ಹೌಸ್‌ ಲಿಫ್ಟಿಂಗ್‌ ತಂತ್ರಜ್ಞಾನ: ಬಂಗಲೆ 4 ಅಡಿ ಮೇಲಕ್ಕೆ!!


Team Udayavani, Jul 13, 2018, 12:21 PM IST

4550.jpg

ಪುಣೆ: ಪುಣೆಯ ಹಡಪ್ಸರ್‌ನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು 250 ಜ್ಯಾಕ್‌ಗಳನ್ನು ಬಳಸಿ ತಮ್ಮ 2,000 ಚದರ ಅಡಿ ವಿಸ್ತೀರ್ಣದ ಬಂಗಲೆಯ ಎತ್ತರವನ್ನು ಸುಮಾರು 4 ಅಡಿಗಳ ತನಕ ಹೆಚ್ಚಿಸಿದ್ದಾರೆ.  

ಹೌಸ್‌ ಲಿಫ್ಟಿಂಗ್‌ ತಂತ್ರಜ್ಞಾನವನ್ನು ಬಳಸಿ ಮೇಲಕ್ಕೆತ್ತಲಾದ ಈ ಬಂಗಲೆಯನ್ನು ನೋಡಲು ಇದೀಗ ಜನರ ದಂಡು ಹರಿದು ಬರಲಾರಂಭಿಸಿದೆ.  ಸಾಮಾನ್ಯವಾಗಿ ಜ್ಯಾಕ್‌ ಅನ್ನು ಕಾರಿನ ಚಕ್ರ ಬಸಲಾಯಿಸುವ ಸಮಯ ದಲ್ಲಿ ಕಾರನ್ನು ಮೇಲಕ್ಕೆತ್ತಲು ಬಳಸ ಲಾಗುತ್ತದೆ. ಆದರೆ, ಹಡಪ್ಸರ್‌ ಮೂಲದ ಮಹಾಶಯ 250 ಜ್ಯಾಕ್‌ಗಳನ್ನು ಬಳಸಿ ತಮ್ಮ 2,000 ಚದರ ಅಡಿಯ ಬಂಗಲೆಯನ್ನೇ ಮೇಲಕ್ಕೆತ್ತಿಸುವ ಸಾಹಸವನ್ನು ಮಾಡಿದ್ದಾರೆ. ಅಂದಹಾಗೆ ಈ ಮಹಾಶಯನ ಹೆಸರು ಶಿವಕುಮಾರ್‌ ಅಯ್ಯರ್‌. ಹಡಪ್ಸರ್‌ನ ತಾರ್‌ದತ್ತ ಕಾಲೋನಿಯಲ್ಲಿ ಕಳೆದ 18 ವರ್ಷ ಗಳಿಂದ ಇವರ ಬಂಗಲೆ ನೆಲೆಗೊಂಡಿದೆ. ಇಷ್ಟು ವರ್ಷಗಳಲ್ಲಿ ದುರಸ್ತಿ, ಡಾಮರೀಕರಣ, ನವೀಕರಣದಂತಹ ಕೆಲಸಗಳ ಕಾರಣದಿಂದಾಗಿ ಬಂಗಲೆಯ ಎದುರಿನ ರಸ್ತೆಯ ಎತ್ತರವು ನಿರಂತರವಾಗಿ ಹೆಚ್ಚಲಾರಂ ಭಿಸಿತ್ತು ಹಾಗೂ ಅದರಿಂದಾಗಿ ಬಂಗಲೆಯೊಳಗೆ ಮಳೆ ನೀರು ನುಗ್ಗಲಾರಂಭಿಸಿತ್ತು. ಇದರ ಪರಿಣಾಮವಾಗಿ ಈ ಬಂಗಲೆಯಲ್ಲಿ ಯಾರೂ ವಾಸವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಯ್ಯರ್‌ ಬಂಗಲೆಯ ಎತ್ತರವನ್ನು ಹೆಚ್ಚಿಸಲು ಹೌಸ್‌ ಲಿಫ್ಟಿಂಗ್‌ ತಂತ್ರಜ್ಞಾನವನ್ನು ಬಳಸುವ ತೀರ್ಮಾನವನ್ನು ತೆಗೆದುಕೊಂಡರು.

