
ಸ್ಪರ್ಧೆ ನಡೆಸಿದ ಎರಡೂ ಕ್ಷೇತ್ರಗಳಲ್ಲೂ ಸೋಲಿನತ್ತ ಮುಖಮಾಡಿದ ಪಂಜಾಬ್ ಸಿಎಂ ಚನ್ನಿ
Team Udayavani, Mar 10, 2022, 1:14 PM IST

ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಚುನಾವಣೋತ್ತರ ಸಮೀಕ್ಷೆಯ ವರದಿಯಂತೆ ಆಮ್ ಆದ್ಮಿ ಪಕ್ಷವು ಭಾರೀ ಮುನ್ನಡೆ ಸಾಧಿಸಿದೆ. ಚುನಾವಣೆಗೂ ಮೊದಲು ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.
ಪಕ್ಷದೊಳಗಿನ ತಿಕ್ಕಾಟದ ಕಾರಣದಿಂದ ಕೊನೆಯ ಹಂತದಲ್ಲಿ ಮುಖ್ಯಮಂತ್ರಿ ಪದವಿಗೇರಿದ ಚರಣ್ ಜಿತ್ ಸಿಂಹ್ ಚನ್ನಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿಯೇ ನನ್ನ ಪರವಾಗಿ ಕೆಲಸ ಮಾಡಿಲ್ಲ!: ಗೆದ್ದ ಬಳಿಕ ಮಾನ್ಸೆರಾತ್ ಬಾಂಬ್
ಭದೌರ್ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದ್ದ ಸಿಎಂ ಚನ್ನಿ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಲಾಭ್ ಸಿಂಗ್ ಉಗೊಕೆ ವಿರುದ್ಧ ತೀವ್ರ ಹಿನ್ನಡೆಯಲ್ಲಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗಿನ ಅಪ್ಡೇಟ್ ನಲ್ಲಿ ಆಪ್ ಅಭ್ಯರ್ಥಿ ಉಗೊಕೆ ಅವರು 40,611 ಮತಗಳನ್ನು ಪಡೆದಿದ್ದರೆ, ಚನ್ನಿ ಅವರಿಗೆ ಕೇವಲ 17,768 ಮತಗಳು ಲಭ್ಯವಾಗಿದೆ. ಮೂರನೇ ಸ್ಥಾನದಲ್ಲಿರುವ ಶಿರೋಮನಿ ಅಕಾಲಿದಳದ ಸತ್ನಂ ಸಿಂಗ್ ರಾಹಿಗೆ 14250 ಮತಗಳು ಸಿಕ್ಕಿದೆ.
ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಸ್ಪರ್ಧೆ ಮಾಡಿರುವ ಮತ್ತೊಂದು ಕ್ಷೇತ್ರ ಚಂಕೌರ್ ಸಾಹಿಬ್ ನಲ್ಲಿ ತೀವ್ರ ಸ್ಪರ್ಧೆಯಿದೆ. ಇಲ್ಲಿಯೂ ಚನ್ನಿಗೆ ಆಪ್ ಅಭ್ಯರ್ಥಿಯು ಕಂಟಕವಾಗಿದ್ದಾರೆ. ಸಿಎಂ ಚನ್ನಿ ಅವರು 42,718 ಮತಗಳನ್ನು ಪಡೆದಿದ್ದರೆ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಚರಣ್ ಜಿತ್ ಸಿಂಗ್ ಅವರಿಗೆ 45,612 ಮತಗಳು ಲಭ್ಯವಾಗಿದೆ. ಈ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆಯಿದ್ದು, ಅಂತಿಮ ಮತ ಎಣಿಕೆ ವೇಳೆ ಫಲಿತಾಂಶ ಬದಲಾವಣೆಯಾಗಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ ಇಂದು ನಿರ್ಭೀತ ಮತ್ತು ನಿರ್ಣಾಯಕ, ಸದೃಢ ಸರ್ಕಾರ ಹೊಂದಿದೆ: ರಾಷ್ಟ್ರಪತಿ ಮುರ್ಮು

ಕಾರು – ಬಸ್ ನಡುವೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು

ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೂ ಭಾರತದ ಬಜೆಟ್ ಮೇಲೆ ವಿಶ್ವದ ಚಿತ್ತ ನೆಟ್ಟಿದೆ; ಪ್ರಧಾನಿ ಮೋದಿ

ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು

ಎಲ್ಲಾ ಪ್ಯಾಕ್ಗಳ ಮೇಲೆ ಕಡ್ಡಾಯ ಮಾಹಿತಿ ನಮೂದಿಗೆ ಸೂಚನೆ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಇವರಿಗೆ ಪಕ್ಷದಲ್ಲಿ ಚುನಾವಣೆ ಸಮಿತಿ ಇಲ್ಲವೇ: ಭವಾನಿ ರೇವಣ್ಣ ವಿಚಾರಕ್ಕೆ ಈಶ್ವರಪ್ಪ ವ್ಯಂಗ್ಯ

ಭಾರತ ಇಂದು ನಿರ್ಭೀತ ಮತ್ತು ನಿರ್ಣಾಯಕ, ಸದೃಢ ಸರ್ಕಾರ ಹೊಂದಿದೆ: ರಾಷ್ಟ್ರಪತಿ ಮುರ್ಮು

ಮಂಗಳೂರು: ಮೊಬೈಲ್ ಬಳಸುವಾಗ ತಾಯಿ ಗದರಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 14 ವರ್ಷದ ಬಾಲಕ

ಕಾರು – ಬಸ್ ನಡುವೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು

ಸಿದ್ದು ಹೆಣವನ್ನು ನಾಯಿನೂ ಮೂಸುವುದಿಲ್ಲ, ಅದನ್ನು ನಾವು ಯಾಕೆ ಮುಟ್ಟಬೇಕು: ಈಶ್ವರಪ್ಪ