ಇ.ಡಿ ಕಾರ್ಯಾಲಯಕ್ಕೆ ತನ್ನ ಕಾರಿನಲ್ಲಿ ಡ್ರಾಪ್‌ ನೀಡಿ ಸುದ್ದಿ ಮಾಡಿದ್ದರು. 

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿಯ ಸರಣಿ – ನೆಮ್ಮದಿಯನ್ನು ಯಾರಿಂದಲೂ ಕಸಿಯಲಾಗದು : ಶಾ

ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿಯ ಸರಣಿ – ನೆಮ್ಮದಿಯನ್ನು ಯಾರಿಂದಲೂ ಕಸಿಯಲಾಗದು : ಶಾ

ಭೂಕುಸಿತ ಪತ್ತೆಗೆ ಹೊಸ ಸ್ವದೇಶಿ ತಂತ್ರಜ್ಞಾನ ಸಿದ್ಧ : ಐಐಟಿ ಮಂಡಿ ರೂಪಿಸಿರುವ ಪಕ್ಕಾ ಸ್ವದೇಶಿ, ಅಗ್ಗದ ತಂತ್ರಜ್ಞಾನ

ಭೂಕುಸಿತ ಪತ್ತೆಗೆ ಹೊಸ ಸ್ವದೇಶಿ ತಂತ್ರಜ್ಞಾನ ಸಿದ್ಧ: ಐಐಟಿ ಮಂಡಿ ರೂಪಿಸಿರುವ ತಂತ್ರಜ್ಞಾನ

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ – ಅಮಿತ್ ಶಾ

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ: ಅಮಿತ್ ಶಾ

ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಯೋಜನೆ ಕಾರ್ಯಕ್ರಮಕ್ಕೆ  ಉತ್ತಮ ಪ್ರತಿಕ್ರಿಯೆ

ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಯೋಜನೆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.