ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ಹುಟ್ಟುಹಬ್ಬದ ಆಚರಣೆಯೇ ಇಲ್ಲ!
Team Udayavani, Sep 11, 2021, 9:00 PM IST
ಧನಬಾದ್: ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಜನ್ಮದಿನ.
ಸಂಘದಲ್ಲಿ ವ್ಯಕ್ತಿಗಿಂತ ತತ್ವಕ್ಕೆ ಆದ್ಯತೆ ನೀಡುವ ನೀತಿಯಂತೆ ಅವರ ಹುಟ್ಟುಹಬ್ಬದ ಆಚರಣೆಯೇ ನಡೆದಿಲ್ಲ!ಇದನ್ನು ಸ್ವತಃ ಭಾಗವತ್ ಖಚಿತಪಡಿಸಿದ್ದಾರೆ.
ಇದು ಎಲ್ಲ ದಿನಗಳಂತೆ ಇನ್ನೊಂದು ದಿನ ಹೊರತು, ಬೇರೆ ವಿಶೇಷ ಆಚರಣೆಗಳೇನಿಲ್ಲ ಎಂದಿದ್ದಾರೆ. ಸೆ.11, 1950, ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಮೋಹನ್ ಭಾಗವತ್ ಜನಿಸಿದ್ದಾರೆ.
ಸದ್ಯ ಜಾರ್ಖಂಡ್ನ ಧನಬಾದ್ನಲ್ಲಿ ಭಾಗವತ್ ಮೂರುದಿನದ ಪ್ರವಾಸದಲ್ಲಿದ್ದಾರೆ. ಈ ಹೊತ್ತಿನಲ್ಲಿ ಅವರು ಎಂದಿನಂತೆ ಸಂಘದ ಶಾಖೆಗೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರೊಂದಿಗೆ ಬೆರೆತಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸಿಗರು 2 ದಶಕ ಅಧಿಕಾರಕ್ಕೆ ಬರುವ ಕನಸು ಕಾಣಬೇಡಿ: ನಳಿನ್