ಈ ಬಗ್ಗೆ ಮಾತನಾಡಿದ ಅಯ್ಯರ್‌, ಬಂಗಲೆಯಲ್ಲಿ ಮಳೆ ನೀರು ಜಮಾವಣೆಯಾದ ಕಾರಣ ನಾನು ಬಹಳ ಚಿಂತಿತನಾಗಿದ್ದೆ. ಈ ಸಮಸ್ಯೆಗೆ ಯಾವ ಪರಿಹಾರವನ್ನು ಸೂಚಿಸಬಹುದು ಎಂಬುದನ್ನು ತಿಳಿಯಲು ನಾವು ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದೆವು ಆಗ ನಮಗೆ ಹೌಸ್‌ ಲಿಫ್ಟಿಂಗ್‌ ತಂತ್ರಜ್ಞಾನದ ಬಗ್ಗೆ ಮಾಹಿತಿ ಸಿಕ್ಕಿತು. ಇದಾದ ಬಳಿಕ ನಾವು ಹರಿಯಾಣ ಮೂಲದ ಕಂಪೆನಿ ಯೊಂದನ್ನು ಸಂಪರ್ಕಿಸಿ ಅವರಿಗೆ ಈ ಕೆಲಸವನ್ನು ವಹಿಸಿದೆವು ಎಂದರು.

ಸುಮಾರು ಒಂದೂವರೆ ತಿಂಗಳ ಹಿಂದೆ ಬಂಗಲೆಯ ಎತ್ತರ ಹೆಚ್ಚಿಸುವ ಕೆಲಸವನ್ನು ಆರಂಭಿಸಲಾಯಿತು. ಈ ತಂತ್ರಜ್ಞಾನದ ಸಹಾಯದಲ್ಲಿ ಬಂಗಲೆಯ ಎತ್ತರವನ್ನು ನಾಲ್ಕು ಅಡಿಗಳ ತನಕ ಏರಿಸಲಾಗುವುದು. ಇದಕ್ಕೆ ಅಂದಾಜು 10 ರಿಂದ 12 ಲ.ರೂ.ಗಳ ವರೆಗೆ ಖರ್ಚಾಗಲಿದೆ. ಆದರೆ, ಇಡೀ ಬಂಗಲೆಯನ್ನು ನೆಲೆಸಮಗೊಳಿಸಿ ಅದರ ಸ್ಥಳದಲ್ಲಿ ಹೊಸ ಬಂಗಲೆಯನ್ನು ಕಟ್ಟಲು ತಗಲುವ ಖರ್ಚಿಗಿಂತ ಇದು ಬಹಳ ಕಡಿಮೆ ಆಗಿದೆ ಎಂಬುದು ಅಯ್ಯರ್‌ ಅವರ ಅಭಿಪ್ರಾಯವಾಗಿದೆ.

ಮನೆಯ ಎತ್ತರವನ್ನು ಹೆಚ್ಚಿಸಲು ಹೌಸ್‌ ಲಿಫ್ಟಿಂಗ್‌ ತಂತ್ರಜ್ಞಾನವನ್ನು ಇಡೀ ವಿಶ್ವದಾದ್ಯಂತ ಬಳಕೆಗೆ ತರಬಹುದಾಗಿದೆ. ಇದರ ಸಹಾಯದಲ್ಲಿ ಮನೆಯ ಫೌಂಡೇಶನ್‌ ಅನ್ನು ಮತ್ತೂಮ್ಮೆ ಇಡಬಹುದಾಗಿ ಅಥವಾ ಮತ್ತೂಮ್ಮೆ ಅದರ ಎತ್ತರವನ್ನು ಹೆಚ್ಚಿಸಬಹುದಾಗಿದೆ. ಹೌಸ್‌ ಲಿಫ್ಟಿಂಗ್‌ ತಂತ್ರಜ್ಞಾನದ ಮೂಲಕ ಮನೆ ಅಥವಾ ಬಂಗಲೆಯನ್ನು ಒಂದರಿಂದ ಹದಿನೈದು ಅಡಿಗಳಷ್ಟು ಎತ್ತರವರೆಗೆ ಏರಿಸ ಬಹುದಾಗಿದೆ. ಇದರಿಂದ ಮನೆಯ ಗೋಡೆ ಅಥವಾ ಆಧಾರ ಸ್ತಂಭಕ್ಕೆ ಯಾವುದೇ ರೀತಿಯ ಅಪಾಯ ಉಂಟಾಗುವುದಿಲ್ಲ. ಪುಣೆಯಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.