ಪಿಡಿ ಜತೆ ರಾಹುಲ್ ಕಾರ್‌ ರೈಡ್‌!

Rahul Car Ride with PD!

Team Udayavani, May 30, 2019, 6:00 AM IST

ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ನೊಂದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮನಸ್ಸಿಗೆ ಸಮಾಧಾನ ತಂದುಕೊಳ್ಳಲು ಮಾಡಿದ್ದೇನು ಗೊತ್ತಾ? ತಮ್ಮ ಪ್ರೀತಿಯ ಸಾಕು ನಾಯಿ ‘ಪಿಡಿ’ ಜತೆ ಕಾರ್‌ ರೈಡ್‌ ಹೋಗಿದ್ದು!

ಹೌದು ರಾಹುಲ್ ಅವರು ಹೊಸದಿಲ್ಲಿಯ ತುಘಲಕ್‌ ಲೇನ್‌ನ ತಮ್ಮ ಮನೆಯಿಂದ ಕಾರಿನಲ್ಲಿ ಹೊರಟು, ನಗರದಲ್ಲಿ ಸುತ್ತು ಹಾಕಿದ್ದರು. ಈ ವೇಳೆ, ತಮ್ಮ ಸಾಕು ನಾಯಿ ಪಿಡಿಯನ್ನು ಹಿಂಬದಿ ಸೀಟಿನಲ್ಲಿ ಕೂರಿಸಿದ್ದ ರಾಹುಲ್, ಸ್ವತಃ ಕಾರು ಚಲಾಯಿಸುತ್ತಾ ಸಿಟಿ ರೌಂಡ್ಸ್‌ ಹಾಕುತ್ತಿದ್ದರು.

ರಾಹುಲ್ ಅವರು ಕಾರಲ್ಲಿ ಸಂಚರಿಸುತ್ತಿದ್ದ ಈ ಫೋಟೋವನ್ನು ಅನಿಲ್ ಶರ್ಮಾ ಎಂಬವರು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಇದು ಕೆಲವೇ ಗಂಟೆಗಳಲ್ಲಿ 1600 ಲೈಕ್‌ ಹಾಗೂ 312 ರೀಟ್ವೀಟ್ ಕಂಡಿವೆ.

ರಾಜೀನಾಮೆ ನೀಡದಂತೆ ಮನೆ ಹೊರಗೆ ನಿರಶನ: ಹೀನಾಯ ಸೋಲಿನಿಂದ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ರಾಹುಲ್ ಗಾಂಧಿ ಈಗ ಗೊಂದಲದಲ್ಲಿ ಬೀಳುವಂತಾಗಿದೆ. ರಾಜೀನಾಮೆ ನೀಡದಂತೆ ಒತ್ತಾಯಿಸಿ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಬುಧವಾರ ಅವರ ನಿವಾಸದ ಹೊರಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಪಕ್ಷಕ್ಕೆ ನಿಮ್ಮ ನಾಯಕತ್ವ ಬೇಕು. ರಾಜೀನಾಮೆ ಕೂಡಲೇ ಹಿಂಪಡೆಯಿರಿ ಎಂದು ಅವರು ಒತ್ತಾಯಿಸಿದ್ದಾರೆ. ಕೊನೆಗೆ ದಿಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ. ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್‌ ಅವರೂ ರಾಹುಲ್ ಮನವೊಲಿಸಲು ಯತ್ನಿಸಿ ವಿಫ‌ಲರಾಗಿದ್ದಾರೆ. ಹೀಗಾಗಿ ಅವರೂ ಬೆಂಬಲಿಗರ ಜತೆ ರಾಹುಲ್ ಮನೆ ಹೊರಗೆ ಧರಣಿ ಕೂರಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ...

  • ಹೊಸದಿಲ್ಲಿ: ಸೋಮವಾರದಿಂದ ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಬಿಸಿಸಿಐ ಇನ್ನೂ ಅಂಕಣ ಹೇಗಿರಬೇಕೆಂಬ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಲ್ಲ ಎಂದು ಕ್ಯುರೇಟರ್‌ಗಳು...

  • ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ. ಕೇಂದ್ರ ಸಾರಿಗೆ...

  • ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...

  • ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....